ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ

Viral Video: ಉತ್ತರಾಖಂಡದ ಹಳ್ಳಿಯೊಂದರಲ್ಲಿ ನೀರು ತುಂಬಿದ ಭತ್ತದ ಗದ್ದೆಯನ್ನು ಆನೆಯೊಂದು ಹಾನಿ ಮಾಡಿದೆ. ಹೀಗಾಗಿ ಜನರೆಲ್ಲ ಸೇರಿ ಟಾರ್ಚ್ ಬೆಳಕು ತೋರಿಸಿ ಹಾಗೂ ಜೋರಾಗಿ ಕೂಗಿ ಅದನ್ನು ಓಡಿಸಲು ಯತ್ನಿಸಿದ್ದಾರೆ. ಆದರೆ ಆನೆ ತೀವ್ರವಾಗಿ ಕೆರಳಿದ್ದು ಅಲ್ಲಿದ್ದ ಜನರ ಮೇಲೆಯೇ ದಾಳಿ ನಡೆಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಉತ್ತರಾಖಂಡದ ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ

ಡೆಹ್ರಾಡೂನ್, ಆ. 11: ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆನೆ, ಚಿರತೆ, ಕಾಡು ಕೋಣದಂತಹ ಪ್ರಾಣಿಗಳು ಜನ ವಸತಿ ಪ್ರದೇಶಗಳಿಗೆ ದಾಳಿ ನಡೆಸುತ್ತವೆ. ಇವುಗಳ ಉಪಟಳವನ್ನು ಸಹಿಸಿಕೊಳ್ಳುವುದು ಒಂದೆಡೆಯಾದರೆ ಓಡಿಸಲು ಹೋಗಿ ಪ್ರಾಣಕ್ಕೆ ಅಪಾಯ ತಂದೊಡ್ಡಿರುವ ಘಟನೆಗಳು ಕೂಡ ನಡೆದಿವೆ. ಇದೀಗ ಉತ್ತರಾಖಂಡದ ಹಳ್ಳಿಯೊಂದರಲ್ಲಿ ಇದನ್ನೇ ಹೋಲುವ ಘಟನೆ ನಡೆದಿದೆ. ನೀರು ತುಂಬಿದ ಭತ್ತದ ಗದ್ದೆಯನ್ನು ಆನೆಯೊಂದು ಹಾನಿ ಮಾಡಿದೆ. ಹೀಗಾಗಿ ಜನರೆಲ್ಲ ಸೇರಿ ಟಾರ್ಚ್ ಬೆಳಕು ತೋರಿಸಿ ಹಾಗೂ ಜೋರಾಗಿ ಕೂಗಿ ಓಡಿಸಲು ಯತ್ನಿಸಿದ್ದಾರೆ. ಆದರೆ ಆನೆ ತೀವ್ರವಾಗಿ ಕೆರಳಿದ್ದು ಅಲ್ಲಿದ್ದ ಜನರ ಮೇಲೆಯೇ ದಾಳಿ ನಡೆಸಿದೆ.ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಭತ್ತದ ಗದ್ದೆಯೊಂದರಲ್ಲಿ ಆನೆಯೊಂದು ಸೇರಿದ್ದ ಜನರ ಮೇಲೆ ದಾಳಿ ನಡೆಸುವ ವಿಡಿಯೊ ಇದಾಗಿದೆ. ಜನರು ಟಾರ್ಚ್‌ಗಳನ್ನು ಬಳಸಿ ಓಡಿಸಲು ಪ್ರಯತ್ನಿಸುತ್ತಿರುವಾಗ ಕೆರಳಿದ ಆನೆ ಮೊಣಕಾಲು ಆಳದ ನೀರಿನಲ್ಲೂ ಮುನ್ನುಗ್ಗುತ್ತಿರುವುದು ಕಂಡು ಬಂದಿದೆ. ಮನುಷ್ಯರಿಗೆ ನಡೆಯಲೂ ಕಷ್ಟವಾದ ಕೆಸರು ಮಣ್ಣಿನ ಗದ್ದೆಯಲ್ಲೇ ವೇಗವಾಗಿ ಓಡಿ ಬಂದು ಜನರತ್ತ ನುಗ್ಗಿದೆ.

ವಿಡಿಯೊ ನೋಡಿ:



ಭತ್ತದ ಗದ್ದೆಗೆ ಬಂದಿದ್ದ ಆನೆಯನ್ನು ಓಡಿಸಲೆಂದು ಗ್ರಾಮಸ್ಥರು ನಿರ್ಧರಿಸಿದರು. ಜನರೆಲ್ಲ ಸೇರಿ ಟಾರ್ಚ್ ಬೆಳಕು ತೋರಿಸಿ ಹಾಗೂ ಜೋರಾಗಿ ಕೂಗಿ ಓಡಿಸಲು ಪ್ರಯತ್ನಿಸಿದರು. ಆದರೆ ಒಮ್ಮೆಲೇ ಆನೆ ಜನರತ್ತ ಓಡಿ ಬಂದು ದಾಳಿ ಮಾಡಲು ಮುಂದಾಗಿದೆ. ಆನೆಯ ದಿಢೀರ್ ಆಕ್ರಮಣದಿಂದ ಭಯಗೊಂಡ ಜನರು ಜೀವಭಯದಿಂದ ಓಡಿದ್ದಾರೆ. ಕೆಲವರು ಕೆಸರಿನಲ್ಲಿ ಬಿದ್ದು ಕಾಲ್ತುಳಿತಕ್ಕೊಳಗಾಗಿದ್ದಾರೆ.

ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ

ವೈರಲ್ ಆದ ದೃಶ್ಯದಲ್ಲಿ ಕೆಸರು ನೀರಿನಲ್ಲಿಯೂ ಆನೆ ನೀರು ತುಂಬಿದ ಹೊಲದಲ್ಲಿ ವೇಗವಾಗಿ ಚಲಿಸಿದೆ. ಆನೆಯನ್ನು ಹೆದರಿಸಲು ಜನರ ಗುಂಪು ಪದೇ ಪದೆ ಟಾರ್ಚ್ ಬೀಸುತ್ತಿದ್ದಂತೆ, ಅದು ಇದ್ದಕ್ಕಿದ್ದಂತೆ ಅವರ ಕಡೆಗೆ ಧಾವಿಸಿದೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಿರಿಯ ಅರಣ್ಯಾಧಿಕಾರಿ ಡಾ. ಪಿ.ಎಂ. ಧಾಕತೆ ಮಾತನಾಡಿ, ವನ್ಯಜೀವಿಗಳ ಎದುರಾದಾಗ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಸಲಹೆ ನೀಡಿದ್ದಾರೆ. ʼʼಆನೆ ಕಂಡುಬಂದಾಗ ಜೋರಾಗಿ ಕೂಗುವುದು, ಟಾರ್ಚ್ ಹಾಕುವುದು ಅಥವಾ ಪಟಾಕಿ ಸಿಡಿಸುವುದರಿಂದ ಅವು ಹೆದರಿ ಓಡುವುದಿಲ್ಲ.‌ ಬದಲಿಗೆ ಮತ್ತಷ್ಟು ಕೆರಳಿ ಜೀವಕ್ಕೆ ಅಪಾಯ ಉಂಟು ಮಾಡಬಹುದುʼʼ ಎಂದು ಎಚ್ಚರಿಸಿದ್ದಾರೆ.