ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗ್ರಾಮಕ್ಕೆ ಬಂತು ಮೊದಲ ಸರ್ಕಾರಿ ಬಸ್‌; ಡೋಲು, ನೃತ್ಯದೊಂದಿಗೆ ಸ್ವಾಗತಿಸಿ ಗ್ರಾಮಸ್ಥರು, ವಿಡಿಯೋ ನೋಡಿ

Viral Video: ರಾಜಸ್ಥಾನದ ದೂರದ ಹಳ್ಳಿಯೊಂದಕ್ಕೆ ಇದುವರೆಗೆ ಸರಕಾರಿ ಬಸ್ ನ‌ ಸೌಲಭ್ಯ ಇರಲಿಲ್ಲ, ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳೇ ಕಳೆದರೂ ಸಾರ್ವಜನಿಕ ಸಾರಿಗೆ ಸೌಲಭ್ಯ ವಂಚಿತವಾಗಿದ್ದ ಗ್ರಾಮಕ್ಕೆ ಕೊನೆಗೂ ಬಸ್ ನ ಆಗಮನ‌ವಾಗಿದೆ. ಸ್ವಾತಂತ್ರ್ಯ ಪಡೆದು 79 ವರ್ಷಗಳ ನಂತರ ತಮ್ಮ ಪ್ರದೇಶದಲ್ಲಿ ಮೊದಲ ಸರ್ಕಾರಿ ಬಸ್ ಅನ್ನು ಗ್ರಾಮದ ನಿವಾಸಿಗಳು ಸ್ವಾಗತ ಮಾಡಿದ್ದಾರೆ.‌ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಡೋಲು, ನೃತ್ಯದೊಂದಿಗೆ ಮೊದಲ ಸರಕಾರಿ ಬಸ್ ಅನ್ನು ಸ್ವಾಗತಿಸಿದ ಗ್ರಾಮಸ್ಥರು

ರಾಜಸ್ಥಾನ,ಆ.7: ಇಂದು ನಗರ ಪ್ರದೇಶಗಳು ಎಷ್ಟೇ ಅಭಿವೃದ್ಧಿಯಾದರೂ ಕೆಲವೊಂದು ಹಳ್ಳಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿ ಕಾಡುತ್ತಿದೆ. ನೀರು,ವಿದ್ಯುತ್, ಸಾರಿಗೆ ಸೌಕರ್ಯ ಹೀಗೆ ಹಲವು ಸಮಸ್ಯೆಯಿಂದ ಬಳಲುತ್ತಿವೆ. ಇದಕ್ಕೆ ಸಾಕ್ಷಿ ಅನ್ನುವಂತೆ ರಾಜಸ್ಥಾನದ ದೂರದ ಹಳ್ಳಿಯೊಂದಕ್ಕೆ ಇದುವರೆಗೆ ಸರಕಾರಿ ಬಸ್ ನ‌ ಸೌಲಭ್ಯ ಇರಲಿಲ್ಲ, ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳೇ ಕಳೆದರೂ ಸಾರ್ವಜನಿಕ ಸಾರಿಗೆ ಸೌಲಭ್ಯ ವಂಚಿತವಾಗಿದ್ದ ಗ್ರಾಮಕ್ಕೆ ಕೊನೆಗೂ ಬಸ್ ನ ಆಗಮನ‌ವಾಗಿದೆ. ಸ್ವಾತಂತ್ರ್ಯ ಪಡೆದು 79 ವರ್ಷಗಳ ನಂತರ ತಮ್ಮ ಪ್ರದೇಶದಲ್ಲಿ ಮೊದಲ ಸರ್ಕಾರಿ ಬಸ್ ಅನ್ನು ಗ್ರಾಮದ ನಿವಾಸಿಗಳು ಸ್ವಾಗತ ಮಾಡಿದ್ದಾರೆ.‌ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಕುರ್ತಾಲ್ ಗ್ರಾಮಕ್ಕೆ ಮೊದಲ ಸರಕಾರಿ ಬಸ್ ನ ಆಗಮನವಾಗಿದೆ. ತಮ್ಮ ಮೊದಲ ಬಸ್ ಅನ್ನು ಸಾರ್ವಜನಿಕರು ಸ್ವಾಗತಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಗ್ರಾಮಸ್ಥರು ಡೋಲು ಬಾರಿಸಿ ಕುಣಿದು ಕುಪ್ಪಳಿಸಿದ್ದು ಸಂಪ್ರದಾಯಿಕವಾಗಿ ಸ್ವಾಗತ ಕೋರಿದ್ದಾರೆ. ಬಸ್ ತಮ್ಮ ಪ್ರದೇಶಕ್ಕೆ ಬರುವುದನ್ನು ವೀಕ್ಷಿಸಲು ಮಳೆಯ ಹೊರತಾಗಿಯೂ ಗ್ರಾಮಸ್ಥರು ರಸ್ತೆಬದಿಯಲ್ಲಿ ಜಮಾಯಿಸಿರುವುದನ್ನು ಕಾಣಬಹುದು‌

ವಿಡಿಯೋ ನೋಡಿ:



ಬಸ್ ಅನ್ನು ಚೆಂಡು ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು. ವಿವಿಧ ಆಚರಣೆಗಳೊಂದಿಗೆ ಬಸ್ ಗೆ ಪೂಜೆಯನ್ನು ಸಲ್ಲಿಕೆ ಮಾಡಿ ಸಿಹಿ ತಿಂಡಿಯನ್ನು ಹಂಚಲಾಯಿತು. ಇಷ್ಟು ದಿನ ಸಾರಿಗೆ ಸಂಪರ್ಕದ ಕೊರತೆಯಿಂದ ಶಾಲಾ ಮಕ್ಕಳು, ಉದ್ಯೋಗಿಗಳಿಗೆ ತೊಂದರೆ ಎದುರಾಗಿತ್ತು. ಈ ಹೊಸ ಬಸ್ ಸೇವೆಯಿಂದಾಗಿ ಗ್ರಾಮಸ್ಥರಿಗೆ ಅನುಕೂಲಕರವಾಗಿದೆ.

Viral Video: ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್‌ ದೋಚಿದ ಖದೀಮರು! ಇದಕ್ಕೆ ಯಾಯೂ ಸಹಾಯಕ್ಕೆ ಬರಲ್ಲ ಎಂದ ನೆಟ್ಟಿಗರು

ಬಸ್ ತಮ್ಮ ಪ್ರದೇಶಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು ರಸ್ತೆಬದಿಯಲ್ಲಿ ಜಮಾಯಿಸಿದ್ದಾರೆ. ಅನೇಕರು ಹರ್ಷೋದ್ಗಾರ, ಡ್ಯಾನ್ಸ್ ಮಾಡುತ್ತಾ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಕ್ಷಣವನ್ನು ರೆಕಾರ್ಡ್ ಮಾಡುತ್ತಿದ್ದಾರೆ.ಈ ಸಂದರ್ಭವನ್ನು ಹಬ್ಬದಂತಹ ಕಾರ್ಯಕ್ರಮವನ್ನಾಗಿ ಗ್ರಾಮಸ್ಥರು ಆಚರಣೆ ಮಾಡಿದ್ದಾರೆ. ಈ ವೀಡಿಯೊ ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದೆ.

ಬಳಕೆದಾರರೊಬ್ಬರು ಇವು ಎಲ್ಲರ ಮೂಲಭೂತ ಹಕ್ಕುಗಳು ಗ್ರಾಮಸ್ಥರ ಮುಗ್ಧತೆಯನ್ನು ಪ್ರೀತಿಸುತ್ತೇನೆ,ಆದರೆ ಇದಕ್ಕಾಗಿ ಅವರು ಇಷ್ಟು ದಿನ ಕಾಯಬೇಕಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಮತ್ತೊಬ್ಬರು ಈ ಹಳ್ಳಿ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.