ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಮುಳುಗುವ ನಾಟಕ: ಪೊಲೀಸರು ‘ಶವ’ ತೆಗೆಯಲು ಬಂದಾಗ ಎದ್ದ ವ್ಯಕ್ತಿ

ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಜನರ ಹುಚ್ಚಾಟ ಹೆಚ್ಚಾಗಿದ್ದು, ಅತಿರೇಕದ ವರ್ತನೆಯಿಂದ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಮೊದಲು ಸೆಲ್ಫಿ ತೆಗೆಯುವ ಹುಚ್ಚಿತ್ತು. ಇದೀಗ ರೀಲ್ಸ್ ಮಾಡುವ ಹುಚ್ಚು ಶುರುವಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್, ಫೋಟೊ ತೆಗೆಯಲು ಹೋಗಿ ಜೀವ ಕಳೆದುಕೊಂಡ ಎಷ್ಟೋ ನಿದರ್ಶನಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ರೀಲ್ಸ್ ಚಟಕ್ಕೆ ನದಿಯಲ್ಲಿ ಮುಳುಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭೋಪಾಲ್‌: ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್ (Gwalior) ಜಿಲ್ಲೆಯ ವೀರಪುರ ಡ್ಯಾಮ್‌ನಲ್ಲಿ ಒಬ್ಬ ವ್ಯಕ್ತಿಯು ಮುಳುಗಿ ಮೃತಪಟ್ಟಿದ್ದಾನೆಂದು ಕರೆ ಬಂದ ಹಿನ್ನೆಲೆ ಪೊಲೀಸರು (Police) ಬಂದಾಗ ಆತ ಎದ್ದು ನಡೆದುಕೊಂಡು ಹೋದ ಘಟನೆ ನಡೆದಿದೆ. ಆ ವ್ಯಕ್ತಿ ಇನ್‌ಸ್ಟಾಗ್ರಾಮ್ (Instagram) ರೀಲ್‌ಗಾಗಿ ಇಂತಾ ನಾಟಕವಾಡಿರುವುದು ಗೊತ್ತಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ಗೊಂದಲವನ್ನುಂಟು ಮಾಡಿ, ತುರ್ತು ಸೇವೆಗಳ ದುರ್ಬಳಕೆ ಮಾಡಿಕೊಳ್ಳುವುದಲ್ಲೆ ಅಧಿಕಾರಿಗಳ ಸಮಯವನ್ನು ವ್ಯರ್ಥ ಆಗುವಂತೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ವೀರಪುರ ಡ್ಯಾಮ್‌ನಲ್ಲಿ ಒಬ್ಬ ವ್ಯಕ್ತಿಯು ನೀರಿನಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು, ಆತ ಮುಳುಗಿರುವನೆಂದು ಭಾವಿಸಿ ಗಾಬರಿಗೊಂಡರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡವು ಶವವನ್ನು ಹೊರತೆಗೆಯಲು ತೆರಳಿತು. ಆದರೆ ಅವರು ಕಾರ್ಯಪ್ರವೃತ್ತರಾಗುವ ಮೊದಲೇ, “ಮೃತ” ಎಂದು ಭಾವಿಸಲಾದ ವ್ಯಕ್ತಿಯು ಏಕಾಏಕಿ ಎದ್ದು ನಡೆದುಹೋದನು. ಈ ದೃಶ್ಯವು ಅಲ್ಲಿ ನೆರೆದಿದ್ದ ಜನರನ್ನು ಆಶ್ಚರ್ಯಗೊಳ್ಳುವಂತೆ ಮಾಡಿದ್ದು,. ಆತ ಇನ್‌ಸ್ಟಾಗ್ರಾಮ್ ರೀಲ್ ಮಾಡುವುದಕ್ಕಾಗಿ ಈ ನಾಟಕವಾಡಿದ್ದಾನೆ ಎಂದು ನಂತರ ತಿಳಿದುಬಂದಿದೆ.



ಈ ಘಟನೆಯು ತುರ್ತು ಸೇವೆಗಳ ಸಮಯವನ್ನು ವ್ಯರ್ಥಗೊಳಿಸಿದ್ದು ಮಾತ್ರವಲ್ಲ, ಸ್ಥಳೀಯರಲ್ಲಿ ಗೊಂದಲವನ್ನುಂಟು ಮಾಡಿತು ಎಂದು ವರದಿಯಾಗಿದೆ. ಪೊಲೀಸರು ಇಂತಹ ಅಪಾಯಕಾರಿ ಸಾಮಾಜಿಕ ಮಾಧ್ಯಮ ಕೃತ್ಯಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ಬಳಕೆದಾರ, “ಇನ್‌ಸ್ಟಾಗ್ರಾಮ್ ರೀಲ್ ಜೀವಕ್ಕಿಂತ ಮುಖ್ಯವಾಯಿತು” ಎಂದು ವ್ಯಂಗ್ಯವಾಡಿದರೆ, ಇನ್ನೊಬ್ಬರು, “ಇದು ಮುಂದಿನ ಹಂತದ ಈಜು ಕೌಶಲ್ಯ” ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರ, “ಕೊಳಕು ನೀರಿನಲ್ಲಿ ಇಂತಹ ಕೃತ್ಯ ಏಕೆ? ಬಹುಶಃ ಕೌಟುಂಬಿಕ ಸಮಸ್ಯೆಯಿರಬಹುದು” ಎಂದು ಊಹಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ತೆಲಂಗಾಣದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಭಯಾನಕ ವಿಡಿಯೋ ವೈರಲ್

ಈ ಘಟನೆಯು ಸಾಮಾಜಿಕ ಮಾಧ್ಯಮವನ್ನು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಸೇವೆಗಳ ದುರ್ಬಳಕೆ ಮತ್ತು ಸುರಕ್ಷತೆಯ ಕೊರತೆಯ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.