ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತಾತ್ಕಾಲಿಕ ಪತ್ನಿ ಬೇಕಾ? ಹಾಗಿದ್ದರೆ ಈ ದೇಶದಲ್ಲಿ ಸಂಗಾತಿಯನ್ನು ಬಾಡಿಗೆಗೆ ಪಡೆಯಬಹುದು!

Temporary Wife: ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಈ ದೇಶವು ಈಗ ಬಾಡಿಗೆಗೆ ಹೆಂಡತಿಯರನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ. ಇದು ಆಗ್ನೇಯ ಏಷ್ಯಾದ ಒಂದು ಸುಂದರದೇಶ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಯಾವುದು ಈ ದೇಶ?

ಈ ದೇಶದಲ್ಲಿ ಪತ್ನಿಯನ್ನು ಬಾಡಿಗೆಗೆ ಪಡೆಯಬಹುದು

-

Priyanka P Priyanka P Sep 7, 2025 7:00 PM

ಬ್ಯಾಂಕಾಕ್: ಆಗ್ನೇಯ ಏಷ್ಯಾದ ಈ ದೇಶದಲ್ಲಿ ಕಂಡುಬರುವ ಒಂದು ವಿಶಿಷ್ಟ ಸಾಮಾಜಿಕ ಪ್ರವೃತ್ತಿ ಇತ್ತೀಚೆಗೆ ಜಾಗತಿಕವಾಗಿ ಗಮನ ಸೆಳೆದಿದೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಈ ದೇಶವು ಈಗ ಬಾಡಿಗೆಗೆ ಪತ್ನಿಯರನ್ನು (wives on rent) ನೀಡುತ್ತಿದೆ ಎನ್ನುವ ಸುದ್ದಿ ವೈರಲ್‌ ಆಗುತ್ತಿದೆ (Viral News). ಈ ಕುರಿತಾದ ವಿವರ ಇಲ್ಲಿದೆ.

ಆಗ್ನೇಯ ಏಷ್ಯಾದ ಸುಂದರ ದೇಶ ಥೈಲ್ಯಾಂಡ್. ಇಲ್ಲಿನ ಅದ್ಭುತ ಕಡಲತೀರಗಳು ಪ್ರವಾಸಿಗರ ವಿಶೇಷ ಆಕರ್ಷಣೆ. ಇದೇ ಕಾರಣಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಈ ಪುಟ್ಟ ದೇಶ ಸೋಜಿಗಲ್ಲಿನಂತೆ ಸೆಳೆಯುತ್ತದೆ. ಇತ್ತೀಚೆಗೆ ಇಲ್ಲಿ ಬಾಡಿಗೆಗೆ ಪತ್ನಿಯರು ಸಿಗುತ್ತಾರೆ ಎಂದು ಪುಸ್ತಕವೊಂದರಲ್ಲಿ ಬರೆಯಲಾಗಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರವಾಸಿಗರು ಒಂದು ನಿರ್ದಿಷ್ಟ ಅವಧಿಗೆ ಬಾಡಿಗೆ ಹೆಂಡತಿಯರನ್ನು ಪಡೆಯಬಹುದು ಎನ್ನುವುದು ವಿಶೇಷ.

ಈ ಪ್ರವೃತ್ತಿಯು ಥೈಲ್ಯಾಂಡ್‌ನ ಪಟ್ಟಾಯ ಎಂಬಲ್ಲಿದೆ. ಇದನ್ನು ವೈಫ್ ಆನ್ ಹೈರ್ ಅಥವಾ ಬ್ಲ್ಯಾಕ್ ಪರ್ಲ್ ಎಂದೂ ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ನಿರ್ದಿಷ್ಟ ಮೊತ್ತದ ಹಣ ಪಾವತಿಸಿದರೆ ಮಹಿಳೆ ತಾತ್ಕಾಲಿಕವಾಗಿ ಹೆಂಡತಿಯಾಗಿ ಬದಲಾಗುತ್ತಾಳೆ. ಆಕೆ ಅಡುಗೆ ಮಾಡುವುದು, ಶಾಪಿಂಗ್‌ ಮಾಡುವುದು ಮತ್ತು ಪತ್ನಿ ನಿರ್ವಹಿಸುವ ಎಲ್ಲ ಕೆಲಸಗಳನ್ನು ಮಾಡುತ್ತಾಳೆ. ಈ ಸಂಬಂಧವು ಒಪ್ಪಂದದ ಆಧಾರದಲ್ಲಿ ನಡೆಯುತ್ತದೆ. ಇದನ್ನು ಕಾನೂನುಬದ್ಧ ವಿವಾಹವೆಂದು ಪರಿಗಣಿಸಲಾಗುವುದಿಲ್ಲ. ಇದು ಒಂದು ವ್ಯವಹಾರವಾಗಿ ವಿಕಸನಗೊಂಡಿದ್ದು, ಅನೇಕ ಮಹಿಳೆಯರು ಸ್ವಇಚ್ಛೆಯಿಂದ ತೊಡಗಿಸಿಕೊಂಡಿದ್ದಾರೆ.

ಲಾವರ್ಟ್ ಎ ಎಮ್ಯಾನುಯೆಲ್ ಬರೆದ 'ಥಾಯ್ ಟ್ಯಾಬೂ - ದಿ ರೈಸ್ ಆಫ್ ವೈಫ್ ರೆಂಟಲ್ ಇನ್ ಮಾಡರ್ನ್ ಸೊಸೈಟಿ' ಪುಸ್ತಕದಲ್ಲಿ ಪೂರ್ಣ ಕಥೆಯನ್ನು ವಿವರಿಸಲಾಗಿದೆ. ಬಡ ಕುಟುಂಬಗಳ ಮಹಿಳೆಯರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಪೋಷಿಸಲು ಈ ಕೆಲಸವನ್ನು ಆಯ್ಕೆ ಮಾಡುತ್ತಾರೆ ಎಂದು ಪುಸ್ತಕ ವಿವರಿಸುತ್ತದೆ. ಈ ಮಹಿಳೆಯರು ಹೆಚ್ಚಾಗಿ ಬಾರ್‌ಗಳು ಅಥವಾ ನೈಟ್‌ಕ್ಲಬ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಅವರು ವಿದೇಶಿ ಪ್ರವಾಸಿಗರನ್ನು ಗ್ರಾಹಕರಾಗಿ ಭೇಟಿಯಾಗುತ್ತಾರೆ.

ಇದನ್ನೂ ಓದಿ: Viral Video: ಬಂಗೀ ಜಂಪಿಂಗ್‍ಗೆ ಹೋಗಿ ಹೀಗ್‌ ಭಯ ಪಟ್ರೆ ಹೆಂಗಮ್ಮ? ಸಖತ್‌ ಫನ್ನಿ ಆಗಿದೆ ಈ ವಿಡಿಯೊ

ಬಾಡಿಗೆ ಹೆಂಡತಿಗೆ ಶುಲ್ಕವು ಮಹಿಳೆಯ ವಯಸ್ಸು, ಸೌಂದರ್ಯ, ಶಿಕ್ಷಣ ಮತ್ತು ಒಪ್ಪಂದದ ಅವಧಿಯಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಕೆಲವು ಮಹಿಳೆಯರು ಪುರುಷನೊಂದಿಗೆ ಕೆಲವು ದಿನಗಳವರೆಗೆ ಇರುತ್ತಾರೆ. ಆದರೆ ಇತರರು ತಿಂಗಳುಗಳ ಕಾಲ ಉಳಿಯಬಹುದು. ವರದಿಗಳ ಪ್ರಕಾರ, ಬಾಡಿಗೆ $1,600 (ಸುಮಾರು ರೂ. 1.3 ಲಕ್ಷ ರೂ.)ರಿಂದ $1,16,000 (ಸುಮಾರು 96 ಲಕ್ಷ ರೂ.)ವರೆಗೆ ಇರಬಹುದು. ಥೈಲ್ಯಾಂಡ್‌ನಲ್ಲಿ ಈ ಪದ್ಧತಿಯನ್ನು ನಿಯಂತ್ರಿಸುವ ಯಾವುದೇ ಕಾನೂನುಗಳಿಲ್ಲದ ಕಾರಣ ಇದು ಖಾಸಗಿ ಒಪ್ಪಂದವಾಗಿದೆ.

ಥೈಲ್ಯಾಂಡ್‌ನಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಈ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಅನೇಕ ಜನರು ಈಗ ಶಾಶ್ವತ ಸಂಬಂಧಗಳಿಗಿಂತ ತಾತ್ಕಾಲಿಕ ಸಂಬಂಧಗಳನ್ನು ಬಯಸುತ್ತಾರೆ. ಥಾಯ್ ಸಮಾಜದಲ್ಲಿ ಸಂಬಂಧಗಳ ಬಗ್ಗೆ ಮುಕ್ತ ಮನೋಭಾವವೂ ಈ ಪ್ರವೃತ್ತಿಗೆ ಕೊಡುಗೆ ನೀಡುತ್ತದೆ. ಈ ಅಭ್ಯಾಸವು ಜಪಾನ್ ಮತ್ತು ಕೊರಿಯಾದಲ್ಲಿನ ಇದೇ ರೀತಿಯ ಸೇವೆಗಳಿಂದ ಪ್ರೇರಿತವಾಗಿದೆ. ಅಲ್ಲಿ 'ಗರ್ಲ್‌ಫ್ರೆಂಡ್ ಫಾರ್ ಹೈರ್' ಸೇವೆಗಳು ಈಗಾಗಲೇ ಜನಪ್ರಿಯವಾಗಿವೆ. ಇದೀಗ ಥೈಲ್ಯಾಂಡ್ ಕೂಡ ಇದನ್ನು ಅಳವಡಿಸಿಕೊಂಡಿದೆ.

ಈ ಪ್ರವೃತ್ತಿ ವೇಗವಾಗಿ ವಿಸ್ತರಿಸುತ್ತಿದೆ ಎಂದು ಥಾಯ್ ಸರ್ಕಾರ ಹೇಳಿದೆ. ಇದನ್ನು ನಿಯಂತ್ರಿಸಲು ಕಾನೂನನ್ನು ಜಾರಿಗೆ ತರಲು ಅಲ್ಲಿನ ಸರ್ಕಾರವು ಯೋಜಿಸುತ್ತಿದೆ. ಇದು ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳನ್ನು ಖಚಿತಪಡಿಸುತ್ತದೆ.