Viral News: ಸತ್ತನೆಂದು ತಿಳಿದಿದ್ದ ವ್ಯಕ್ತಿ 16 ವರ್ಷಗಳ ಅನಂತರ ಮನೆಗೆ ಮರಳಿದ
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕುಟುಂಬದಲ್ಲೊಂದು ಪವಾಡ ಘಟಿಸಿದೆ. ಸುಗೌಲಿ ಬ್ಲಾಕ್‌ನ ಮೆಹ್ವಾ ಗ್ರಾಮದ ನಿವಾಸಿಯಾಗಿದ್ದ ನಗೀನಾ ಸಾಹ್ನಿ ಇದೀಗ ಹದಿನಾರು ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದಾರೆ. ಹದಿನಾರು ವರ್ಷಗಳ ಹಿಂದೆ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ಅವರನ್ನು ಇದೀಗ ಪತ್ತೆ ಹಚ್ಚಲಾಗಿದೆ.

-

ಪಾಟ್ನಾ: ಮೃತನಾಗಿದ್ದಾನೆ ಎಂದುಕೊಂಡಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 16 ವರ್ಷಗಳ ಅನಂತರ ಮನೆಗೆ ಹಿಂದಿರುಗಿರುವ ಘಟನೆ ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ (East Champaran) ನಡೆದಿದೆ. ಹದಿನಾರು ವರ್ಷಗಳ ಹಿಂದೆ ಆತನ ಶ್ರಾದ್ಧ ವಿಧಿವಿಧಾನಗಳನ್ನು ನಡೆಸಲಾಗಿತ್ತು. ಗಂಗಾಸಾಗರ ತೀರ್ಥಯಾತ್ರೆಯ (Gangasagar pilgrimage) ಸಮಯದಲ್ಲಿ ನಾಪತ್ತೆಯಾಗಿದ್ದ (Missing case) ನಾಗಿನಾ ಸಾಹ್ನಿ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಲು ಕಾರಣವಾಗಿದ್ದು ಸಾಮಾಜಿಕ ಮಾಧ್ಯಮ. ಕುಟುಂಬದೊಂದಿಗೆ ಅವರ ಪುನರ್ ಮಿಲನದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral News) ಆಗಿದ್ದು ಈ ಭಾವನಾತ್ಮಕ ದೃಶ್ಯ ಎಲ್ಲರ ಕಣ್ಣಲ್ಲೂ ನೀರು ಬರುವಂತೆ ಮಾಡಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಈತನ ಕುಟುಂಬಕ್ಕೆ ಪವಾಡವೊಂದು ಘಟಿಸಿದಂತೆ ಭಾಸವಾಗಿದೆ. ಸುಗೌಲಿ ಬ್ಲಾಕ್‌ನ ಮೆಹ್ವಾ ಗ್ರಾಮದ ನಿವಾಸಿಯಾಗಿದ್ದ ನಗೀನಾ ಸಾಹ್ನಿ ಇದೀಗ ಹದಿನಾರು ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದಾರೆ. ಹದಿನಾರು ವರ್ಷಗಳ ಹಿಂದೆ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು.
ಗಂಗಾಸಾಗರ್ ತೀರ್ಥಯಾತ್ರೆಯನ್ನು ಪ್ರಾರಂಭಿಸಿದ ಸಾಹ್ನಿ 2009ರಲ್ಲಿ ನಾಪತ್ತೆಯಾಗಿದ್ದರು. ಸಾಕಷ್ಟು ಹುಡುಕಾಡಿದರೂ ಅವರ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಕ್ರಮೇಣ ಅವರ ಕುಟುಂಬ ಮತ್ತು ಗ್ರಾಮಸ್ಥರು ಅವರು ಸಾವನ್ನಪ್ಪಿದ್ದಾರೆ ಎಂದು ತೀರ್ಮಾನಿಸಿ ಅಂತ್ಯಕ್ರಿಯೆಯನ್ನು ನಡೆಸಿದರು.
ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದ ಮೂಲಕ ಅವರ ಗುರುತು ಪತ್ತೆ ಮಾಡಲಾಗಿದೆ. ಗುಜರಾತ್‌ನ ವೃದ್ಧಾಶ್ರಮದ ವಿಡಿಯೊವೊಂದರಲ್ಲಿ ಸಾಹ್ನಿಯನ್ನು ನೋಡಿದ ಅವರ ಮಗ ರುಡಾಲ್ ಇವರು ತಮ್ಮ ತಂದೆಯಂತೆ ಇದ್ದಾರೆಂದು ತನಿಖೆ ನಡೆಸಲು ಪ್ರಾರಂಭಿಸಿದರು. ಆರ್ಥಿಕ ಸಮಸ್ಯೆಗಳ ಮಧ್ಯೆಯು ರುಡಾಲ್ ಗುಜರಾತ್‌ಗೆ ತೆರಳಿದರು. ಅಲ್ಲಿ ತಂದೆಯನ್ನು ಭೇಟಿಯಾದರು.
ಆಶ್ರಮದಲ್ಲಿ ನಡೆದ ಅವರ ಪುನರ್ಮಿಲನ ಕ್ಷಣವು ತೀವ್ರ ಭಾವನಾತ್ಮಕವಾಗಿತ್ತು. ಸುಮಾರು ಒಂದೂವರೆ ದಶಕದ ಬಳಿಕ ತಂದೆ ಮತ್ತು ಮಗ ಅಪ್ಪಿಕೊಂಡರು. ಬಳಿಕ ಮಾತನಾಡಿದ ರುಡಾಲ್, ನಮ್ಮ ತಂದೆಯನ್ನು ಮತ್ತೆ ನೋಡುವ ಅವಕಾಶ ನಮಗೆ ಸಿಗುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿರಲಿಲ್ಲ. ಈಗಾಗಲೇ ಅವರ ಶ್ರಾದ್ಧವನ್ನು ಮಾಡಿದ್ದೇವೆ. ದೇವರು ನಮಗೆ ಈ ಪವಾಡವನ್ನು ತೋರಿಸಿದನು. ನಮಗೆ ನಮ್ಮ ತಂದೆಯ ನೆರಳು ಮತ್ತೆ ಸಿಕ್ಕಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Apollo Tyres: ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಸ್ಪಾನ್ಸರ್ ಘೋಷಿಸಿದ ಬಿಸಿಸಿಐ!
ಸಾಹ್ನಿ ಮನೆಗೆ ಹಿಂದಿರುಗುತ್ತಿರುವ ವಿಚಾರ ತಿಳಿದು ಗ್ರಾಮದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಗ್ರಾಮಸ್ಥರು ಅವರನ್ನು ಅತ್ಯಂತ ಸಂಭ್ರಮದಿಂದ ಮನೆಗೆ ಸ್ವಾಗತಿಸಿದರು.