ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಅಬ್ಬಾ... ಮಾನವ ಗಾತ್ರದ ಬಾವಲಿ! ವೈರಲಾಗ್ತಿರುವ ಈ ಫೋಟೋದ ಅಸಲಿಯತ್ತೇನು?

Human-Sized Bat: ಸಾಮಾನ್ಯವಾಗಿ ಬಾವಲಿಗಳು ಯಾವ ಗಾತ್ರವನ್ನು ಹೊಂದಿರುತ್ತವೆ? ಚಿಕ್ಕ ಗಾತ್ರವನ್ನು ಹೊಂದಿರುತ್ತವೆ. ಎಂದಾದರೂ ದೈತ್ಯಾಕಾರದ ಬಾವಲಿಗಳನ್ನು ನೋಡಿದ್ದೀರಾ? ಇಲ್ಲದಿದ್ದಲ್ಲಿ ಈ ಫೋಟೋ ನೋಡಿದ್ರೆ ಖಂಡಿತಾ ನಿಮಗೆ ಅಚ್ಚರಿಯಾಗಬಹುದು ಅಥವಾ ಭೀತಿಗೊಳ್ಳಬಹುದು. ಇಲ್ಲಿದೆ ನೋಡಿ ವೈರಲ್ ಫೋಟೋ.

ಫಿಲಿಪೈನ್ಸ್: ಬೆಳಗ್ಗೆದ್ದು ಹೊರಗೆ ಬಂದಾಗ ಮಾನವ ಗಾತ್ರದ ಬಾವಲಿ (Human-Sized Bat) ನೋಡಿದ್ರೆ ಹೇಗಾಗಬಹುದು? ಬಹುತೇಕರು ಕಿರುಚಬಹುದು ಅಥವಾ ಎದ್ನೋ ಬಿದ್ನೋ ಅಂತಾ ಗಾಬರಿಯಾಗಿ ಓಡಿಹೋಗಬಹುದು. ಆದರೆ, ಫಿಲಿಪೈನ್ಸ್‌ನ ವ್ಯಕ್ತಿಯೊಬ್ಬ ಮಾತ್ರ ವಿಭಿನ್ನವಾಗಿ ಪ್ರತಿಕ್ರಿಯಿಸಿದನು. ಆ ಸ್ಥಳದಿಂದ ಪಲಾಯನ ಮಾಡುವ ಬದಲು, ಅವನು ಆ ಅಸಾಮಾನ್ಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿ ಭಾರಿ ವೈರಲ್ (Viral News) ಆಗಿದೆ. ಇದನ್ನು ನೋಡಿದ ಬಳಕೆದಾರರಲ್ಲಿ ಕೆಲವರು ಅಚ್ಚರಿಗೊಂಡರೆ, ಇನ್ನೂ ಕೆಲವರು ಭಯಭೀತರಾದರು.

ಅಂದಹಾಗೆ, ವೈರಲ್ ಆಗಿರುವ ಈ ಚಿತ್ರವು ಇತ್ತೀಚಿನದಲ್ಲ. 2018 ರಲ್ಲಿ ಮೊದಲು ಕಾಣಿಸಿಕೊಂಡ ಈ ಫೋಟೋ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೈರಲ್ ಫೋಟೋದಲ್ಲಿ ಮನೆಯ ಹೊರಗಿನ ತಂತಿಯಿಂದ ತಲೆಕೆಳಗಾಗಿ ನೇತಾಡುತ್ತಿರುವ ಬೃಹತ್ ಬಾವಲಿಯನ್ನು ತೋರಿಸಲಾಗಿದೆ. ಅದರ ರೆಕ್ಕೆಗಳು ಒಳಗೆ ಸಿಕ್ಕಿಕೊಂಡಿವೆ. ಆದರೆ, ಇನ್ನೂ ಅದರ ಅಗಾಧವಾದ ಚೌಕಟ್ಟನ್ನು ತೋರಿಸುತ್ತಿದೆ.

ಮೊದಲ ಬಾರಿಗೆ ಕಣ್ಣಾಡಿಸಿದಾಗ ಇದು ಬಹುತೇಕ ಅವಾಸ್ತವಿಕವೆಂದು ತೋರುತ್ತದೆ. ಆದರೆ, ಇದು ನಿಜ. ಈ ಮಾನವ ಗಾತ್ರದ ಬಾವಲಿ ಪ್ರಪಂಚದಾದ್ಯಂತದ ಜನರ ಗಮನವನ್ನು ತ್ವರಿತವಾಗಿ ಸೆಳೆಯಿತು. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಫೋಟೋ ನೋಡಿ ಆಘಾತಕ್ಕೊಳಗಾದರು. ಇತರರು ಅಂತಹ ಬಾವಲಿಗಳು ಅಸ್ತಿತ್ವದಲ್ಲಿವೆ ಎಂದು ತಿಳಿದು ಆಕರ್ಷಿತರಾದರು.

ಇಲ್ಲಿದೆ ಫೋಟೋ:



ಒಬ್ಬ ಬಳಕೆದಾರರು, ಅದು ಕೇವಲ ಬ್ಯಾಟ್‌ಮ್ಯಾನ್ ಎಂದು ತಮಾಷೆ ಮಾಡಿದರು. ಬಾವಲಿ ವೇಷಭೂಷಣದಲ್ಲಿರುವ ವ್ಯಕ್ತಿಯಂತೆ ಕಾಣುತ್ತಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಕ್ಯಾಮರಾ ಆಂಗಲ್‍ನಿಂದ ಬಾವಲಿ ಇಷ್ಟು ದೊಡ್ಡದಾಗಿ ಕಾಣಿಸಿಕೊಂಡಿತು ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವಾದಿಸಿದ್ದಾರೆ. ನಾನು ಥೈಲ್ಯಾಂಡ್‌ನಲ್ಲಿ ಇದೇ ರೀತಿಯ ಒಂದು ದೊಡ್ಡ ಬಾವಲಿಯನ್ನು ನೋಡಿದ್ದೆ. ಅದು ತುಂಬಾ ದೊಡ್ಡದಾಗಿತ್ತು ಮತ್ತು ದೊಡ್ಡ-ವಿಚಿತ್ರ ರೆಕ್ಕೆಗಳನ್ನು ಹೊಂದಿತ್ತು. ಅದು ಮರದ ಮೇಲೆ ಇತ್ತು. ಈ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೆ, ಆದರೆ ನೋಡಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೆ. ನಿಜವಾಗಿಯೂ ನೋಡಲು ಸಿಕ್ಕಿತು ಎಂದು ಬಳಕೆದಾರರೊಬ್ಬರು ಹೇಳಿದರು.

ಮಾನವ ಗಾತ್ರದ ಬಾವಲಿಯ ವೈರಲ್ ಚಿತ್ರವು ಸುಳ್ಳಲ್ಲ ಇದು ನಿಜ ಎನ್ನಲಾಗಿದೆ. ಆದರೆ, ಅದು ಫೋಟೋದಲ್ಲಿರುವಷ್ಟು ದೊಡ್ಡದಿರಲ್ಲ. ಆದರೆ ದೈತ್ಯ ಗಾತ್ರದಲ್ಲೇ ಇದೆ. ಇದು ಫಿಲಿಪೈನ್ಸ್‌ನಲ್ಲಿ ಕಾಣಸಿಕ್ಕುತ್ತದೆ. ಇಂತಹ ಬಾವಲಿಗಳು ಸುಮಾರು 5.5 ಅಡಿ ಅಥವಾ 1.7 ಮೀಟರ್‌ಗಳ ರೆಕ್ಕೆಗಳನ್ನು ಹೊಂದಿರಬಹುದಾದರೂ, ಅವುಗಳ ದೇಹವು ಕೇವಲ ಒಂದು ಅಡಿ ಉದ್ದವಿರುತ್ತದೆ. ಇದು ಖಂಡಿತವಾಗಿಯೂ ಇತರ ಬಾವಲಿಗಳಿಗಿಂತ ದೊಡ್ಡದಾಗಿದೆ. ಆದರೆ ಮನುಷ್ಯರಂತೆ ದೊಡ್ಡದಾಗಿಲ್ಲ. ವರದಿಯೊಂದರ ಪ್ರಕಾರ, ಬಾವಲಿಯನ್ನು ಸೆರೆಹಿಡಿಯಲು ಫೋರ್ಸ್ಡ್ ಪರ್ಸ್ಪೆಕ್ಟಿವ್ ಎಂಬ ಕ್ಯಾಮರಾ ಟ್ರಿಕ್ ಅನ್ನು ಬಳಸಲಾಯಿತು. ಇದು ನಿಜವಾಗಿರುವ ಗಾತ್ರಕ್ಕಿಂತ ಇನ್ನೂ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: Viral Video: ಸಿಕ್ಕರೆ ಇಂಥಾ ಮಾವ ಸಿಗ್ಬೇಕು! ಸೊಸೆ ಜೊತೆಗಿನ ಬಾಂದವ್ಯವನ್ನೊಮ್ಮೆ ನೋಡಿ