Viral Video: ಸಿಕ್ಕರೆ ಇಂಥಾ ಮಾವ ಸಿಗ್ಬೇಕು! ಸೊಸೆ ಜೊತೆಗಿನ ಬಾಂದವ್ಯವನ್ನೊಮ್ಮೆ ನೋಡಿ
Woman Applies Mehndi: ಮಾವ-ಸೊಸೆಯ ನಡುವಿನ ಉತ್ತಮ ಬಾಂಧವ್ಯದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸೊಸೆ ತಾನು ಹಚ್ಚಿದ ಮೆಹೆಂದಿಯನ್ನು ಸಂತೋಷದಿಂದ ಪ್ರದರ್ಶಿಸುತ್ತಿರುವಾಗ, ಆಕೆಯ ಮಾವ ಅಡುಗೆಮನೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದು ನೆಟ್ಟಿಗರ ಮನಗೆದ್ದಿದೆ.

-

ನವದೆಹಲಿ: ಇತ್ತೀಚೆಗೆ ಅತ್ತೆ-ಮಾವ ಸೊಸೆಯಂದಿರಿಗೆ ವರದಕ್ಷಿಣೆ ಕಿರುಕುಳ ಕೊಡುತ್ತಿರುವ ಪ್ರಕರಣಗಳು ಸಾಕಷ್ಟು ಸುದ್ದಿಯಾಗುತ್ತಿದೆ. ಈ ನಡುವೆ ಹೃದಯಸ್ಪರ್ಶಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ. ಮಾವ ಮತ್ತು ಅವರ ಸೊಸೆಯ ವಿಡಿಯೊ ಇದಾಗಿದ್ದು, ಹಲವರ ಹೃದಯ ಗೆದ್ದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಸೊಸೆ ತಾನು ಹಚ್ಚಿದ ಮೆಹೆಂದಿ (Mehendi) ಯನ್ನು ಸಂತೋಷದಿಂದ ಪ್ರದರ್ಶಿಸುತ್ತಿರುವಾಗ, ಆಕೆಯ ಮಾವ ಅಡುಗೆಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದನ್ನು ತೋರಿಸುತ್ತದೆ. ಇಬ್ಬರ ನಡುವಿನ ಈ ಮುದ್ದಾದ ವಿನಿಮಯವು ಸಂಬಂಧಗಳು ಮತ್ತು ಜವಾಬ್ದಾರಿಗಳನ್ನು ತಿಳಿಸುತ್ತದೆ.
ವಿಡಿಯೊದಲ್ಲಿ, ಮಹಿಳೆಯು ತನ್ನ ಮಾವ ಇಡೀ ಕುಟುಂಬಕ್ಕೆ ರೊಟ್ಟಿ ಬಿಸಿ ಮಾಡುವುದನ್ನು ಚಿತ್ರೀಕರಿಸಿದ್ದಾಳೆ. ಇಂದು ನಾನು ನನ್ನ ಕೈಗಳಿಗೆ ಮೆಹೆಂದಿ ಹಚ್ಚಿಕೊಂಡಿದ್ದೇನೆ, ಆದ್ದರಿಂದ ನನ್ನ ಮಾವ ಮತ್ತೆ ರೊಟ್ಟಿ ಬಿಸಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನಂತರ ಇಬ್ಬರೂ ಪ್ರೀತಿಯಿಂದ ನಗುತ್ತಾರೆ, ಇದು ನಿಜಕ್ಕೂ ಅದೃಷ್ಟದ ವಿಷಯ ಅಂತಾ ಮಾವ ಹೇಳುತ್ತಾರೆ. ನಂತರ ಮುಖದಲ್ಲಿ ದೊಡ್ಡ ನಗು ತಂದುಕೊಂಡ ಇಬ್ಬರೂ, ಎಲ್ಲರಿಗೂ ಅತ್ಯಂತ ಮುಖ್ಯವಾದ ಮತ್ತು ಸುಂದರವಾದ ಸಂದೇಶವನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸೊಸೆಯ ಕೆಲಸವನ್ನು ಪ್ರೀತಿ ಮತ್ತು ತಿಳುವಳಿಕೆಯಿಂದ ಬೆಂಬಲಿಸಬೇಕು ಎಂದು ಹೇಳಿದ್ದಾರೆ.
ವಿಡಿಯೊ ವೀಕ್ಷಿಸಿ:
ಸೊಸೆ ತಮಾಷೆಯಾಗಿ ತನ್ನ ಮಾವನಿಗೆ ಕೀಟಲೆ ಮಾಡಿದ್ದಾಳೆ. ಇದಕ್ಕಾಗಿ ನೀವು ಅಡುಗೆಮನೆಯನ್ನು ಏಕೆ ಹಾಳು ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾಳೆ. ನಗುತ್ತಾ, ಮಾವ ತನ್ನ ಸೊಸೆಗೆ ಸಹಾಯ ಮಾಡುವಾಗ ಸಕಾರಾತ್ಮಕತೆ ಮತ್ತು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಂವಾದವು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರ ಹೃದಯಗಳನ್ನು ಕರಗಿಸಿದೆ. ಬಳಕೆದಾರರು ಕುಟುಂಬದ ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಶ್ಲಾಘಿಸುತ್ತಿದ್ದಾರೆ.
ವಿಡಿಯೊದಲ್ಲಿರುವ ವೃದ್ಧ ವ್ಯಕ್ತಿಯನ್ನು ಹೊಗಳುತ್ತಾ ಒಬ್ಬ ವ್ಯಕ್ತಿ, ಅವರು ತುಂಬಾ ಸಂಭಾವಿತ ವ್ಯಕ್ತಿ ಎಂದು ಬರೆದಿದ್ದಾರೆ. ಮತ್ತೊಬ್ಬರು, ನಿಮ್ಮ ಮಾವನನ್ನು ಪಡೆಯಲು ನಿಜಕ್ಕೂ ಅದೃಷ್ಟ ಮಾಡಿರುವಿರಿ. ಅವರು ನಿಮ್ಮನ್ನು ನಿಮ್ಮನ್ನು ಮಗಳಂತೆ ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ. ಇಂತಹ ಮಾವನನ್ನು ಪಡೆದ ನೀವು ನಿಜವಾಗಿಯೂ ಅದೃಷ್ಟಶಾಲಿ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಮುದ್ದಾದ ಮಾವ-ಸೊಸೆಯ ವಿಡಿಯೊ, ಕುಟುಂಬದ ಬಂಧಗಳು ಮತ್ತು ಸಂಬಂಧಗಳಲ್ಲಿ ಪ್ರೀತಿ, ಸಹಾನುಭೂತಿ ಮತ್ತು ಗೌರವದ ಮಹತ್ವದ ಜ್ಞಾಪನೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮುಳುಗಡೆಯಾದ 10 ಕೋಟಿ ರೂ. ಮೌಲ್ಯದ ಐಷಾರಾಮಿ ಹಡಗು