Viral News: ಸಖತ್ ವೈರಲ್ ಆಗ್ತಿದೆ ಈ ವೆಡ್ಡಿಂಗ್ ಕಾರ್ಡ್; ನೆಟ್ಟಿಗರು ಸೋ ಫನ್ನಿ ಎಂದಿದ್ದೇಕೆ?
ಸೋಶಿಯಲ್ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅರೇ ಏನಿದೆ ಇದರಲ್ಲಿ ಎಂದು ನೀವು ಕೂಡ ಆಶ್ಚರ್ಯಪಡುತ್ತಿದ್ದೀರಾ...? ಈ ಆಮಂತ್ರಣ ಪತ್ರಿಕೆಯಲ್ಲಿ ಮದುವೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯ ಜೊತೆಗೆ ವರನ ಹೆಸರಿನ ಪಕ್ಕದಲ್ಲಿ ಅವನು ರಾಜ್ಯ ಪೊಲೀಸ್ ಸೇವೆಯ ದೈಹಿಕ ಪರೀಕ್ಷಾ ಸುತ್ತನ್ನು ತೇರ್ಗಡೆಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಈ ವಿಚಾರ ಎಲ್ಲರ ಗಮನ ಸೆಳೆದು ವೈರಲ್(Viral News) ಆಗಿದೆ.


ನವದೆಹಲಿ: ಸಾಮಾನ್ಯವಾಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವಧು-ವರನ ಊರು, ಸಂಬಂಧಿಕರು, ಕುಲಗೋತ್ರ ಹಾಗೂ ಮದುವೆಯ ದಿನಾಂಕ, ಸಮಯ ಮತ್ತು ಸ್ಥಳದಂತಹ ಮಾಹಿತಿಯನ್ನು ಒಳಗೊಂಡಿರುತ್ತವೆ. ಆದರೆ ಇತ್ತೀಚೆಗೆ, ಸೋಶಿಯಲ್ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂಥದ್ದೇನಿದೆ ಅದರಲ್ಲಿ ಎಂದು ಯೋಚಿಸುತ್ತಿದ್ದೀರಾ....? ಇಲ್ಲಿದೆ ನೋಡಿ ಆ ವೈರಲ್ ಆದ ಆಮಂತ್ರಣ ಪತ್ರಿಕೆಯ ಬಗ್ಗೆ ಮಾಹಿತಿ. ಈ ಆಮಂತ್ರಣ ಪತ್ರಿಕೆ ಮದುವೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಳಗೊಂಡಿದ್ದರೂ, ಈ ಕಾರ್ಡ್ ವಿಭಿನ್ನವಾದ ಕಾರಣವೊಂದಕ್ಕೆ ವೈರಲ್ (Viral News) ಆಗಿದೆ. ಅದೇನೆಂದರೆ ವರನ ಹೆಸರಿನ ಜೊತೆಗೆ, ಅವನು ರಾಜ್ಯ ಪೊಲೀಸ್ ಸೇವೆಯ ದೈಹಿಕ ಪರೀಕ್ಷಾ ಸುತ್ತನ್ನು ತೇರ್ಗಡೆಯಾಗಿದ್ದಾನೆ ಎಂದು ಅದರಲ್ಲಿ ಬರೆಯಲಾಗಿದೆಯಂತೆ.
ವೈರಲ್ ಆದ ಆಮಂತ್ರಣ ಪತ್ರಿಕೆಯಲ್ಲಿ ವರನ ಹೆಸರನ್ನು ಮಹಾವೀರ್ ಕುಮಾರ್ ಎಂದು ಬರೆಯಲಾಗಿದೆ ಮತ್ತು ಅವನ ಹೆಸರಿನ ಪಕ್ಕದಲ್ಲಿ "ಬಿಹಾರ ಪೊಲೀಸ್ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆೆ" ಎಂದು ಬರೆಯಲಾಗಿದೆ. ವಧುವಿನ ಹೆಸರನ್ನು ಆಯುಷ್ಮತಿ ಕುಮಾರಿ ಎಂದು ಉಲ್ಲೇಖಿಸಲಾಗಿದೆ. ಆದರೆ ಮದುವೆಯ ಕಾರ್ಡ್‍ನಲ್ಲಿ ಅವರ ವಿದ್ಯಾರ್ಹತೆ ಅಥವಾ ವೃತ್ತಿಯನ್ನು ಸಹ ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಪೋಸ್ಟ್ ಸ್ಪಷ್ಟಪಡಿಸಿಲ್ಲವಂತೆ.
ವೈರಲ್ ವಿಡಿಯೊ ಇಲ್ಲಿದೆ
ಈ ಮದುವೆಯ ಕಾರ್ಡ್ ಈ ವಿಚಾರಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. "ಜೆಇಇ ಮೇನ್ಸ್ ಅರ್ಹತೆ ಪಡೆದಿದೆ ಮತ್ತು ತಯಾರಿ ನಡೆಸುತ್ತಿದೆ" ಎಂದು ಒಬ್ಬರು ತಮಾಷೆಯಾಗಿ ಬರೆದರೆ, ಮತ್ತೊಬ್ಬರು, "ಜಾರ್ಖಂಡ್ ಅಬಕಾರಿ ಪೊಲೀಸರು ದೈಹಿಕವಾಗಿ ಅರ್ಹತೆ ಹೊಂದಿದ್ದಾರೆ" ಎಂದು ಉಲ್ಲೇಖಿಸಿದ್ದಾರೆ. “ನಾನು ಸಹ ಅಂತಿಮ ಮೆರಿಟ್ ಎರಡು ಬಾರಿ, ದೈಹಿಕ ಅರ್ಹತೆ ಒಂದು ಬಾರಿ ಮತ್ತು ಲಿಖಿತ ಪರೀಕ್ಷೆ ಎರಡು ಬಾರಿ ಅರ್ಹತೆ ಎಂದು ಪ್ರಿಂಟ್ ಮಾಡುತ್ತೇನೆ” ಎಂದು ಇನ್ನೊಬ್ಬರು ಹೇಳಿದ್ದಾರೆ.
ಇಂತಹ ವಿಚಿತ್ರವಾದ ಕಾರಣಕ್ಕೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ವೆಡ್ಡಿಂಗ್ ಕಾರ್ಡ್‍ವೊಂದು ತನ್ನ ಸೃಜನಶೀಲ ಮತ್ತು ಬುದ್ಧಿವಂತ ಪರಿಕಲ್ಪನೆಗಾಗಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯಿತು. ಇದು ಅಲಪತಿ ನೈಮಿಶಾ ಮತ್ತು ಪ್ರೇಮ್ ಕುಮಾರ್ ಎಂಬ ಇಬ್ಬರು ವಿಜ್ಞಾನಿಗಳಿಗೆ ಸೇರಿದ್ದು, ಮತ್ತು ಇದು ಸಂಶೋಧನಾ ಪ್ರಬಂಧದಂತೆ ಕಾಣುತ್ತದೆ.
ಈ ಸುದ್ದಿಯನ್ನೂ ಓದಿ:Viral Video: ಏರ್‌ಪೋರ್ಟ್‌ನಲ್ಲಿ ನೆಲದ ಮೇಲೆ ಕುಳಿತು ತಿಂಡಿ ತಿಂದ ಖ್ಯಾತ ನಟ; ವಿಡಿಯೊ ಫುಲ್ ವೈರಲ್
ಅವರ ಕಾರ್ಡ್ ಅನ್ನು ವೈಜ್ಞಾನಿಕ ಸಂಶೋಧನಾ ಪ್ರಬಂಧವನ್ನು ಹೋಲುವ ಸ್ವರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಪರಿಚಯ, ಮುಕ್ತಾಯ ಮತ್ತು ಅಚ್ಚುಕಟ್ಟಾಗಿ ಜೋಡಿಸಲಾದ ಕೋಷ್ಟಕಗಳಂತಹ ವಿಭಾಗಗಳನ್ನು ಒಳಗೊಂಡಿತ್ತು. ಈ ಕೋಷ್ಟಕಗಳು ಮದುವೆ ಮತ್ತು ಆರತಕ್ಷತೆಯ ಬಗ್ಗೆ ಎಲ್ಲಾ ಪ್ರಮುಖ ವಿವರಗಳನ್ನು ಹೊಂದಿದ್ದವು. ಈ ನವೀನ ವಿಧಾನವು ಅನೇಕ ನೆಟ್ಟಿಗರಿಂದ ಪ್ರಶಂಸೆಯನ್ನು ಪಡೆಯಿತು.