ಆಗ್ರಾ: ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ(Tourist destination) ಒಂದಾದ ತಾಜ್ ಮಹಲ್ (Taj Mahal) ನೋಡುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಇದರ ಒಳಗೆ ಹೋಗಲು ಅವಕಾಶವಿಲ್ಲ. ಜಗತ್ತಿನ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್‌ಮಹಲ್ ಸುಂದರವಾದ ಕಲಾಕೃತಿಯನ್ನು ಒಳಗಿನಿಂದ ನೋಡಲು (Taj Mahal Restricted Zone) ಅನೇಕರು ಬಯಸುತ್ತಾರೆ. ಇಲ್ಲೊಬ್ಬ ತಾಜ್ ಮಹಲ್ ನ ಒಳಗಿನ ದೃಶ್ಯವನ್ನು ವಿಡಿಯೊ (Viral Video) ಮಾಡಿದ್ದು ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತಾಜ್ ಮಹಲ್ ನಿರ್ಬಂಧಿತ ವಲಯದ ಈ ವಿಡಿಯೊ ಶಹಜಹಾನ್- ಮುಮ್ತಾಜ್ ನ ಸಮಾಧಿಯನ್ನು ತೋರಿಸಿದೆ.
ತಾಜ್ ಮಹಲ್‌ನ ಐತಿಹಾಸಿಕ ಸಮಾಧಿಗಳ ನೋಟ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಇದನ್ನು ನೋಡಿ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸ್ಮಾರಕದ ಒಳಭಾಗವು ಸಾರ್ವಜನಿಕರಿಗೆ ತೆರೆದಿರುವುದಿಲ್ಲ ಎಂದು ಹೇಳಿದ್ದಾರೆ. ಮೊಘಲ್ ವಾಸ್ತುಶಿಲ್ಪದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ವಿಶ್ವದಾದ್ಯಂತ ಇರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್ ಗೆ ಈ ಮಹಲ್ ಅನ್ನು ನಿರ್ಮಿಸಿದ್ದನು. ಇಲ್ಲಿರುವ ಐತಿಹಾಸಿಕ ಸಮಾಧಿಗಳನ್ನು ರಕ್ಷಿಸಲು ತಾಜ್ ಮಹಲ್‌ನ ಒಳಭಾಗವನ್ನು ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಮುಚ್ಚಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಶಾಹಜಹಾನ್ ಮತ್ತು ಮುಮ್ತಾಜ್ ಮಹಲ್ ಸಮಾಧಿಯ ವಿಶೇಷ ದ್ವಾರವನ್ನು ತೋರಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ಅನೇಕರು ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು ಸ್ಮಾರಕದ ವಿಶೇಷ ಭಾಗಕ್ಕೆ ಆ ವ್ಯಕ್ತಿಗೆ ಪ್ರವೇಶ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ.
ಒಬ್ಬರು ಕಾಮೆಂಟ್ ನಲ್ಲಿ ತಾಜ್ ಮಹಲ್ ವಿಶ್ವದ ಅತ್ಯಂತ ಸುಂದರವಾದ ಕಟ್ಟಡ. ಭಾರತದ ಹೆಮ್ಮೆ ಇದು ಹೇಳಿದ್ದರೆ, ಇನ್ನೊಬ್ಬರು ವಿಶೇಷ ಸಮಾಧಿಗಳು ಸಾರ್ವಜನಿಕ ವೀಕ್ಷಣೆಗೆ ತೆರೆದಿದ್ದಾಗ ಒಳಗಿನ ಭಾಗವನ್ನು ನೋಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು, ನಾನು 1994-95ರ ಸುಮಾರಿಗೆ ತಾಜ್‌ಮಹಲ್‌ಗೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ಈ ಪ್ರದೇಶವು ಸಾರ್ವಜನಿಕರಿಗೆ ಮುಕ್ತವಾಗಿತ್ತು ಮತ್ತು ನಾವು ಇದನ್ನು ನೋಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Cindy Rodriguez Singh: ಮಗನನ್ನು ಕೊಂದು ಭಾರತದಲ್ಲಿ ಅವಿತಿದ್ದ ಅಮೆರಿಕದ ಮೋಸ್ಟ್ ವಾಂಟೆಡ್ ಹಂತಕಿ ಅರೆಸ್ಟ್!
ಕೆಲವರು ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, ಜನರು ಈ ಅದ್ಭುತವನ್ನು ಏಕೆ ಟ್ರೋಲ್ ಮಾಡುತ್ತಿದ್ದಾರೆಂದು ತಿಳಿದಿಲ್ಲ. ಆದರೆ ನಾನು ಒಮ್ಮೆ ತಾಜ್‌ಮಹಲ್‌ಗೆ ಹೋಗಿದ್ದೇನೆ ಮತ್ತು ಖಂಡಿತವಾಗಿಯೂ ಮತ್ತೆ ಹೋಗಲು ಬಯಸುತ್ತೇನೆ. ಇದು ಬೆರಗುಗೊಳಿಸುತ್ತದೆ. ಸುಂದರವಾಗಿದೆ ಮತ್ತು ಅದರ ಇತಿಹಾಸವು ಹೆಚ್ಚು ಆಕರ್ಷಕವಾಗಿದೆ ಎಂದು ಬರೆದಿದ್ದಾರೆ.