ಚೆನ್ನೈ:ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕೂದಲೆಳೆಯಲ್ಲಿ ಪಾರಾಗಿದ್ದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಕನ್ಯಾಕುಮಾರಿ-ದಿಬ್ರುಗಢ ಎಕ್ಸ್‌ಪ್ರೆಸ್ ಹತ್ತಲು ಹೋಗಿ 44 ವರ್ಷದ ಪ್ರಯಾಣಿಕನೊಬ್ಬ ಜಾರಿಬಿದ್ದಿದ್ದು, ನಂತರ ರೈಲ್ವೆ ಕಾನ್‌ಸ್ಟೇಬಲ್ ಒಬ್ಬರು ಆತನನ್ನು ರಕ್ಷಿಸಿದ್ದಾರೆ. ಕಟಕ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಜಾರಿಬಿದ್ದ ಪ್ರಯಾಣಿಕನನ್ನು ಪಶ್ಚಿಮ ಬಂಗಾಳದ ಮಿರ್ಜಾಪುರ ನಿವಾಸಿ ಎಂದು ಗುರುತಿಸಲಾಗಿದೆ. ವಿಡಿಯೊದಲ್ಲಿ ರೈಲು ಚಲಿಸಲು ಶುರುವಾಗುತ್ತಿದ್ದಂತೆ ಪ್ರಯಾಣಿಕನು ಅದನ್ನು ಹತ್ತಲು ಹೋಗಿದ್ದಾನೆ. ಆಗ ಆತ ಹಿಡಿತ ಕಳೆದುಕೊಂಡು ಪ್ಲಾಟ್‌ಫಾರ್ಮ್ ಮತ್ತು ರೈಲಿನ ಚಕ್ರಗಳ ನಡುವೆ ಬಿದ್ದಿದ್ದಾನೆ. ಆಗ ಅಲ್ಲಿದ್ದ ಕಾನ್‍ಸ್ಟೇಬಲ್ ಕೂಡಲೇ ಓಡಿ ಬಂದು ಸರಿಯಾದ ಸಮಯಕ್ಕೆ ಅವನನ್ನು ಕಾಪಾಡಿದ್ದಾನೆ. ಘಟನೆಯ ನಂತರ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆಯಂತೆ.
ವಿಡಿಯೊ ನೋಡಿ...
ವರದಿಗಳ ಪ್ರಕಾರ, ಒಡಿಶಾ ಡಿಜಿಪಿ ವೈಬಿ ಖುರಾನಿಯಾ ಅವರು ಕಾನ್‌ಸ್ಟೇಬಲ್ ಅವರ ಧೈರ್ಯವನ್ನು ಮೆಚ್ಚಿ 2,500 ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ. ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಚಲಿಸುತ್ತಿದ್ದ ರೈಲು ಹತ್ತುವಾಗ ವ್ಯಕ್ತಿಯೊಬ್ಬ ಜಾರಿ ಬಿದಿದ್ದು, ರೈಲ್ವೆ ಉದ್ಯೋಗಿಯೊಬ್ಬರು ಆತನನ್ನು ರಕ್ಷಿಸುವ ಮೂಲಕ ಸಂಭವಿಸಬಹುದಾದ ಭಾರೀ ದುರಂತವನ್ನು ತಪ್ಪಿಸಿದ್ದರು. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಬೆಚ್ಚಿ ಬೀಳಿಸಿತ್ತು. ಜೊತೆಗೆ ರೈಲ್ವೆ ಉದ್ಯೋಗಿಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದಾಗ ಎಂಟ್ರಿ ಕೊಟ್ಟೇ ಬಿಟ್ಟ ಗಂಡ! ಆಮೇಲೆ ನಡೆದಿದ್ದೇ ಬೇರೆ
ಇತ್ತೀಚೆಗೆ ಮುಂಬೈನಲ್ಲಿ ಆರ್‌ಪಿಎಫ್ ಕಾನ್‌ಸ್ಟೇಬಲ್ ಒಬ್ಬರ ತ್ವರಿತ ಚಿಂತನೆಯು ಚಲಿಸುವ ರೈಲಿನಿಂದ ಜಾರಿಬಿದ್ದ ಪ್ರಯಾಣಿಕನ ಜೀವವನ್ನು ಉಳಿಸಿತ್ತು. ಕೊಚುವೇಲಿ ಗರೀಬ್ರಥ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನು ರೈಲು ಹತ್ತಲು ಪ್ರಯತ್ನಿಸುವಾಗ ಪ್ಲಾಟ್‌ಫಾರ್ಮ್ ಮತ್ತು ರೈಲು ನಡುವಿನ ಅಂತರಕ್ಕೆ ಜಾರಿ ಬಿದ್ದಿದ್ದಾನೆ.