ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಲ್ಲಾಹು ವಿರುದ್ಧ ಅವಹೇಳನಕಾರಿ ಘೋಷಣೆ; ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

Crowd Chants Controversial Slogans: ಶನಿವಾರದಂದು ಲಂಡನ್‌ನಲ್ಲಿ ಬೃಹತ್ ವಲಸೆ ವಿರೋಧಿ ಪ್ರತಿಭಟನೆ ನಡೆಯಿತು. ಬ್ರಿಟೀಷ್ ಜನರು ಲಂಡನ್‌ನ ಬೀದಿಗಳಲ್ಲಿ ವಲಸೆ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಲಂಡನ್: ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ (Tommy Robinson) ನೇತೃತ್ವದಲ್ಲಿ ಶನಿವಾರ (ಸೆಪ್ಟೆಂಬರ್ 13) ಲಂಡನ್‌ (London) ನಲ್ಲಿ ಬೃಹತ್ ವಲಸೆ ವಿರೋಧಿ ಪ್ರತಿಭಟನೆ ನಡೆಯಿತು. ಯುನೈಟ್ ದಿ ಕಿಂಗ್‌ಡಮ್ ಎಂದು ಕರೆಯಲ್ಪಡುವ ಬೃಹತ್ ಪ್ರತಿಭಟನೆಯಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಜನರು ಒಟ್ಟುಗೂಡಿದರು. ಬ್ರಿಟೀಷ್ ಧ್ವಜಗಳನ್ನು ಬೀಸುತ್ತಾ, ವಿವಾದಾತ್ಮಕ ಘೋಷಣೆಗಳನ್ನು ಕೂಗಿದರು. ಬ್ರಿಟಿಷ್ ದೇಶಭಕ್ತರು ಲಂಡನ್‌ನ ಬೀದಿಗಳಲ್ಲಿ ವಲಸೆ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ.

ಅವರನ್ನು ಮನೆಗೆ ಕಳುಹಿಸು, ಅಲ್ಲಾಹು ಯಾರು? ಎಂಬ ಘೋಷಣೆಗಳನ್ನು ಜನಸಮೂಹದ ಕೆಲವು ಭಾಗಗಳು ಜೋರಾಗಿ ಕೂಗಿದ್ದಾರೆ. ವಲಸಿಗರು ಮತ್ತು ಮುಸ್ಲಿಮರ ವಿರುದ್ಧವಿದ್ದ ಘೋಷಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಪ್ರತಿಭಟನಾಕಾರರು ಅಲ್ಲಾಹು, ಅಲ್ಲಾಹು... ಅಲ್ಲಾಹು ಯಾರು? ಎಂದು ಕೂಗುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ನಂತರ ಪ್ರತಿಭಟನೆಯು ಹಿಂಸಾತ್ಮಕ ರೂಪವನ್ನು ಪಡೆಯಿತು. ಪ್ರತಿಭಟನೆಯಲ್ಲಿ ಸುಮಾರು 26 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, 25 ಮಂದಿಯನ್ನು ಬಂಧಿಸಲಾಗಿದೆ.

ವಿಡಿಯೊ ವೀಕ್ಷಿಸಿ:



ಈ ಘೋಷಣೆಗಳು ಮತ್ತು ಹಿಂಸಾಚಾರವು ಬ್ರಿಟನ್‌ನಲ್ಲಿ ಬಲಪಂಥೀಯ ಉಗ್ರವಾದದ ಅಪಾಯಕಾರಿ ಏರಿಕೆಯನ್ನು ಬಹಿರಂಗಪಡಿಸಿದೆ. ಮುಸ್ಲಿಂ ಗುಂಪುಗಳು ಮತ್ತು ಜನಾಂಗೀಯ ವಿರೋಧಿ ಪ್ರಚಾರಕರು ಈ ಘೋಷಣೆಗಳನ್ನು ಇಸ್ಲಾಮೋಫೋಬಿಕ್ ಮತ್ತು ತೀವ್ರ ಆಕ್ರಮಣಕಾರಿ ಎಂದು ಖಂಡಿಸಿದರು. ಆದರೆ, ರಾಬಿನ್ಸನ್ ಬೆಂಬಲಿಗರು ಈ ರ್ಯಾಲಿಯನ್ನು ದೇಶಭಕ್ತಿಯ ಪ್ರದರ್ಶನ ಮತ್ತು ಕಠಿಣ ವಲಸೆ ನಿಯಮಗಳಿಗೆ ಕರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಶನಿವಾರ ಲಂಡನ್‌ನ ಮಧ್ಯಭಾಗದಲ್ಲಿ ವಲಸೆ ವಿರೋಧಿ ಮೆರವಣಿಗೆ ನಡೆದಿದ್ದು, ಯುಕೆ ಸಂಸತ್ತಿನ ಪೀಠವಾದ ವೆಸ್ಟ್‌ಮಿನಿಸ್ಟರ್ ಕಡೆಗೆ ಜನರು ಗುಂಪುಗೂಡಿದರು. ವೈಟ್‌ಹಾಲ್‌ನ ಇನ್ನೊಂದು ತುದಿಯಲ್ಲಿ, ಸ್ಟ್ಯಾಂಡ್ ಅಪ್ ಟು ರೇಸಿಸಂ ಎಂಬ ಪ್ರಚಾರ ಗುಂಪು ಪ್ರತಿ-ಪ್ರದರ್ಶನವನ್ನು ನಡೆಸಿ, ದಕ್ಷಿಣದ ತುದಿಗೆ ಮೆರವಣಿಗೆ ನಡೆಸಿತು. ಅಲ್ಲಿ ಬಿಗಿ ಪೊಲೀಸ್ ಕಣ್ಗಾವಲಿನಲ್ಲಿ ರ್ಯಾಲಿ ನಡೆಯಿತು.

ಸತ್ಯಾಸತ್ಯತೆ

ಇನ್ನು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ಗ್ರೋಕ್ ಅವರನ್ನು ಕೇಳಿದಾಗ, ಈ ವಿಡಿಯೊ ಸೆಪ್ಟೆಂಬರ್ 13, 2025 ರಂದು ಲಂಡನ್‌ನಲ್ಲಿ ಟಾಮಿ ರಾಬಿನ್ಸನ್ ಆಯೋಜಿಸಿದ್ದ ದೊಡ್ಡ ವಲಸೆ ವಿರೋಧಿ ಪ್ರತಿಭಟನೆಯನ್ನು ತೋರಿಸುತ್ತದೆ. ಇದರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ಬ್ರಿಟೀಷ್ ಧ್ವಜಗಳನ್ನು ಬೀಸುತ್ತಿದ್ದರು ಎನ್ನಲಾಗಿದೆ. ಅವರನ್ನು ಮನೆಗೆ ಕಳುಹಿಸಿ ಮತ್ತು ಅಲ್ಲಾಹ ಯಾರು? ಎಂಬಂತಹ ಘೋಷಣೆಗಳು ಕಾರ್ಯಕ್ರಮದಲ್ಲಿ ಕೇಳಿಬಂದವು ಎಂದು ವರದಿಗಳು ದೃಢಪಡಿಸುತ್ತವೆ. ವರದಿಗಳ ಪ್ರಕಾರ, ಈ ಘೋಷಣೆಗಳು ಕೂಗಿದ್ದು ನಿಜವೆಂದು ಕಂಡುಬಂದಿದೆ.

ಇದನ್ನೂ ಓದಿ: IND vs PAK: ಪಾಕ್‌ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ನುಡಿಸಿದ ಡಿಜೆ; ವಿಡಿಯೊ ವೈರಲ್‌