ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಮೆಜಾನ್‌ ರೈನ್‌ ಫಾರೆಸ್ಟ್‌ನಲ್ಲಿ ಕಾಣಿಸಿಕೊಂಡ ದೈತ್ಯ ಅನಕೊಂಡ; ಏನಿದು ವೈರಲ್‌ ವಿಡಿಯೊ?

ಅಮೆಜಾನ್ ರೈನ್‌ಫಾರೆಸ್ಟ್‌ನ ಹಳ್ಳಧಲ್ಲಿ ದೈತ್ಯ ಅನಕೊಂಡವೊಂದು ಪತ್ತೆಯಾಗಿದೆ.ರೈನ್‌ಪಾರೆಸ್ಟ್‌ನ ಹಳ್ಳದಲ್ಲಿ ಈ ಅನಕೊಂಡ ಹರಿದಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಇದು ಅಸಲಿಯಾ ...ನಕಲಿಯಾ ಎಂಬ ಅನುಮಾನ ಕೂಡ ಕೆಲವರನ್ನು ಕಾಡಿದೆ.

ಅನಕೊಂಡ... ಹೆಸರು ಕೇಳುತ್ತಲೇ ಎಲ್ಲರೂ ಬೆಚ್ಚಿಬೀಳುತ್ತಾರೆ. ಈ ದೈತ್ಯ ಹಾವಿಗೆ ಸಂಬಂಧಪಟ್ಟ ಸಿನಿಮಾ ಕೂಡ ಬಂದಿತ್ತು. ಈಗ ಈ ಹಾವಿಗೆ ಸಂಬಂಧಪಟ್ಟ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಅಮೆಜಾನ್ ರೈನ್‌ಫಾರೆಸ್ಟ್‌ನ ಹಳ್ಳವೊಂದರಲ್ಲಿ ದೈತ್ಯ ಅನಕೊಂಡ ಹರಿದಾಡುತ್ತಿರುವಂತಹ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊ ನೋಡಿ ಶಾಕ್‌ ಆದ ನೆಟ್ಟಿಗರು ಅದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನಿಸಲು ಶುರುಮಾಡಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಸೆರೆಹಿಡಿಯಲಾದ ಈ ವಿಡಿಯೊದಲ್ಲಿ, ಹಚ್ಚ ಹಸಿರಿನಿಂದ ಆವೃತವಾದ ಹಳ್ಳದ ನಡುವಿನಲ್ಲಿ ದೈತ್ಯಾಕಾರದ ಹಾವೊಂದು ಚಲಿಸುತ್ತಿರುವ ಸೆರೆಯಾಗಿದೆ. ನೆಟ್ಟಿಗರೊಬ್ಬರು ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, "ಮತ್ತೊಮ್ಮೆ, ಅಮೆಜಾನ್ ಕಾಡುಗಳಲ್ಲಿ ದೊಡ್ಡ ಅನಕೊಂಡ ಹಾವು ಕಾಣಿಸಿಕೊಂಡಿದೆ" ಎಂದು ಬರೆದಿದ್ದಾರೆ.

ಅನಕೊಂಡದ ವಿಡಿಯೊ ಇಲ್ಲಿದೆ ನೋಡಿ...



ಆದರೆ ಈ ವಿಡಿಯೊ ನೋಡಿದವರು ಕೆಲವರು ಆ ಅಪರೂಪದ ದೃಶ್ಯ ಕಂಡು ಶಾಕ್‌ ಆಗಿದ್ದಾರೆ. ಕೆಲವರು ಇದು ಎಐ ಸಹಾಯದಿಂದ ರಚಿಸಲಾದ ವಿಡಿಯೊ ಎಂದು ಹೇಳಿದ್ದಾರೆ. ಅನಕೊಂಡಗಳು ಸಾಮಾನ್ಯವಾಗಿ ಅಮೆಜಾನ್ ಕಾಡುಗಳ ಒಳಭಾಗಗಳಲ್ಲಿ ಪತ್ತೆಯಾಗುತ್ತವೆ. 90ಕೆಜಿಗಿಂತ ಹೆಚ್ಚು ತೂಕವಿರುವ ಅವುಗಳನ್ನು ವಿಶ್ವದ ಅತಿದೊಡ್ಡ ಮತ್ತು ಭಾರವಾದ ಹಾವುಗಳು ಎಂದು ಪರಿಗಣಿಸಲಾಗಿದೆ. ಇವು ವಿಷಕಾರಿಯಲ್ಲವಂತೆ.

ಈ ಸುದ್ದಿಯನ್ನೂ ಓದಿ:Viral Video: ಪ್ರವಾಸಿಗರ ಎದುರು ಧುತ್ತೆಂದು ಪ್ರತ್ಯಕ್ಷವಾದ ಹಿಮಚಿರತೆ; ವಿಡಿಯೊ ವೈರಲ್!

ಕೆಲವು ತಿಂಗಳ ಹಿಂದೆ, ಬ್ರೆಜಿಲ್‍ನ ಪ್ರವಾಸಿಗರ ಗುಂಪು ಅನಕೊಂಡದ ಫೋಟೋಗಳು ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಈ ವಿಡಿಯೊದಲ್ಲಿ ಅನಕೊಂಡ ಹಾವು ನೀರಿನಲ್ಲಿ ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂದಿದ್ದು, ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಇನ್ಸೈಡ್ ಹಿಸ್ಟರಿ ಎಂಬ ಪುಟವು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು.

ಗ್ರಂಥಾಲಯದ ಪುಸ್ತಕದ ಕಪಾಟಿನಲ್ಲಿ 8 ಅಡಿ ಉದ್ದದ ಹಾವು!

ತೆಲಂಗಾಣದ ನಲ್ಗೊಂಡದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಗ್ರಂಥಾಲಯದ ಪುಸ್ತಕದ ಕಪಾಟಿನಲ್ಲಿ 8 ಅಡಿ ಉದ್ದದ ಹಾವೊಂದು ಮಲಗಿದ್ದು, ಪುಸ್ತಕಗಳನ್ನು ತೆಗೆದುಕೊಳ್ಳಲು ಬಂದ ವಿದ್ಯಾರ್ಥಿಗಳು ಹಾವನ್ನು ಕಂಡು ಭಯಭೀತರಾಗಿ ಅದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿಗಳು ಪುಸ್ತಕಗಳನ್ನು ಹುಡುಕುತ್ತಿದ್ದಾಗ ಹಾವು ಪುಸ್ತಕಗಳ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿದ್ದಾರೆ. ಸುಮಾರು 8 ಅಡಿ ಉದ್ದದ ಹಾವನ್ನು ನೋಡಿದ ಅವರು ಹೆದರಿಕೊಂಡು ಸಹಾಯಕ್ಕಾಗಿ ಕಿರುಚಿದ್ದಾರೆ. ವಿದ್ಯಾರ್ಥಿಗಳ ಕೂಗಾಟ ಕೇಳಿ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತ್ವರಿತವಾಗಿ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಾವಿನ ಮೇಲೆ ದಾಳಿ ಅದನ್ನು ಕೊಂದುಹಾಕಿದ್ದಾರೆ ಎನ್ನಲಾಗಿದೆ.