ಬೀಜಿಂಗ್: ಚೀನಾದ ಕ್ಸಿಶುವಾಂಗ್ಬನ್ನಾ ಪ್ರಿಮಿಟಿವ್ ಫಾರೆಸ್ಟ್ ಪಾರ್ಕ್‍ನ ಅಕ್ವೇರಿಯಂನಲ್ಲಿ ಮತ್ಸ್ಯಕನ್ಯೆಯಾಗಿ ಪ್ರದರ್ಶನ ನೀಡುತ್ತಿದ್ದ ರಷ್ಯಾದ ಯುವ ಪ್ರದರ್ಶಕಿಯೊಬ್ಬಳ ಮೇಲೆ ದೈತ್ಯ ಮೀನು ದಾಳಿ ಮಾಡಿದೆ. ಈ ಘಟನೆ ಪ್ರೇಕ್ಷಕರ ಮುಂದೆ ನಡೆದಿದ್ದು ಎಲ್ಲರೂ ಭಯಭೀತರಾಗಿದ್ದಾರೆ. 22 ವರ್ಷದ ಮತ್ಸ್ಯಕನ್ಯೆ ಕಲಾವಿದೆ ಮಾಶಾ ಅಕ್ವೇರಿಯಂ ಟ್ಯಾಂಕ್‍ನಲ್ಲಿ ಈಜುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಬಿಕಿನಿ ಟಾಪ್ ಮತ್ತು ಮತ್ಸ್ಯಕನ್ಯೆ ಬಾಲವನ್ನು ಧರಿಸಿದ ಮಾಶಾ ಟ್ಯಾಂಕ್ ಒಳಗೆ ಈಜುತ್ತಾ ಇರುವಾಗ ದೈತ್ಯ ಮೀನೊಂದು ಆಕೆಯ ಮೇಲೆ ದಾಳಿ ಮಾಡಿತು. ದೈತ್ಯ ಮೀನು ಮಾಶಾ ಮೇಲೆ ದಾಳಿ ಮಾಡಿ, ಅವಳ ತಲೆ, ಕುತ್ತಿಗೆ ಮತ್ತು ಕಣ್ಣಿಗೆ ಕಚ್ಚಿದಾಗ ಅಲ್ಲಿದ್ದ ಜನರು ಶಾಕ್ ಆಗಿದ್ದಾರೆ. ಕೊನೆಗೆ ಆಕೆ ಅದರಿಂದ ತಪ್ಪಿಸಿಕೊಂಡು ಈಜುತ್ತಾ ಮೇಲೆ ಬಂದಿದ್ದಾಳೆ.
ಈ ಸುದ್ದಿಯನ್ನೂ ಓದಿ: Viral News: ಜಪಾನ್‍ನಲ್ಲಿ ದಾಖಲೆ ಬೆಲೆಗೆ ಹರಾಜಾದ ಟ್ಯೂನಾ ಮೀನು; ದರ ಕೇಳಿದ್ರೆ ಶಾಕ್ ಆಗ್ತೀರಿ
ದಾಳಿಯಿಂದ ಮಾಶಾಳ ತಲೆ, ಕುತ್ತಿಗೆ ಮತ್ತು ಕಣ್ಣಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ತೀವ್ರವಾದ ನೋವಿನ ಹೊರತಾಗಿಯೂ, ಆಕೆ ಪ್ರದರ್ಶನವನ್ನು ಮುಂದುವರಿಸಲು ಟ್ಯಾಂಕ್‍ಗೆ ಮರಳಬೇಕಾಯಿತು ಎಂದು ರಷ್ಯಾದ ಮಾಧ್ಯಮ ಮೂಲಗಳು ತಿಳಿಸಿವೆ. ದಾಳಿಯ ನಂತರ ಮಾಶಾಗೆ ಪಾರ್ಕ್‍ನ ಮಾಲೀಕರು 78 ಪೌಂಡ್‍ಗಳನ್ನು ಹಾನಿಗೆ ಪರಿಹಾರವಾಗಿ ನೀಡಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಚರ್ಚೆ ಮಾಡಬಾರದೆಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.