ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬೆಂಕಿ ಉಪಯೋಗಿಸಿ ಮಸಾಜ್ ! ಈ ಕಣ್ಣಲ್ಲಿ ಏನೆಲ್ಲ ನೋಡ್ಬೇಕೊ ಎಂದ ನೆಟ್ಟಿಗರು

ದಕ್ಷಿಣ ಏಷ್ಯಾದ ಮಸಾಜ್ ಪಾರ್ಲರ್ ಒಂದರಲ್ಲಿ ಗ್ರಾಹಕನ‌ ಮೇಲೆ ಬೆಂಕಿ ಪ್ರಯೋಗ ಮಾಡುವ ವಿಡಿಯೊವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಮಸಾಜ್ ಪಾರ್ಲರ್‌ನಲ್ಲಿ‌ ಗ್ರಾಹಕನ ಮೇಲೆ ದಪ್ಪ ಟವೆಲ್ ಹೊದಿಸಿ ಬೆಂಕಿ ಹೊತ್ತಿಸಲಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮತ್ತೊಬ್ಬ ಒದ್ದೆಯಾದ ಟವೆಲ್‌ನಿಂದ ಬೆಂಕಿಯನ್ನು ನಂದಿಸಿರುವ ವಿಡಿಯೊ ವೈರಲ್ ಆಗಿದೆ.

massage viral

ಬೀಜಿಂಗ್‌: ಬ್ಯುಸಿ ಕೆಲಸದ ನಡುವೆ ಒಂದಿಷ್ಟು ರಿಲ್ಯಾಕ್ಸ್ ಮಾಡಲು ಮಸಾಜ್ ಪಾರ್ಲರ್ ಭೇಟಿ ನೀಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಗ್ರಾಹಕರನ್ನು ಸೆಳೆಯುವ ಸಲುವಾಗಿ ಅನೇಕ ಮಸಾಜ್ ಪಾರ್ಲರ್‌ಗಳು ಆಗಾಗ ಹೊಸ ಟೆಕ್ನಿಕ್ ಉಪಯೋಗಿಸುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ (Viral Video).

ದಕ್ಷಿಣ ಏಷ್ಯಾದ ಮಸಾಜ್ ಪಾರ್ಲರ್ ಒಂದರಲ್ಲಿ ಗ್ರಾಹಕನ‌ ಮೇಲೆ ಬೆಂಕಿ ಪ್ರಯೋಗ ಮಾಡುವ ಮಸಾಜ್‌ ಮಾಡುವ ಈ ವಿಡಿಯೊವೊಂದು ಬಹಳಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮೊದಲಿಗೆ ಮಸಾಜ್ ಪಾರ್ಲರ್‌ನಲ್ಲಿ ಗ್ರಾಹಕನ ಮೇಲೆ ದಪ್ಪ ಟವಲ್ ಹೊದಿಸಿ ಬೆಂಕಿ ಹೊತ್ತಿಸಲಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮತ್ತೊಬ್ಬ ಮಹಿಳೆ ಒದ್ದೆಯಾದ ಟವೆಲ್‌ನಿಂದ ಬೆಂಕಿಯನ್ನು ನಂದಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.



ಮಸಾಜ್ ಪಾರ್ಲರ್‌ನ ಈ ವಿಡಿಯೊ ಈ ವಿಡಿಯೊ ನೋಡಿ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಜನಪ್ರಿಯರಾಗಲು ಮಸಾಜ್ ಪಾರ್ಲರ್‌ನವರು ಏನು ಬೇಕಾದರೂ ಮಾಡುತ್ತಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಮಸಾಜ್ ಮಾಡಿಕೊಂಡು ಬೆಂಕಿ ಹತ್ತಿಸಿಕೊಂಡರೆ ವಿಮೆ ಕ್ಲೈಮ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: Viral Video: ಅಕ್ವೇರಿಯಂನಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ ದೈತ್ಯ ಮೀನು; ಅಷ್ಟಕ್ಕೂ ನಡೆದಿದ್ದೇನು?

ಫೈರ್ ಡ್ರ್ಯಾಗನ್ ಥೆರಪಿ!

ಈ ಥೆರಪಿಯನ್ನು ಚೀನಿಯರು ಹಾಗೂ ಟಿಬೆಟಿಯನ್ನರು ಹೆಚ್ಚಾಗಿ ಮಾಡಿಸಿಕೊಳ್ಳುತ್ತಾರೆ‌‌. ದೇಹದ ಉಷ್ಣತೆಯ ಸಮತೋಲನವನ್ನು ನಿಯಂತ್ರಿಸಲು ದಪ್ಪವಾದ ಟವಲ್ ಹೊದಿಸಿ‌ ಬೆಂಕಿ ಹಚ್ಚಲಾಗುತ್ತದೆ. ಈ ಮೂಲಕ ದೇಹದ ಉಷ್ಣತೆ ಸಮತೋಲನಗೊಳಿಸಲಾಗುತ್ತದೆ. ಅಲ್ಲದೆ ನಿದ್ರಾಹೀನತೆ ಸಮಸ್ಯೆ, ಬೊಜ್ಜಿನ ಸಮಸ್ಯೆ, ಇತರ ಸಣ್ಣ ಪುಟ್ಟ ರೋಗಗಳ ನಿವಾರಣೆ ಜತೆಗೆ ದೇಹದ ನೋವನ್ನು ಕಡಿಮೆ ಮಾಡಲು ಈ ಮಸಾಜ್ ಬಳಕೆ ಮಾಡಲಾಗುತ್ತದೆಯಂತೆ.