ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ಕೋತಿಗಳ ಕುಚೇಷ್ಟೆ ಒಂದೆರಡಲ್ಲ! ಕಪಿರಾಯನ ಕಾಟಕ್ಕೆ ಪ್ರವಾಸಿಗರು ಕಂಗಾಲು; ವಿಡಿಯೊ ಭಾರೀ ವೈರಲ್

ಬಾಲಿಯ ಉಬುದ್‌ನಲ್ಲಿರುವ ಮಂಕಿ ಫಾರೆಸ್ಟ್ ವೊಂದರಲ್ಲಿ ಪಾರ್ಕಿಂಗ್‌ ಮಾಡಿದ್ದ ದ್ವಿಚಕ್ರ ವಾಹನಗಳ ಸೀಟ್ ಕವರ್‌ ಕಿತ್ತು ಹಾಕಿರುವ ದೃಶ್ಯಾವಳಿಗಳು ಕಂಡು ಬಂದಿದ್ದು‌ ಕಪಿರಾಯನ ಚೇಷ್ಟೆಗೆ ಪ್ರವಾಸಿಗರು ಹೈರಾಣಾಗಿದ್ದಾರೆ. ಸದ್ಯ ಈ ಕುರಿತ ವಿಡಿಯೊವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಪರಿಣಾಮ ಬೈಕ್ ಸೀಟ್ ಗಳು ಹಾನಿಯಾಗಿದ್ದು ಈ ಬಗ್ಗೆ ವಿಡಿಯೊವೊಂದನ್ನು ಅರಣ್ಯ ಸಿಬ್ಬಂದಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Mischievous Monkeys

ಬಾಲಿ: ಕೋತಿಗಳು ಚೇಷ್ಟೆಗೆ ಬಹಳಷ್ಟು ಫೇಮಸ್. ಇವುಗಳು ಮಾಡುವ ಎಡವಟ್ಟಿನ ಚೇಷ್ಟೆಗಳು ಅಷ್ಟಿಷ್ಟಲ್ಲ. ಕೆಲವೊಮ್ಮೆ ಕೋತಿಗಳ ಚೇಷ್ಟೆಗಳಿಂದ ಮನುಷ್ಯರನ್ನು ಸತಾಯಿಸಿಬಿಡುತ್ತವೆ. ಇಲ್ಲೊಂದು ಕಡೆ ಇದೇ ರೀತಿಯ ಕಪಿಚೇಷ್ಟೆಯಿಂದ ಜನ ಹೈರಾಣಾಗಿರುವ ಘಟನೆಯೊಂದು ನಡೆದಿದ್ದು ಈ ಕುರಿತ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ಬಹಳಷ್ಟು ವೈರಲ್‌(Viral Video) ಆಗುತ್ತಿವೆ.

ಬಾಲಿಯ ಉಬುದ್ ನಲ್ಲಿರುವ ಮಂಕಿ ಫಾರೆಸ್ಟ್ ವೊಂದರಲ್ಲಿ ಪಾರ್ಕಿಂಗ್‌ ಮಾಡಿದ್ದ ದ್ವಿಚಕ್ರ ವಾಹನಗಳ ಸೀಟ್ ಕವರ್‌ ಕಿತ್ತು ಹಾಕಿರುವ ದೃಶ್ಯಾವಳಿಗಳು ಕಂಡು ಬಂದಿದ್ದು‌ ಕಪಿರಾಯನ ಚೇಷ್ಟೆಗೆ ಜನ ಬೇಸತ್ತು ಹೋಗಿದ್ದಾರೆ.



ಬಾಲಿಯ ಉಬುದ್ ನ ಪಾರ್ಕಿಂಗ್ ಸ್ಥಳದಲ್ಲಿ ಪ್ರವಾಸಿಗರು ಬೈಕ್ ನಿಲ್ಲಿಸಿ ಹೋಗಿರುವ ಸಂದರ್ಭ ಕೋತಿಗಳು ಸೀಟ್ ನ ಮೇಲೆ ತಮ್ಮ ಬಲ ಪ್ರದರ್ಶನ ಮಾಡಿವೆ. ಪಾರ್ಕಿಂಗ್‌ ಮಾಡಿದ್ದ ಬೈಕ್ ನ ಮೇಲೆ ಕೋತಿಗಳು‌ ಜಿಗಿದು ಬೈಕ್ ನ ಸೀಟ್‌ಗಳನ್ನ ಕಿತ್ತು ಹಾಕಿವೆ. ಪರಿಣಾಮ ಸೀಟ್ ಗಳು ಹಾನಿಯಾಗಿದ್ದು ಈ ಬಗ್ಗೆ ವಿಡಿಯೊವೊಂದನ್ನು ಅರಣ್ಯ ಸಿಬ್ಬಂದಿಯೊಬ್ಬರು ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ: Viral Video: 70 ಕೋಟಿ ರೂ. ಬೋನಸ್‌ ನೀಡಿದ ಚೀನಾದ ಈ ಕಂಪನಿ ಆದರೆ ಹಾಕಿದ್ದ ಷರತ್ತೇನು ಗೊತ್ತಾ?

ಮಂಗಗಳ ಚೇಷ್ಟೆಯಿಂದ ಹಲವಾರು ಬೈಕ್‌ಗಳು ಹಾನಿಗೊಳಗಾಗಿ ಇರುವುದನ್ನು ವಿಡಿಯೊದಲ್ಲಿ ನೋಡಬಹುದು.ನಿಲ್ಲಿಸಿದ ದ್ವಿಚಕ್ರ ವಾಹನಗಳ ಸೀಟ್ ಕವರ್‌ಗಳನ್ನು ಮಂಗಗಳು ಕಿತ್ತು ಹಾಕಿರುವುದು ಕಂಡುಬಂದಿದೆ. Balifornia ಎಂಬ ಖಾತೆ ಮೂಲಕ ‌ಈ ವಿಡಿಯೊ ಹಂಚಿಕೊಂಡಿದ್ದು ನೆಟ್ಟಿಗರು ಈ ಬಗ್ಗೆ ನಾನಾ ಬಗೆಯ ಕಮೆಂಟ್ ಹಾಕಿದ್ದಾರೆ‌. ಬಳಕೆದಾರ ರೊಬ್ಬರು ನೀವು ಈ ಪ್ರದೇಶಕ್ಕೆ ಭೇಟಿ ನೀಡುವುದಾದರೆ ಇಂತಹ ನಾಟಿ ಕೋತಿಗಳ ಬಗ್ಗೆ ಎಚ್ಚರ ವಹಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರ ಬಾಲಿಯ ಪಾರ್ಕಿಂಗ್ ಏರಿಯಾಕ್ಕೆ ‌ಸೆಕ್ಯುರಿಟಿ ಇರಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ.