ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶ್ವಾನದ ವಿಚಾರಕ್ಕೆ ಕಿತ್ತಾಡಿಕೊಂಡ ನೆರೆಹೊರೆಯವರು; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ!

ನಿಷೇಧಿತ ತಳಿಯ ನಾಯಿಯನ್ನು ತಮ್ಮ ಮನೆಯ ಮುಂದೆ ಕರೆದುಕೊಂಡು ಹೋಗಲು ನೆರೆಮನೆಯ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಆರೋಪಿ ಮಹಿಳೆ ತನ್ನ ಮಗ ಮತ್ತು ಕುಟುಂಬ ಸದಸ್ಯರ ಜೊತೆ ಸೇರಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲಖನೌ: ಉತ್ತರ ಪ್ರದೇಶದ ಮೀರತ್‌ನ ಪಲ್ಲವಪುರಂನಲ್ಲಿ ನಿಷೇಧಿತ ತಳಿಯ ನಾಯಿಯನ್ನು ತಮ್ಮ ಮನೆಯ ಮುಂದೆ ಕರೆದುಕೊಂಡು ಹೋಗಲು ನೆರೆಮನೆಯ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಆರೋಪಿ ಮಹಿಳೆ ತನ್ನ ಮಗ ಮತ್ತು ಕೆಲವು ಪುರುಷರಿಗೆ ಕರೆ ಮಾಡಿ ಮಹಿಳೆ ಮತ್ತು ಆಕೆಯ ಪತಿಯನ್ನು ಥಳಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ದಾಳಿಗೊಳಗಾದ ಮಹಿಳೆಯನ್ನು ಆರತಿ ಕದನ್ ಎಂದು ಗುರುತಿಸಲಾಗಿದೆ ಮತ್ತು ದಾಳಿ ಮಾಡಿದ ಆರೋಪಿಗಳನ್ನು ವೇದಾಂತ್ ಮಿಶ್ರಾ ಹಾಗೂ ಆತನ ತಾಯಿ ತುಲಿಕಾ ಮಿಶ್ರಾ ಎಂಬುದಾಗಿ ಗುರುತಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ, ಆರೋಪಿ ವೇದಾಂತ್ ಮಿಶ್ರಾ ಕಾರಿನಲ್ಲಿ ಬಂದು ಆರತಿಯ ಮೇಲೆ ಹಲ್ಲೆ ಮಾಡಿದ್ದಾನಂತೆ. ಹಾಗೇ ತುಲಿಕಾ ಮಿಶ್ರಾ ಕೂಡ ಆರತಿಯ ಮೇಲೆ ನಡೆಸಿದ್ದಾಳೆ. ದಾರಿಹೋಕರು ಮಧ್ಯಪ್ರವೇಶಿಸಿ ಇವರ ಜಗಳವನ್ನು ತಡೆಯಲು ಪ್ರಯತ್ನಿಸಿದರೂ ಇವರ ಹೊಡೆದಾಟ ನಿಲ್ಲಲಿಲ್ಲವಂತೆ.

ವಿಡಿಯೊ ನೋಡಿ...



ನಡೆದಿದ್ದೇನು?

ನಿಷೇಧಿತ ತಳಿಯ ನಾಯಿಯನ್ನು ಮನೆಯ ಹೊರಗೆ ಕರೆದುಕೊಂಡು ಹೋಗಲು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಕಾಲೋನಿಯ ಮಹಿಳೆ ತುಲಿಕಾ ಮಿಶ್ರಾ ಮತ್ತು ಅವಳ ಕುಟುಂಬ ಸದಸ್ಯರು ತಮ್ಮನ್ನು ಥಳಿಸಿದ್ದಾರೆ ಎಂದು ಆರತಿ ಕದನ್ ಪೊಲೀಸರಿಗೆ ದೂರು ನೀಡಿದ್ದಾಳೆ. ಇದಕ್ಕೆ ಪ್ರತಿಭಟಿಸಿದಾಗ, ಆರೋಪಿಗಳು ತಮ್ಮ ಪತಿ ಡಾ. ವೈಭವ್ ರಾಣಾ ಅವರ ಮೇಲೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾಲೋನಿಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.