ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಕ್ಕಳ ಎದುರೇ ರೈಲಿನಲ್ಲಿ ರಕ್ತ ಸೋರುವಂತೆ ಮಹಿಳೆ ಮೇಲೆ ಪೊಲೀಸ್‌ ಸಿಬ್ಬಂದಿಯಿಂದ ಹಲ್ಲೆ; ವಿಡಿಯೊ ವೈರಲ್‌

Railway Police: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರನ್ನು ಆಕೆಯ ಇಬ್ಬರು ಹೆಣ್ಣುಮಕ್ಕಳ ಎದುರೇ ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ರಕ್ತ ಬರುವಂತೆ ಥಳಿಸುತ್ತಿರುವ ವಿಡಿಯೊ ಸೋಷಿಯಲ್‌ ವೈರಲ್ ಆಗಿದೆ. ಸೀಟ್‌ ವಿಚಾರಕ್ಕೆ ಆರಂಭವಾದ ಜಗಳ ಹಿಂಸಾಚಾರಕ್ಕೆ ತಿರುಗಿತು.

ಸಾಂದರ್ಭಿಕ ಚಿತ್ರ

ಲಖನೌ, ನ. 21: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರನ್ನು ಆಕೆಯ ಇಬ್ಬರು ಹೆಣ್ಣುಮಕ್ಕಳ ಎದುರೇ ಸರ್ಕಾರಿ ರೈಲ್ವೆ ಪೊಲೀಸ್ (GRP) ಸಿಬ್ಬಂದಿಯೊಬ್ಬರು ರಕ್ತ ಬರುವಂತೆ ಥಳಿಸುತ್ತಿರುವ ವಿಡಿಯೊ ಸೋಷಿಯಲ್‌ ವೈರಲ್ (Viral Video) ಆಗಿದೆ. ಜನನಾಯಕ್‌ ಎಕ್ಸ್‌ಪ್ರೆಸ್‌ನಲ್ಲಿ (15211) ಸೀಟ್‌ಗಾಗಿ ಆರಂಭವಾದ ಜಗಳ ರಕ್ತಸಿಕ್ತವಾಗಿ ಬದಲಾಗಿದ್ದು, ಜಿಆರ್‌ಪಿ ಸಿಬ್ಬಂದಿಯ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ಅವರನ್ನು ನೆಲಕ್ಕೆ ತಳ್ಳಿ ಮನಬಂದಂತೆ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ಪುತ್ರಿಯರು ಮಧ್ಯ ಪ್ರವೇಶಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹಲ್ಲೆಯಿಂದಾಗಿ ಮಹಿಳೆಯ ಹಣೆಯಿಂದ ರಕ್ತಸ್ರಾವವಾಗಿದೆ.

ಸಂತ್ರಸ್ತ ಮಹಿಳೆಯನ್ನು ಬಿಹಾರ ಮೂಲದ ರೂಬಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅವರ ಹಣೆಗೆ ಗಾಯವಾಗಿದ್ದು, ರಕ್ತ ಸೋರಿಕೆಯಾಗಿದೆ. ವಿಡಿಯೊದಲ್ಲಿ ಅವರ ಮಕ್ಕಳಾದ ಲಕ್ಷ್ಮೀ ಮತ್ತು ಖುಷಿ ತಾಯಿಯನ್ನು ರಕ್ಷಿಸಲು ಮುಂದಾಗುತ್ತಿರುವುದು ಕಂಡು ಬಂದಿದೆ. ತಾಯಿಯನ್ನು ತಬ್ಬಿಕೊಂಡು ಪೊಲೀಸ್‌ ದಾಳಿಯನ್ನು ತಡೆಯಲು ಮುಂದಾಗಿದ್ದಾರೆ. ಅಳುತ್ತ ಮನವಿ ಮಾಡಿದರೂ ಪೊಲೀಸ್‌ ಸಿಬ್ಬಂದಿ ದಾಳಿ ಮುಂದುವರಿಸುತ್ತಲೇ ಹೋಗಿದ್ದಾನೆ ಎನ್ನಲಾಗಿದೆ. ಹಲ್ಲೆಯ ಸಂಬಂಧ ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ಲಲಿತ್ ಮತ್ತು ಅಜಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ರೂಬಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಘಟನೆ ವಿವರ

ನವೆಂಬರ್ 18ರಂದು ಉತ್ತರ ಪ್ರದೇಶದ ಮೊರಾದಾಬಾದ್ ನಿಲ್ದಾಣದಿಂದ ರೈಲು ಹೊರಟ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ಈ ಜಗಳಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರು ಸೇರಿ ಆರು ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ. ಬಿಹಾರದ ದರ್ಭಂಗಾದಿಂದ ಪಂಜಾಬ್‌ನ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಜನನಾಯಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೀಟ್‌ಗೆ ಸಂಬಂಧಿಸಿದಂತೆ 2 ಕುಟುಂಬಗಳ ನಡುವೆ ವಿವಾದ ಉಂಟಾಗಿ, ಅದು ಜಗಳಕ್ಕೆ ತಿರುಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದೆಹಲಿ ಪ್ರತಿಭಟಣೆ ವೇಳೆ ಮೋದಿ ಪರ ಘೋಷಣೆ ಕೂಗಿದ ಯುವಕನ ಮೇಲೆ ಗೂಂಡಾಗಳಿಂದ ಹಲ್ಲೆ

ಮೊರಾದಾಬಾದ್ ರೈಲ್ವೆ ವಿಭಾಗದ ಪ್ರಕಾರ ಸಾಮಾನ್ಯ ಬೋಗಿಗಳನ್ನು ಹೊಂದಿದ್ದ ಆ ಜನನಿಬಿಡ ರೈಲಿನ ಬೋಗಿಯಲ್ಲಿ ಸೀಟ್‌ಗಾಗಿ 2 ಕುಟುಂಬಗಳ ಮಧ್ಯೆ ಜಗಳದ ಕಿಡಿ ಹೊತ್ತಿಕೊಂಡಿತು. ಮಹಿಳೆಯೊಬ್ಬರು ಇಡೀ ಆಸನದ ಮೇಲೆ ಮಲಗಿದ್ದರು. ಆಗ ಮಗುವನ್ನು ಎತ್ತಿಕೊಂಡ ಬಂದ ಮತ್ತೊಬ್ಬ ಮಹಿಳೆ ಸೀಟ್‌ನಲ್ಲಿ ಕುಳಿತುಕೊಳ್ಳಲು ಜಾಗ ನೀಡುವಂತೆ ಮನವಿ ಮಾಡಿದರು. ಈ ವಿಚಾರವಾಗಿ ವಾದ-ಪ್ರತಿವಾದ ಆರಂಭವಾಗಿ ಜಗಳಕ್ಕೆ ತಿರುಗಿದಾಗ ಜಿಆರ್‌ಪಿ ಸಿಬ್ಬಂದಿ ಮಧ್ಯ ವೇಶಿಸಬೇಕಾಯ್ತು. ಆರಂಭದಲ್ಲಿ ರೂಬಿ ಮತ್ತು ಅವರ ಆಕೆಯ ಪುತ್ರಿಯರು ಪೊಲೀಸರನ್ನು ನಿಂದಿಸಿ, ಅವರೊಂದಿಗೆ ಅನುಚಿತವಾಗಿ ವರ್ತಿಸಿದರು ಎನ್ನಲಾಗಿದೆ.

ರೈಲು ಪ್ರಯಾಣಿಕ ಕಾಯ್ದಿರಿಸಿದ ಸೀಟ್‌ ಆಕ್ರಮಿಸಿಕೊಂಡ ಮಹಿಳೆ: ಮನವಿ ಮಾಡಿದರೂ ಬಿಟ್ಟುಕೊಡದೆ ಉದ್ಧಟತನ

ಇದರಿಂದ ಕೆರಳಿದ ಪೊಲೀಸರು ರೂಬಿ ಜತೆ ಜಗಳವಾಡಿದರು. ಕೊನೆಗೆ ಇದು ತಾರಕಕ್ಕೇರಿದ್ದು, ಪ್ರಯಾಣಿಕರ ಸಮ್ಮುಖದಲ್ಲಿ ಪರಸ್ಪರ ಹೊಡೆದಾಡಿದ್ದಾರೆ. ರೂಬಿ ಅವರನ್ನು ನೆಲಕ್ಕೆ ದೂಡಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ರೂಬಿ ಅವರ ಹಣೆಗೆ ಗಾಯವಾಗಿದ್ದು, ರಕ್ತ ಸೋರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಮಹಿಳೆಯದ್ದು ತಪ್ಪಿದೆ. ಆದರೂ ಈ ರೀತಿ ಹಲ್ಲೆ ನಡೆಸಬಾರದಿತ್ತು ಎಂದು ನೆಟ್ಟಿಗರು ಹೇಳಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author