ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುರುಷರ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಮೆಷಿನ್ ಅಳವಡಿಕೆ! ವಿಡಿಯೋ ನೋಡಿ ಸಮಾನತೆ ಎಂದು ಕಾಲೆಳೆದ ನೆಟ್ಟಿಗರು

ಸಾಮಾನ್ಯವಾಗಿ ಮಹಿಳೆಯರ ಶೌಚಾಲಯದಲ್ಲಿ ಇರಬೇಕಾದ ಸ್ಯಾನಿಟರಿ ಪ್ಯಾಡ್ ಮೆಷಿನ್, ಪುರುಷರ ಶೌಚಾಲಯದಲ್ಲಿ ಅಳವಡಿಸಿದರೆ ಹೇಗಿರುತ್ತದೆ? ಉತ್ತರಾಖಂಡದ ಪುರುಷರ ಶೌಚಾಲಯವೊಂದರಲ್ಲಿ ನಡೆದಿದೆ ಎನ್ನಲಾದ ಇಂತಹದ್ದೇ ಒಂದು ವಿಚಿತ್ರ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌‌ ಅಗಿದ್ದು, ನೆಟ್ಟಿಗರು, ʼಇದೇನಾ ಬ್ರೋ ನಿಜವಾದ ಲಿಂಗ ಸಮಾನತೆ ಎಂದು ತಮಾಷೆಯಾಗಿ ಕಮೆಂಟ್‌ ಮಾಡುತ್ತಿದ್ದಾರೆ.

ಸಂಗ್ರಹ ಚಿತ್ರ

ಡೆಹ್ರಾಡೂನ್‌: ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ವಿಚಿತ್ರ ಹಾಗೂ ಕುತೂಹಲಕಾರಿ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಅಚ್ಚರಿಗೊಳಿಸುವುದರ ಜೊತೆಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಉತ್ತರಾಖಂಡ ಮೂಲದ್ದು ಎನ್ನಲಾದ ಈ ವಿಡಿಯೋದಲ್ಲಿ, ಪುರುಷರ ಶೌಚಾಲಯದ (Gents Washroom) ಒಳಗೆ ಸ್ಯಾನಿಟರಿ ಪ್ಯಾಡ್ ವಿತರಿಸುವ 'ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್' (Sanitary Pad Vending Machine) ಅಳವಡಿಸಿರುವುದು ಕಂಡುಬಂದಿದೆ. ಸಮಾಜದಲ್ಲಿ ಋತುಚಕ್ರ (Menstruation) ಮತ್ತು ಮಹಿಳೆಯರ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಸ್ಥಳಗಳು, ಶಾಲೆ-ಕಾಲೇಜುಗಳು ಹಾಗೂ (Viral Video) ಮಹಿಳಾ ಶೌಚಾಲಯಗಳಲ್ಲಿ ಇಂತಹ ಯಂತ್ರಗಳನ್ನು ಅಳವಡಿಸುವುದು ಸಾಮಾನ್ಯ. ಆದರೆ, ನೇರವಾಗಿ ಪುರುಷರ ಶೌಚಾಲಯದಲ್ಲೇ ಈ ಯಂತ್ರವನ್ನು ಕಂಡು ಜನರು ದಿಗ್ಭ್ರಮೆಗೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಸಣ್ಣ ವೀಡಿಯೋ ತುಣುಕೊಂದು ಈಗ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೋಚಿಂಗ್ ಸೆಂಟರ್ ಅಥವಾ ಕಾಲೇಜು ಮಾದರಿಯ ಕಟ್ಟಡದ ಪುರುಷರ ಶೌಚಾಲಯದೊಳಗೆ ಈ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ ಅಳವಡಿಸಲಾಗಿದೆ. ವೀಡಿಯೋದಲ್ಲಿ ಪುರುಷರ ಯೂರಿನ್ ಪ್ಯಾನ್‌ಗಳ ಪಕ್ಕದಲ್ಲೇ ಸ್ಯಾನಿಟರಿ ಪ್ಯಾಡ್ ವಿತರಿಸುವ ಮೆಷಿನ್ ಗೋಡೆಗೆ ಅಳವಡಿಲಾಗಿದೆ.



ಪೋಸ್ಟ್‌ನಲ್ಲಿ ಬಾಲಿವುಡ್‌ನ 'ಚಾಹೂಂ ಮೈ ಯಾ ನಾ' ಎಂಬ ಮೆಲೋಡಿ ಹಾಡನ್ನು ಹಾಕಿ ಹಂಚಿಕೊಳ್ಳಲಾಗಿರುವ ಈ ವೀಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೋ ಉತ್ತರಾಖಂಡ ರಾಜ್ಯಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆಯಾದರೂ, ಈ ಮೆಷಿನ್ ಅನ್ನು ಪುರುಷರ ಶೌಚಾಲಯದಲ್ಲೇ ಏಕೆ ಅಳವಡಿಸಲಾಗಿದೆ ಮತ್ತು ಇದರ ನಿಖರ ಸ್ಥಳ ಯಾವುದು ಎಂಬುದು ಇನ್ನು ಅಧಿಕೃತವಾಗಿ ದೃಢಪಟ್ಟಿಲ್ಲ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವಿಭಿನ್ನವಾಗಿ ಕಮಂಟ್‌ಗಳನ್ನು ಮಾಡಿದ್ದು, ʼʼಇದೇನಾ ಲಿಂಗ ಸಮಾನತೆ? ಬ್ರೋ ಇದು ನಿಜವಾದ ಜೆಂಡರ್ ಈಕ್ವಾಲಿಟಿ' ಅಂದರೆ ಇದೇನಾ?ʼʼ ಎಂದು ಹಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "Men + Menstruation ಸೇರಿ ಇದು 'MENstruation' ಇರಬೇಕುʼʼ ಎಂದು ತಮಾಷೆ ಮಾಡಿದ್ದಾರೆ. ʼʼಅಸಲಿ ಹೀರೋಗಿರಿ ಎಂದರೆ ಹೆಂಡತಿಗೆ ಅಥವಾ ತಂಗಿಗೆ ಅಗತ್ಯವಿದ್ದಾಗ ಗಂಡಸರೇ ಪ್ಯಾಡ್ ತಂದುಕೊಡುವುದು, ಬಹುಶಃ ಅದಕ್ಕಾಗಿಯೇ ಇಲ್ಲಿದೆಯೇನೋʼʼ ಎಂದು ಕೆಲವು ಜನ ವ್ಯಂಗ್ಯವಾಡಿದ್ದಾರೆ. ಆಡಳಿತ ವ್ಯವಸ್ಥೆಗೆ ಟೀಕೆ ಮಾಡಿರುವ ಜನರು, ʼʼಸರಿಯಾದ ಸ್ಥಳ ಆಯ್ಕೆ ಮಾಡಿದ ಅಧಿಕಾರಿಗಳಿಗೆ ಹ್ಯಾಟ್ಸ್‌ಆಫ್ʼʼ ಎಂದು ತಮಾಷೆಯಾಗಿ ಕಮೆಂಟ್ಸ್‌ ಮಾಡಿದ್ದಾರೆ.

ಒಂದೆಡೇ ಈ ವೀಡಿಯೋ ಹಾಸ್ಯಕ್ಕೆ ಗ್ರಾಸವಾಗಿದ್ದರೂ, ಭಾರತದಲ್ಲಿ ಋತುಚಕ್ರದ ನೈರ್ಮಲ್ಯ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ಲಭ್ಯತೆಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ 'ಡಾ. ಜಯಾ ಠಾಕೂರ್ ವಿರುದ್ಧ ಭಾರತ ಸರ್ಕಾರ' ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು, ʼʼಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಋತುಚಕ್ರದ ನೈರ್ಮಲ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅವರ ಜೀವಿಸುವ ಮೂಲಭೂತ ಹಕ್ಕಿನ ಭಾಗವಾಗಿದೆʼʼಎಂದು ಹೇಳಿತ್ತು. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉಚಿತವಾಗಿ ಅಥವಾ ಸುಲಭವಾಗಿ ಸ್ಯಾನಿಟರಿ ಪ್ಯಾಡ್ ಸಿಗುವಂತೆ ವೆಂಡಿಂಗ್ ಮೆಷಿನ್‌ಗಳನ್ನು ಇಡಲು ಆದೇಶಿಸಲಾಗಿದೆ.

174 ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗಾಗಿ ಹನುಮಾನ್ ಚಾಲೀಸಾ ಪಠಿಸಿದ ಇಸ್ರೇಲ್ ಗಾಯಕ: ಮೈ ನವಿರೇಳಿಸುವ ವಿಡಿಯೊ ವೈರಲ್‌

ಆದರೆ, ಮಹಿಳೆಯರ ಶೌಚಾಲಯದ ಬದಲಿಗೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪುರುಷರ ಶೌಚಾಲಯದಲ್ಲಿ ಈ ಮೆಷಿನ್ ಅಳವಡಿಸಿರುವುದು ವ್ಯವಸ್ಥೆಯ ಎಡವಟ್ಟಿಗೆ ಕಾರಣವಾಗಿದೆ ಎಂದು ಜನರು ಹೇಳುತ್ತಿದ್ದಾರೆ.

Vishakha Bhat Heggar

View all posts by this author