ಮಂಗಳೂರು: ವಿದ್ಯಾರ್ಥಿನಿಯರ ಭರತನಾಟ್ಯದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಭಾರಿ ಮಳೆಯ ನಡುವೆಯೂ ವಿದ್ಯಾರ್ಥಿನಿಯರು ಹನುಮಾನ್ ಚಾಲೀಸಾ (Hanuman Chalisa)ಗೆ ಭರತನಾಟ್ಯ (Bharathanatyam) ಪ್ರದರ್ಶಿಸಿದ್ದಾರೆ. ಮಂಗಳೂರಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಈ ದೃಶ್ಯ ಕಂಡುಬಂತು.
ವಿದ್ಯಾರ್ಥಿನಿಯರು ಪ್ರದರ್ಶಿಸಿದ ಪ್ರತಿಯೊಂದು ಹೆಜ್ಜೆಯೂ ವೀಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡಿತು. ಮಳೆ ಬರುತ್ತಿರುವಾಗ ಇಂತಹ ಕಠಿಣ ನೃತ್ಯ ಪ್ರಕಾರವನ್ನು ಮಾಡಲು ನೃತ್ಯಗಾರರು ನೀಡಿದ ಸಮರ್ಪಣಾ ಮನೋಭಾವವನನು ನೆಟ್ಟಿಗರು ಶ್ಲಾಘಿಸಿದ್ದಾರೆ. ಹನುಮಾನ್ ಚಾಲೀಸಾಗೆ 16 ಮಂದಿ ವಿದ್ಯಾರ್ಥಿನಿಯರು ನೃತ್ಯ ಮಾಡಿದ್ದಾರೆ. ನಿರಂತರ ಮಳೆಯ ನಡುವೆಯೂ ಅವರು ಮೋಡಿ ಮಾಡುವ ಭರತನಾಟ್ಯವನ್ನು ಪ್ರದರ್ಶಿಸಿದರು.
ಹನುಮಾನ್ ಚಾಲೀಸಾದೊಂದಿಗೆ ಸಾಂಸ್ಕೃತಿಕ ನೃತ್ಯ ಶೈಲಿಯು ದೈವಿಕ ವಾತಾವರಣವನ್ನು ಸೃಷ್ಟಿಸಿತು. ಭಾರಿ ಮಳೆಯ ಹಿನ್ನೆಲೆಯಲ್ಲಿ ಅವರ ಏಕಕಾಲಿಕ ಚಲನೆಯು ಆಧ್ಯಾತ್ಮಿಕ ಶಕ್ತಿಯ ಭಾವನೆಯನ್ನು ಉಂಟುಮಾಡಿತು. ಇದು ನೃತ್ಯ ಪ್ರದರ್ಶನವನ್ನು ವಿಸ್ಮಯಕಾರಿ ದೃಶ್ಯವನ್ನಾಗಿ ಪರಿವರ್ತಿಸಿತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಮಳೆ ಪ್ರದರ್ಶನಕ್ಕೆ ಸೊಬಗನ್ನು ನೀಡಿರಬಹುದು. ಆದರೆ ಅದರಲ್ಲಿ ನೃತ್ಯ ಮಾಡುವುದು ಎಂದಿಗೂ ಸುಲಭವಲ್ಲ. ಚೆನ್ನಾಗಿ ಮಾಡಿದ್ದೀರಿ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಹುಡುಗಿಯರು ನೃತ್ಯ ಮಾಡುವುದನ್ನು ನೋಡಲು ಚೆನ್ನಾಗಿತ್ತು. ಆದರೆ ಅವರ ನಡುವೆ ಒಬ್ಬ ಹುಡುಗ ನೃತ್ಯ ಮಾಡುತ್ತಿರುವುದು ಅಚ್ಚರಿ ತಂದಿತು ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರೊಬ್ಬರು ಕಾಲೇಜಿನ ಗಣೇಶ ಉತ್ಸವದಲ್ಲಿ ನೀಡಿದ ಅದ್ಭುತ ನೃತ್ಯ ಪ್ರದರ್ಶನಕ್ಕಾಗಿ ಪ್ರಸ್ತುತ ಚರ್ಚೆಯಲ್ಲಿದ್ದಾರೆ. ಪ್ರಭುದೇವ ಅವರ ಬಾಲಿವುಡ್ ಹಾಡು ʼಮುಕಾಬಲಾʼಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಹಾಗೆಯೇ ನೆಟ್ಟಿಗರ ಹೃದಯ ಗೆದ್ದಿತ್ತು.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಯುವತಿಯೊಬ್ಬಳು ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಆಘಾತಕಾರಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಮೃತ ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ (23) ಎಂದು ಗುರುತಿಸಲಾಗಿದ್ದು, ಮಧ್ಯ ಪ್ರ ದೇಶದ ವಿದಿಶಾ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿತ್ತು. ಯುವತಿಯು ಸೋದರ ಸಂಬಂಧಿಯ ವಿವಾಹದಲ್ಲಿ ಪಾಲ್ಗೊಳ್ಳಲು ವಿದಿಶಾಗೆ ಆಗಮಿಸಿದ್ದರು. ವಿವಾಹ ಸಮಾರಂಭದ ವೇದಿಕೆಯ ಮೇಲೆ ನೃತ್ಯ ಮಾಡುವಾಗಲೇ ಆಕೆಗೆ ಹೃದಯಾಘಾತವಾಗಿದ್ದು, ವೇದಿಕೆಯಲ್ಲೇ ಹಠಾತ್ ಕುಸಿದು ಮೃತಪಟ್ಟಿದ್ದರು.
ಇದನ್ನೂ ಓದಿ: Noel Robinson: ಕೇರಳದ ಮುಂಡು ಧರಿಸಿ ನೃತ್ಯ ಮಾಡುತ್ತಿದ್ದ ಜರ್ಮನ್ ಟಿಕ್‌ಟಾಕರ್ ಅರೆಸ್ಟ್: ಇಲ್ಲಿದೆ ವೈರಲ್ ವಿಡಿಯೊ