ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಡಾನ್ಸ್‌ ಮಾಡೋ ಜೋಶ್‌ನಲ್ಲಿ ಗುಂಡು ಹಾರಿಸಿದ ವ್ಯಕ್ತಿ; ಇಬ್ಬರು ಡಾನ್ಸರ್ಸ್‌ಗೆ ಗಾಯ

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಬಿಜೋರಿ ಗ್ರಾಮದಲ್ಲಿ ಶನಿವಾರ ಕುವಾನ್ ಪೂಜಾನ್ (ಬಾವಿ ಪೂಜೆ) ಸಾಂಪ್ರದಾಯಿಕ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 'ಗೋಲಿ ಚಲ್ ಜಾವೇಗಿ' ಹಾಡಿಗೆ ಇಬ್ಬರು ಮಹಿಳೆಯರು ನೃತ್ಯ ಮಾಡುತ್ತಿದ್ದರು. ಹಾಡಿಗೆ ಪೂರಕವಾಗಿ ವ್ಯಕ್ತಿಯೊಬ್ಬ ಗುಂಡು ಹರಿಸಿದ್ದು, ಇದರಿಂದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಲಖನೌ: ಬಾವಿ ಪೂಜೆ (Kuan Poojan) ಸಾಂಪ್ರದಾಯಿಕ ಸಮಾರಂಭದಲ್ಲಿ ಗುಂಡೇಟಿನಿಂದ (fire) ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar pradesh) ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಬಿಜೋರಿ ಗ್ರಾಮದಲ್ಲಿ ಶನಿವಾರ ಕುವಾನ್ ಪೂಜಾನ್ (ಬಾವಿ ಪೂಜೆ) ಸಾಂಪ್ರದಾಯಿಕ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 'ಗೋಲಿ ಚಲ್ ಜಾವೇಗಿ' ಹಾಡಿಗೆ ಇಬ್ಬರು ಮಹಿಳೆಯರು ನೃತ್ಯ ಮಾಡುತ್ತಿದ್ದರು. ಹಾಡಿಗೆ ಪೂರಕವಾಗಿ ವ್ಯಕ್ತಿಯೊಬ್ಬ ಗುಂಡು ಹರಿಸಿದ್ದು, ಇದರಿಂದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಶನಿವಾರ ನಡೆದ ಬಾವಿ ಪೂಜೆ ಸಾಂಪ್ರದಾಯಿಕ ಸಮಾರಂಭದ ವೇಳೆ "ಗೋಲಿ ಚಲ್ ಜಾವೇಗಿ" ಹಾಡಿಗೆ ಇಬ್ಬರು ಮಹಿಳೆಯರು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು. ಈ ವೇಳೆ ಇಬ್ಬರು ಮಹಿಳೆಯರ ಮೇಲೆ ಗುಂಡೇಟು ತಗಲಿದ್ದು ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲ್ಲು ಅಹಿರ್ವಾರ್ ಎಂಬವರ ಮನೆಯಲ್ಲಿ ನಡೆದ ಸಮಾರಂಭದ ವೇಳೆ ಮಧ್ಯರಾತ್ರಿಯ ಇಬ್ಬರು ಮಹಿಳೆಯರು ನೃತ್ಯ ಪ್ರದರ್ಶನ ನೀಡುತ್ತಿದ್ದಾಗ ಜನಸಮೂಹದ ನಡುವೆ ಇದ್ದ ಅಮಿತ್ ಅಹಿರ್ವಾರ್ ಎಂಬಾತ ಪಿಸ್ತೂಲನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದು ರಾಧಾ ಮತ್ತು ರಾಮ ಎಂಬ ಇಬ್ಬರು ಮಹಿಳೆಯರ ಕಾಲಿಗೆ ತಗಲಿದ್ದು ಅವರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.



ತಕ್ಷಣ ಅಲ್ಲಿದ್ದವರು ಗಾಯಾಳು ಮಹಿಳೆಯರನ್ನು ಮಧ್ಯಪ್ರದೇಶದ ನೌಗಾಂಗ್ ಆಸ್ಪತ್ರೆಗೆ ಕರೆದುಕೊಂಡಿದ್ದು, ಅಲ್ಲಿಂದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಛತ್ತರ್‌ಪುರಕ್ಕೆ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ: Self Harming: ಕೌಟುಂಬಿಕ ಕಲಹಕ್ಕೆ ಬೇಸತ್ತು ಪಿಎಸ್‍ಐ ಆತ್ಮಹತ್ಯೆ; ಮೂರು ಪುಟದ ಡೆತ್‌ ನೋಟ್‌ ಲಭ್ಯ

ಈ ಕುರಿತು ಅಜನಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು 24 ಗಂಟೆಗಳ ಒಳಗೆ ಆರೋಪಿ ಅಮಿತ್ ಅಹಿರ್ವಾರ್ ನನ್ನು ಬಂಧಿಸಿದ್ದು, ಆರೋಪಿಯಿಂದ ಅಕ್ರಮ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಗುಂಡಿನ ದಾಳಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಂದೂಕಿನ ದುರುಪಯೋಗದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ವಿದ್ಯಾ ಇರ್ವತ್ತೂರು

View all posts by this author