ಬೆಂಗಳೂರು, ಆ. 2: ಸಿಲಿಕಾನ್ ಸಿಟಿ ಬೆಂಗಳೂರು ಅಂದಾಗ ಇಲ್ಲಿನ ಜೀವನ ಶೈಲಿಯೇ ದುಬಾರಿ, ಭಾರತದ ಇತರ ನಗರಗಳಿಗೆ ಹೋಲಿಸಿದರೆ ಇಲ್ಲಿ ಖರ್ಚು ವೆಚ್ಚ ಜಾಸ್ತಿ ಎನ್ನುವ ಮಾತಿದೆ. ಹೀಗಾಗಿ ಇಲ್ಲಿಗೆ ಆಗಮಿಸುವ ಯುವ ಜನರು ದುಡಿಯುವ ಅರ್ಧ ಭಾಗದಷ್ಟು ಹಣವನ್ನು ಖರ್ಚು ವೆಚ್ಚಗಳಿಗಾಗಿಯೇ ಮೀಸಲು ಇಡ ಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ವಾಸಿಸುವ ಯುವತಿಯೊಬ್ಬಳು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದನ್ನು ಶೇರ್ (Viral News) ಮಾಡಿದ್ದು, ʼʼಹೆಚ್ಚುವರಿ ಸಂಬಳವನ್ನು ಪಡೆಯುತ್ತಿದ್ದೇವೆ. ನಮ್ಮ ಆದಾಯ ಹೆಚ್ಚಾಗಿದೆ ಎಂದು ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಾಗಿಲ್ಲʼʼ ಎಂದಿದ್ದಾರೆ.
7 ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಿಮ್ರಿಧಿ ಮಖಿಜಾ, ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ವಿಡಿಯೊವೊಂದರಲ್ಲಿ ತಮ್ಮ ಅನಿಸಿಕೆ ಶೇರ್ ಮಾಡಿದ್ದಾರೆ. ನಗರದಲ್ಲಿ ಅವರು ಗಮನಿಸಿದ ಹಲವು ಅನಗತ್ಯ ಖರ್ಚುಗಳ ಬಗ್ಗೆ ಮಾತನಾಡಿದ್ದು, ʼʼಸಿಟಿಗೆ ಬಂದಿದ್ದೇವೆ, ಒಳ್ಳೆಯ ಕೆಲಸ ಸಿಕ್ಕಿದೆ ಅಂದಾಕ್ಷಣ ನಮ್ಮ ಜೀವನಶೈಲಿ ಬದಲಾಯಿಸಬೇಕಾಗಿಲ್ಲʼʼ ಎಂದು ಹೇಳಿದ್ದಾರೆ. ಆ ಮೂಲಕ ಐಷಾರಾಮಿ ಖರ್ಚು ವೆಚ್ಚಗಳನ್ನು ಪ್ರಶ್ನಿಸಿದ್ದಾರೆ.
ವಿಡಿಯೊ ನೋಡಿ:
ʼʼಒಂದೇ ಬಾರಿಗೆ ಕೆಫೆಗಳಲ್ಲಿ 5,000 ರುಪಾಯಿ ಬಿಲ್ ಮಾಡುವುದು, ಸುಮಾರು 20,000 ರುಪಾಯಿಗೆ ಉತ್ತಮ ಮನೆ ಸಿಗುವಾಗ ದುಬಾರಿ ಮನೆಯಲ್ಲಿ ವಾಸಿಸಲು ತಿಂಗಳಿಗೆ 40,000 ರುಪಾಯಿ ಬಾಡಿಗೆ ಪಾವತಿ ಮಾಡುವುದು, ಶಾಪಿಂಗ್‌ಗೆ ದುಬಾರಿ ಖರ್ಚು ಮಾಡುವುದು ಹೀಗೆ ನಿಮಗೆ ಖರ್ಚು ಮಾಡಲು ಸಾಕಷ್ಟು ಮಾರ್ಗವಿದ್ದರೂ ಉಳಿತಾಯದ ಕಡೆ ಗಮನಹರಿಸಬೇಕುʼʼ ಎಂದು ಕರೆ ನೀಡಿದ್ದಾರೆ.
ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ʼʼಆದಾಯ ಹೆಚ್ಚಾಯಿತು ಎಂದ ಕೂಡಲೇ ನಮ್ಮ ಜೀವನ ಮಟ್ಟವನ್ನು ಬದಲಾಯಿಸಬೇಕಾಗಿಲ್ಲ. ಮುಂಬರುವ ದಿನಗಳ ಬಗ್ಗೆ ನಾವು ಇಂದೇ ನಿರೀಕ್ಷೆ ಮಾಡಬೇಕಾಗಿಲ್ಲ. ಹಾಗಾಗಿ ನಾನು ಉಳಿತಾಯದ ಕಡೆ ಗಮನ ಹರಿಸಬೇಕುʼʼ ಎಂದು ಹೇಳಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು.
ಕೆಲವರು ಜೀವನದ ಆರಂಭದಲ್ಲಿಯೇ ಹಣವನ್ನು ಉಳಿಸುವುದು ಮುಖ್ಯ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ಕಠಿಣ ಪರಿಶ್ರಮದ ಪ್ರತಿಫಲವನ್ನು ಆನಂದಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ನೆಟ್ಟಿಗರೊಬ್ಬರು, ʼʼದುಬಾರಿ ಖರ್ಚಿನ ಬದಲಿಗೆ ನಿಮ್ಮ ಆದಾಯವನ್ನು 10 ಪಟ್ಟು ಹೆಚ್ಚಿಸಿಕೊಳ್ಳುವತ್ತ ಗಮನ ಕೊಡಿʼʼ ಎಂದು ಸಲಹೆ ನೀಡಿದ್ದಾರೆ.