ತಮ್ಮ ಜೀವನದ ಕೊನೆಯ ಕ್ಷಣ ಹತ್ತಿರದಲ್ಲಿದೆ ಎಂದು ತಿಳಿದರೆ ಯಾರಿಗೆ ತಾನೇ ದುಃಖ ಆಗಲ್ಲ..? ವೈರಾಗ್ಯದಿಂದ ಆಹಾರ, ನೀರು ಬಿಟ್ಟು ಚಿಂತೆ ಮಾಡಲು ಶುರುಮಾಡುತ್ತಾನೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕೊನೆಯ ದಿನ ಸಮೀಪವಾಗಿದೆ ಎಂದು ತಿಳಿದ ಕೂಡಲೇ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಜೀವಂತವಾಗಿರುವಾಗಲೇ ವಿದಾಯ ಪಾರ್ಟಿ ಆಚರಿಸಿದ್ದಾನೆ. ಆತನ ಮಗಳು ಇದರ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ವೈರಲ್(Viral Video) ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ಒಳಗಾದ ತಾನು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ತಿಳಿದ ನಂತರ ಈ ವ್ಯಕ್ತಿ ವಿದಾಯ ಹೇಳಲು ತನ್ನ ಹತ್ತಿರದ ಮತ್ತು ಪ್ರೀತಿಪಾತ್ರರೊಂದಿಗೆ ಅರ್ಥಪೂರ್ಣ ಸಮಯವನ್ನು ಕಳೆಯಲು ನಿರ್ಧರಿಸಿದ್ದಾನೆ. ಹೀಗಾಗಿ ಈ ವಿದಾಯ ಪಾರ್ಟಿಯನ್ನು ಮಾಡಿದ್ದಾನೆ ಎನ್ನಲಾಗಿದೆ.
"ನನ್ನ ತಂದೆ ಒಬ್ಬ ಲೆಜೆಂಡ್! ನಿಮ್ಮ ದೇಶದಲ್ಲಿ ಹೇಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ಪೋಲೆಂಡ್‍ನಲ್ಲಿ , ನೀವು ಸಾಯುತ್ತಿದ್ದೀರಿ ಎಂದು ತಿಳಿದಾಗ ಜನರು ಅವರನ್ನು ಕೊನೆಯ ಗಳಿಗೆಯಲ್ಲಿ ಗೌರವಿಸುವ ಸಂಪ್ರದಾಯವಿದೆ. ಇದನ್ನು ಸ್ಟೈಪಾ ಎಂದು ಕರೆಯಲಾಗುತ್ತದೆ" ಎಂದು ಆ ವ್ಯಕ್ತಿಯ ಮಗಳು ತಿಳಿಸಿದ್ದಾಳೆ. “ ನನ್ನ ತಂದೆ ದಿಟ್ಟ ಹಾಗೂ ಧೈರ್ಯಶಾಲಿಯಾಗಿದ್ದು, ಅವರು ವಿದಾಯ ಪಾರ್ಟಿಯನ್ನು ಆಚರಿಸಿದ್ದಾರೆ" ಎಂದು ಆಕೆ ಹೇಳಿದ್ದಾಳೆ.
ಈ ವಿಡಿಯೊ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಒಬ್ಬ ವ್ಯಕ್ತಿಯು ಪೋಸ್ಟ್ ಮಾಡಿ, "ನಾವು ಮತ್ತೊಂದು ಆಯಾಮಕ್ಕೆ ಪರಿವರ್ತನೆಗೊಳ್ಳಲು ಈ ರೀತಿ ತಯಾರಿ ನಡೆಸಬೇಕು” ಎಂದು ಹೇಳಿದ್ದಾರೆ. ಇನ್ನೊಬ್ಬರು, "ನಾನು ನೋಡಿದ ಅದ್ಭುತವಾದ ಕ್ಷಣ ಇದಾಗಿದೆ. ರಾಕ್ ಸ್ಟಾರ್ ತಂದೆ ಮತ್ತು ರಾಕ್ ಸ್ಟಾರ್ ಮಗಳು. ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದಿದ್ದಾರೆ. ಮೂರನೆಯವರು, "ಇದು ತುಂಬಾ ಒಳ್ಳೆಯ ಕೆಲಸ. ನಾವು ವಯಸ್ಸಾದಂತೆ, ನಾವು ನಮ್ಮ ಪ್ರಯಾಣದ ಅಂತ್ಯವನ್ನು ಸ್ವೀಕರಿಸಬೇಕು. ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಹೆಚ್ಚಿನ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ನನಗೆ ಖಾತ್ರಿಯಿದೆ!” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:shocking news: ಬೆಂಗಳೂರಿಗರೇ ಹುಷಾರ್, ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್!
ಬೆಂಗಳೂರಿನ ಹಲವಾರು ಹೋಟೆಲ್‌ಗಳು, ಈಟರಿಗಳಲ್ಲಿ ನೀಡಲಾಗುತ್ತಿರುವ ಇಡ್ಲಿಗಳಲ್ಲೂ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ. ಈ ಹಿಂದೆ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಹಾಗೂ ಪಾನಿಪುರಿಗಳ ಪರಿಶೀಲನೆಯನ್ನೂ ಹೀಗೇ ನಡೆಸಿ ಅವುಗಳಲ್ಲಿ ಕ್ಯಾನ್ಸರ್‌ಕಾರಕ ವಿಷವಿರುವ ಆಘಾತಕಾರಿ ವಿಷಯವನ್ನು ಇಲಾಖೆ ಬಹಿರಂಗಪಡಿಸಿತ್ತು.
ಇಡ್ಲಿಯನ್ನು ಬೇಯಿಸಲು ಬಳಸಲಾಗುವ ಸ್ಟೀಮರ್‌ಗಳಲ್ಲಿ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದ್ದು, ಈ ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಹೊಮ್ಮುತ್ತಿವೆ. ಹೀಗಾಗಿ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವ ಆಹಾರ ಮಳಿಗೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 254 ತಿನಿಸುಗಳ ತಪಾಸಣೆ ನಡೆಸಲಾಗಿದ್ದು, 24 ತಿನಿಸು ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ.