ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕೆನಡಾದಲ್ಲಿ ಕಸ ಎಸೆದ ಭಾರತೀಯ ದಂಪತಿ; ಉಗಿದು ಉಪ್ಪಿನ ಕಾಯಿ ಹಾಕಿದ ಸ್ಥಳೀಯರು!

ಕೆನಡಾದಲ್ಲಿ ಕಾರಿನಲ್ಲಿ ಬಂದ ದಂಪತಿ ಕಾಡಿನ ರಸ್ತೆಬದಿಯಲ್ಲಿ ಕಸಗಳನ್ನು ಎಸೆದಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದು, ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಕಸ ಎಸೆದ ದಂಪತಿ ಭಾರತೀಯ ಮೂಲದವರು ಎಂದ ನೆಟ್ಟಿಗರು ಅವರ ವಿರುದ್ಧ ಟೀಕೆ ಮಾಡಿದ್ದಾರೆ.

ಕೆನಡಾದಲ್ಲಿ ಕಸ ಎಸೆದ ಭಾರತೀಯ ದಂಪತಿಗೆ ಸ್ಥಳೀಯರಿಂದ ಫುಲ್‌ ಕ್ಲಾಸ್‌!

Profile pavithra Jul 15, 2025 4:20 PM

ಒಟ್ಟಾವಾ: ಕೆನಡಾದಲ್ಲಿ(Canada) ಕಾಡಿನ ರಸ್ತೆಬದಿಯಲ್ಲಿ ದಂಪತಿ ಕಸಎಸೆದ ದೃಶ್ಯವೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೊದಲ್ಲಿರುವ ದಂಪತಿ ಭಾರತೀಯ ಮೂಲದವರು ಎಂದು ನೆಟಿಜನ್‌ಗಳು ಕಿಡಿಕಾರಿದ್ದಾರೆ. ಕೆನಡಾವನ್ನು ಕಲುಷಿತಗೊಳಿಸಿದ್ದಕ್ಕಾಗಿ ಅನೇಕರು ಭಾರತೀಯರನ್ನು ಟೀಕಿಸಿದ್ದಾರೆ. ಮತ್ತು ಇನ್ನೂ ಹಲವರು ದಂಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ತಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ದಂಪತಿ ಕೈಯಲ್ಲಿದ್ದ ಕಸ ತುಂಬಿದ ಚೀಲಗಳನ್ನು ಕಾಡಿನ ರಸ್ತೆಬದಿಯಲ್ಲಿ ಎಸೆಯುವುದನ್ನು ಸೆರೆಹಿಡಿಯಲಾಗಿದೆ. ಆದರೆ ಇದು ಕಸವೇ ಎಂದು ಖಚಿತವಿಲ್ಲ. ಆದರೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಮಾತ್ರ ಇದು ಕಸ ಎಂದು ಮತ್ತು ದಂಪತಿ ಭಾರತೀಯ ಮೂಲದವರು ಎಂದು ಊಹಿಸಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಜನಾಂಗೀಯ ಟೀಕೆಗಳು ಕೇಳಿಬಂದಿವೆ.

ವಿಡಿಯೊ ಇಲ್ಲಿದೆ ನೋಡಿ...



ಒಬ್ಬ ನೆಟ್ಟಿಗರು, "ಸೋಮಾರಿಗಳು, ಕಿಡಿಗೇಡಿಗಳು. ಅವರು ಮಾಡಿದ ತಪ್ಪಿಗೆ ಶಿಕ್ಷೆ ನೀಡಲೇಬೇಕು. ಅವರನ್ನು ಹುಡುಕಿ, ಅದನ್ನು ಸ್ವಚ್ಛಗೊಳಿಸಿ" ಎಂದು ಬರೆದಿದ್ದಾರೆ. ಮತ್ತೊಬ್ಬ ಭಾರತೀಯ ನೆಟ್ಟಿಗರು, "ನಾನು ಭಾರತದವನು ಮತ್ತು ಈ ನಡವಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇಂತಹ ಜನರಿಂದ ಭಾರತಕ್ಕೆ ಕೆಟ್ಟ ಹೆಸರು ಬರುತ್ತಿದೆ" ಎಂದು ಬರೆದಿದ್ದಾರೆ. "ಕಸ, ಮಲ ಮತ್ತು ಮಾಲಿನ್ಯದಿಂದಾಗಿ ಭಾರತವು ಒಂದು ಕೊಳಚೆ ಪ್ರದೇಶವಾಗಿದೆ ಮತ್ತು ಈಗ ಜನರು ತಮ್ಮ ಕೆಟ್ಟ ಅಭ್ಯಾಸಗಳನ್ನು ಕೆನಡಾದಲ್ಲಿ ಮಾಡುತ್ತಿದ್ದಾರೆ" ಎಂದು ಮತ್ತೊಬ್ಬರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಹಸುವಿನ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಕಿಡಿಗೇಡಿ; ಪೊಲೀಸರ ಕೈಗೆ ಸಿಕ್ಕಿಬೀಳ್ತಿದ್ದಂತೆ ಈತ ಮಾಡಿದ್ದೇನು ಗೊತ್ತಾ?

ಈ ನಡುವೆ ಕೆಲವರು ದಂಪತಿಗೆ ಬೆಂಬಲವಾಗಿ ಕಾಮೆಂಟ್‍ ಮಾಡಿದ್ದಾರೆ. ದಂಪತಿ ಕಾಡು ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿರಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬರು "ಅದು ಕಸವಾಗಿದ್ದರೆ, ಸಾಮಾನ್ಯವಾಗಿ ಆ ವ್ಯಕ್ತಿಯು ಇಡೀ ಚೀಲವನ್ನು ಕಸದೊಂದಿಗೆ ಎಸೆಯುತ್ತಿದ್ದರು" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಅವರು ಪಕ್ಷಿಗಳಿಗೆ ಅಥವಾ ಯಾವುದೋ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿರಬಹುದು" ಎಂದು ಬರೆದಿದ್ದಾರೆ.