ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಮನೆ ಬಾಗಿಲಿಗೆ-ಮನೆ ಮಗ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಲಿ

ಕಸ ವಿಲೇವಾರಿ ಮಾಡುವ ಸಲುವಾಗಿ ತಂದ ಟಾಟಾ ಎಸಿ ವಾಹನ ಮತ್ತು ತಳ್ಳುವ ಗಾಡಿಗಳು ಬಳಕೆ ಯಾಗದೆ ನಿಂತಲ್ಲೇ ತುಕ್ಕು ಹಿಡಿದು ಹಾಳಾಗಿ ಹೋಗಿದೆ. ರಿಪೇರಿ ಮಾಡಿಸಿ ಇಲ್ಲವೆ ಅನುಪ ಯುಕ್ತ ವಸ್ತು ಗಳನ್ನು ಹರಾಜು ಹಾಕಿ ಎಂದು ಸಲಹೆ ಕೇಳಿಬಂದಿತು. ಸಿದ್ದರಾಮಯ್ಯ ಎಂಬ ವ್ಯಕ್ತಿ ರಸ್ತೆ ಜಾಗವನ್ನು ಒತ್ತುವರಿ ಮಾಡಿ ಶೆಡ್ ನಿರ್ಮಿಸಿದ್ದಾರೆ.

ಮನೆ ಬಾಗಿಲಿಗೆ-ಮನೆ ಮಗ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಲಿ

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭೆ ಸಾಮಾನ್ಯ ಸಭೆ ನಡೆಯಿತು. -

Ashok Nayak Ashok Nayak Sep 7, 2025 12:20 AM

ಚಿಕ್ಕನಾಯಕನಹಳ್ಳಿ : ಶಾಸಕ ಸಿ.ಬಿ.ಸುರೇಶಬಾಬು ಕೈಗೊಂಡಿರುವ ಮನೆ ಬಾಗಿಲಿಗೆ-ಮನೆ ಮಗ ಜನಪರ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಅಧಿಕಾರಿಗಳು ಶ್ರಮಿಸಬೇಕು ಎಂದು ಪುರಸಭಾ ಸದಸ್ಯ ಟಿಂಬರ್ ಮಲ್ಲೇಶ್ ತಿಳಿಸಿದರು.

ಪುರಸಭಾ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಅವಕಾಶ ವಂಚಿತರ ಸೇವೆ ಮಾಡುವುದು ರಾಜಕಾರಿಣಿಗಳ ಜವಾಬ್ದಾರಿಯಷ್ಟೇ ಅಲ್ಲ, ಅಧಿಕಾರಿಗಳ ಪಾಲ್ಗೊಳ್ಳುವಿಕೆಯು ಅಗತ್ಯ. ಜನರ ಅರ್ಜಿಯಲ್ಲಿನ ನೋವನ್ನು ಅರ್ಥೈಸಿಕೊಂಡು ಜನಪರವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ಪುರಸಭೆಯ ಕಸ ಸಂಗ್ರಹ ಮಾಡುವ ವಾಹನಗಳ ಡ್ರೈವರ್‌ಗಳ ಚಾಲನಾ ಪರವಾನಗಿ, ಎಫ್‌ಸಿ, ಇನ್ಸೂರೆನ್ಸ್, ಹಾಗು ದಾಖಲಾತಿಗಳು ಚಾಲನೆಯಲ್ಲಿರಬೇಕು. ಅವಧಿ ಮೀರಿದ ವಾಹನಗಳನ್ನು ರಸ್ತೆಗೆ ಇಳಿಸಬೇಡಿ ಎಂದು ಪುರಸಭಾ ನಾಮಿನಿ ಸದಸ್ಯ ಮಹಮದ್ ಹುಸೇನ್ ಮನವಿ ಮಾಡಿದರು. ಕಸ ವಿಲೇವಾರಿ ಮಾಡುವ ಸಲುವಾಗಿ ತಂದ ಟಾಟಾ ಎಸಿ ವಾಹನ ಮತ್ತು ತಳ್ಳುವ ಗಾಡಿಗಳು ಬಳಕೆಯಾಗದೆ ನಿಂತಲ್ಲೇ ತುಕ್ಕು ಹಿಡಿದು ಹಾಳಾಗಿ ಹೋಗಿದೆ.

ಇದನ್ನೂ ಓದಿ: Tumkur News: ʼಆಪರೇಷನ್ ಸಿಂಧೂರ ವಿಜಯೋತ್ಸವʼ ಆ.30ಕ್ಕೆ: ಸೊಗಡು ಶಿವಣ್ಣ

ರಿಪೇರಿ ಮಾಡಿಸಿ ಇಲ್ಲವೆ ಅನುಪ ಯುಕ್ತ ವಸ್ತುಗಳನ್ನು ಹರಾಜು ಹಾಕಿ ಎಂದು ಸಲಹೆ ಕೇಳಿ ಬಂದಿತು. ಸಿದ್ದರಾಮಯ್ಯ ಎಂಬ ವ್ಯಕ್ತಿ ರಸ್ತೆ ಜಾಗವನ್ನು ಒತ್ತುವರಿ ಮಾಡಿ ಶೆಡ್ ನಿರ್ಮಿಸಿದ್ದಾರೆ. ರಸ್ತೆಯನ್ನು ತೆರವುಗೊಳಿಸುವ ಕುರಿತು ಕೋರ್ಟ್ ತೀರ್ಪು ನೀಡಿದೆ. ಆದರೆ ಇದುವೆರೆಗೂ ತೆರವು ಕಾರ್ಯ ನಡೆದಿಲ್ಲ. ಒತ್ತುವರಿ ತೆರವುಗೊಳಿಸಲು ಪುರಸಭೆ ಮುಂದಾಗಬೇಕೆಂದು ಸದಸ್ಯೆ ಪೂರ್ಣಿಮಾ ಆಗ್ರಹಿಸಿದರು.

ಇಂದಿರಾ ಕ್ಯಾಂಟೀನ್ ದುರಸ್ಥಿ ಕಾಮಾಗಾರಿಗೆ 15 ನೇ ಹಣಕಾಸಿನ ಯೋಜನೆಯ ಹಣ ಬಳಸಿಕೊಳ್ಳ ಬೇಕು ಆದರೆ 4.3 ಲಕ್ಷ ಹಣವನ್ನು ಪುರಸಭೆಯ ನಿಧಿಯಿಂದ ಬಿಡುಗಡೆ ಮಾಡಿಲಾಗಿದೆ ಎಂದು ಸದಸ್ಯ ಶ್ಯಾಮ್ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಮಂಜಮ್ಮ ಮತ್ತು ಪ್ರಥಮದರ್ಜೆ ಸಹಾಯಕ ಮಧು ಅವರ ಅವಲಂಬಿತ ಕುಟುಂಬ ಸದಸ್ಯರ ಚಿಕಿತ್ಸಾ ವೆಚ್ಚವನ್ನು ಪುರಸಭಾ ನಿಧಿಯಿಂದ ಭರಿಸಲು ಸಭೆಯಲ್ಲಿ ತಕರಾರು ಕೇಳಿಬಂದಿತು. ಅಧಿಕಾರಿಗಳು ಸ್ಪಷ್ಟಪಡಿಸಲು ಮುಂದಾದಾಗ ಮೇಲಾಧಿಕಾರಿಗಳಿಗೆ ಪತ್ರ ಬರೆದು ತೀರ್ಮಾನಿಸಲಾಗುವುದು ಎಂದು ಉಪಾಧ್ಯಕ್ಷ ರಾಜಶೇಖರ್ ಸಭೆಗೆ ತಿಳಿಸಿದರು.

ಸಿಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸಿ

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಣಿ ಭಾದಿತ ಹಣವನ್ನು ಬಳಸಿಕೊಂಡು ಸಿಟಿ ಸ್ಕಾö್ಯನ್ ಘಟಕವನ್ನು ಆರಂಭಿಸಬೇಕು. ಇದರಿಂದ ರೋಗಿಗಳು ರೋಗ ಪತ್ತೆ ಪರೀಕ್ಷೆಗಳಿಗಾಗಿ ದುಬಾರಿ ಮೊತ್ತ ಭರಿಸುವುದು ತಪ್ಪಲಿದೆ. ವಾರ್ಡಿನಲ್ಲಿ ನಿಯಮಿತವಾಗಿ ಆಯಾ ವಾರ್ಡಿನ ಸದಸ್ಯರೊಂದಿಗೆ ಸಭೆಗಳನ್ನು ನಡೆಸಿ ತಮ್ಮ ವಾರ್ಡಿನ ಸಮಸ್ಯೆಗಳ ನಿವಾರಣೆಗೆ ಕೈಜೋಡಿಸಬೇಕು ಎಂದು ಪುರಸಭಾ ಸದಸ್ಯೆ ಮಮತಾ ಮನವಿ ಮಾಡಿಕೊಂಡರು.

ಪುರಸಭಾಧ್ಯಕ್ಷ ಕೆಂಗಲ್ ದಯಾನಂದ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ. ಸುರೇಶ್, ಸದಸ್ಯರಾದ ಬಸವರಾಜು, ತಿಪ್ಪೇಸ್ವಾಮಿ, ಮಂಜುನಾಥ್, ಮಲ್ಲಿಕಾರ್ಜುನ್, ಲಕ್ಷಿö್ಮÃ, ಉಮಾ, ರೇಣುಕಮ್ಮ ಹಾಗು ಇತರರು ಭಾಗವಹಿಸಿದ್ದರು.