#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಜಿಮ್‍ನಲ್ಲಿ 165 ಕೆಜಿ ತೂಕ ಎತ್ತಲು ಹೋದ ಪವರ್‌ಲಿಫ್ಟರ್‌ ಬದುಕುಳಿದಿದ್ದೇ ಒಂದು ಪವಾಡ! ಶಾಕಿಂಗ್‌ ವಿಡಿಯೊ ವೈರಲ್

ಜಿಮ್‍ನಲ್ಲಿ ಪವರ್‌ಲಿಫ್ಟರ್‌ 165 ಕೆಜಿ ತೂಕವನ್ನು ಎತ್ತಲು ಹೋಗಿ ಬಾರ್ ಬೆಲ್ ಅಡಿಯಲ್ಲಿ ಸಿಕ್ಕಿಬಿದ್ದು ಜೀವ ಉಳಿಸಿಕೊಳ್ಳಲು ಒದ್ದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

165 ಕೆಜಿ ಬಾರ್‌ಬೆಲ್‌ ಅಡಿಯಲ್ಲಿ ಸಿಲಿಕಿದ ಪವರ್‌ಲಿಫ್ಟರ್‌-ವಿಡಿಯೊ ಇದೆ

gym viral video

Profile pavithra Feb 12, 2025 1:00 PM

ಜಿಮ್‍ನಲ್ಲಿ ವರ್ಕೌಟ್ ಮಾಡುವಾಗ ಅವಘಡ ಸಂಭವಿಸಿ ಜೀವಕ್ಕೆ ಹಾನಿಯಾದ ಘಟನೆಗಳು ಸಾಕಷ್ಟು ನಡೆದಿವೆ. ಈಗ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ಜಿಮ್‍ನಲ್ಲಿ ಪವರ್‌ಲಿಫ್ಟರ್‌ 165 ಕೆಜಿ ತೂಕವನ್ನು ಎತ್ತಲು ಹೋಗಿ ಭಾರವಾದ ಬಾರ್ಬೆಲ್‌ ಅಡಿಯಲ್ಲಿ ಸಿಕ್ಕಿಬಿದ್ದು ಜೀವ ಉಳಿಸಿಕೊಳ್ಳಲು ಹೋರಾಡಿದ ದೃಶ್ಯ ಸೆರೆಯಾಗಿದೆ. ಇದು ನೋಡುಗರನ್ನು ಬೆಚ್ಚಿಬೀಳಿಸಿದೆ. ವೈರಲ್ ಆದ ವಿಡಿಯೊ ಬಾಡಿ ಬಿಲ್ಡರ್‌ಗೆ ಬಾರ್ಬೆಲ್‌ ಅದನ್ನು ಎತ್ತಲು ಸಾಧ್ಯವಾಗದೇ ಅದು ಅವನ ಕುತ್ತಿಗೆ ಮೇಲೆ ಬಿದ್ದಿತು. ಇದರಿಂದ ಆತನಿಗೆ ಉಸಿರಾಡಲು ಸಾಧ್ಯವಾಗದೆ ಜೀವನ್ಮರಣದ ನಡುವೆ ಹೋರಾಡಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ತನ್ನ ಕುತ್ತಿಗೆಯ ಮೇಲಿದ್ದ ಬಾರ್ಬೆಲ್‌ ತೆಗೆಯಲು ಆಗದೇ ಅವನು ಒದ್ದಾಡುತ್ತಿದ್ದಾಗ ಅಲ್ಲಿದ್ದ ಮಹಿಳೆಯು ತಕ್ಷಣವೇ ಆತನಿಗೆ ಸಹಾಯ ಮಾಡಿದ್ದಾಳೆ. ಈ ಇಡೀ ದೃಶ್ಯ ಜಿಮ್‍ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಜ್ ಕುಮಾರ್ ದಕ್ಷಿಣಮೂರ್ತಿ ಎಂಬುವವರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ.

ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಹಾಗೇ ಈ ವಿಡಿಯೊಗೆ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, "ಇದಕ್ಕಾಗಿಯೇ ಅದನ್ನು ಎತ್ತುವುದು ಅಪಾಯಕಾರಿ ಎನ್ನುವುದು. ಸರಿಯಾದ ಸ್ಪಾಟರ್‌ಗಳಿಲ್ಲದೇ ಅಂತಹ ತೂಕಗಳನ್ನು ಎಂದಿಗೂ ಪ್ರಯತ್ನಿಸಬೇಡಿ” ಎಂದಿದ್ದಾರೆ. ಇನ್ನೊಬ್ಬರು, "ಜಿಮ್‍ನಲ್ಲಿ ಕೆಲವೊಂದು ವಿಷಯಗಳು ಎಷ್ಟು ಅಪಾಯಕಾರಿಯಾಗಬಹುದು ಎಂಬುದು ಈ ಮೂಲಕ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಇತರರು ಲಿಫ್ಟರ್‌ನ ತಂತ್ರವನ್ನು ಟೀಕಿಸಿದ್ದಾರೆ. ಈ ನಡುವೆ ಕೆಲವರು ಬಾಡಿಬಿಲ್ಡರ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Self Harming: ಗಂಡನಿಗೆ ಅನೈತಿಕ ಸಂಬಂಧ; ಜಿಮ್‌ನಲ್ಲೇ ನೇಣು ಬಿಗಿದುಕೊಂಡ ಪತ್ನಿ