ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವೈರಲ್‌ ಆದ 'ತೆಹಲ್ಕಾ ಆಮ್ಲೆಟ್' ; ನೀವು ಎಂದಾದರೂ ರುಚಿ ನೋಡಿದ್ರಾ?

ಕೊಲ್ಕತ್ತಾದ ಬೀದಿ ಬದಿ ವ್ಯಾಪಾರಿಯೊಬ್ಬ ಎನರ್ಜಿ ಡ್ರಿಂಕ್‍ ಬಳಸಿ ಎಗ್‌ ಬುರ್ಜಿ ಮಾಡಿದ್ದಾನೆ.ಅವನು ಮಾಡಿದ ಈ ವಿಚಿತ್ರ ಪಾಕವಿಧಾನ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಮುಖ ಕಿವುಚಿಕೊಂಡಿದ್ದಾರೆ.

ಸಖತ್‌ ವೈರಲ್‌ ಆಯ್ತು ಈ ʼಎಗ್‌ ಬುರ್ಜಿʼ ವಿಡಿಯೊ! ಇದ್ದನ್ನ ಮಾಡೋದ್‌ ಹೇಗೆ?

Profile pavithra Apr 7, 2025 6:01 PM

ಕೊಲ್ಕತ್ತಾ: ಈಗಂತೂ ಜನರಿಗೆ ಸೋಶಿಯಲ್‌ ಮೀಡಿಯಾದ ಕ್ರೇಜ್‌! ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಲು ಏನೇನೋ ರೀಲ್ಸ್‌ ಮಾಡಿ ಅಪ್‌ಲೋಡ್‌ ಮಾಡುತ್ತಾರೆ.ಅದರಲ್ಲೂ ವಿಚಿತ್ರವಾಗಿ ಆಹಾರ ತಯಾರಿಸುವಂತಹ ವಿಡಿಯೊಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದನ್ನು ಕಂಡು ಕೆಲವರು ಇಷ್ಟಪಟ್ಟರೆ ಇನ್ನೂ ಕೆಲವರು ಅಸಹ್ಯಪಟ್ಟುಕೊಳ್ಳುತ್ತಾರೆ. ಅದೇರೀತಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಆಹಾರ ತಯಾರಿಕೆಯ ವಿಡಿಯೊವೊಂದು ವೈರಲ್(Viral Video) ಆಗಿದೆ. ಇದರಲ್ಲಿ ಕೊಲ್ಕತ್ತಾದ ಬೀದಿ ಬದಿಯ ವ್ಯಾಪಾರಿಯೊಬ್ಬ ಎನರ್ಜಿ ಡ್ರಿಂಕ್‍ ಬಳಸಿ ಎಗ್‌ ಬುರ್ಜಿ ರೀತಿ ಖಾದ್ಯ ಮಾಡಿದ್ದಾನೆ. ಇದನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ವೈರಲ್ ವಿಡಿಯೊದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಅಡುಗೆ ಪಾತ್ರೆಗೆ ಎನರ್ಜಿ ಡ್ರಿಂಕ್‍ ಅನ್ನು ಸುರಿದು ನಂತರ ಅದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಚಮಚದಿಂದ ಕಲಕಿದ್ದಾನೆ. ನಂತರ ಅದಕ್ಕೆ ಕತ್ತರಿಸಿ ಇಟ್ಟ ಮೆಣಸಿನಕಾಯಿಗಳನ್ನು ಮಿಕ್ಸ್ ಮಾಡುವ ಮೂಲಕ ಮಸಾಲೆಗಳನ್ನು ಸೇರಿಸಿದ್ದಾನೆ. ಈ ಪಾಕವಿಧಾನ ತಯಾರಿಸುವಾಗ ಆತ ಕೆಮ್ಮುವುದು ಸಹ ಕೇಳಿದೆ. ನಂತರ ಅದನ್ನು ಬಿಸಿಯಾಗಿ ಗ್ರಾಹಕರಿಗೆ ನೀಡಿದ್ದಾನೆ. ಇದನ್ನು ಕಂಡು ನೆಟ್ಟಿಗರು ಮುಖ ಕಿವುಚಿಕೊಂಡಿದ್ದಾರೆ.

ಬೀದಿ ಬದಿ ವ್ಯಾಪಾರಿಯ ಮೊಟ್ಟೆ ರೆಸಿಪಿ ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿಯವರೆಗೆ, ಈ ವಿಡಿಯೊಗೆ 20 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಸಿಕ್ಕಿದೆ. ಈ ನಡುವೆ ನೆಟ್ಟಿಗರು ಈ ವಿಚಿತ್ರ ಖಾದ್ಯಕ್ಕೆ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. "ತೆಹಲ್ಕಾ ಆಮ್ಲೆಟ್" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಓ ದೇವರೇ, ಏನಿದು!" ಎಂದು ಇನ್ನೊಬ್ಬರು ಆಶ್ಚರ್ಯದಿಂದ ಕೇಳಿದ್ದಾರೆ.
ಮತ್ತೊಬ್ಬರು, “ಎನರ್ಜಿ ಡ್ರಿಂಕ್‍ನೊಂದಿಗೆ ಮೊಟ್ಟೆಗಳನ್ನು ಬೆರೆಸುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಹೇಳಿದ್ದಾರೆ. ಆದರೆ ಈ ರೀತಿಯ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಅನೇಕ ನೆಟ್ಟಿಗರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral news: ಕೆಲಸ ಸಿಗದೆ ತನಗೆ ತಾನೇ ಶ್ರದ್ಧಾಂಜಲಿ ಪೋಸ್ಟ್‌ ಮಾಡಿದ ಬೆಂಗಳೂರು ಯುವಕ!

ವೈರಲ್‌ ಆದ ಕಾಫಿ ಮ್ಯಾಗಿ

ಈ ರೀತಿಯ ವಿಲಕ್ಷಣವಾದ ಪಾಕವಿಧಾನಗಳು ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಲಕ್ಷಣವಾದ ಪಾಕವಿಧಾನವೆಂದರೆ "ಕಾಫಿ ಮ್ಯಾಗಿ". ಹೌದು, ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ರಸ್ತೆಬದಿಯ ಮಾರಾಟಗಾರನೊಬ್ಬ ಈ ಅಸಾಮಾನ್ಯ ಖಾದ್ಯವನ್ನು ತಯಾರಿಸುವುದು ಸೆರೆಯಾಗಿತ್ತು.

ವಿಡಿಯೊದಲ್ಲಿ ಮಾರಾಟಗಾರ ಹಾಲನ್ನು ಕುದಿಸಿ ಅದಕ್ಕೆ ಪುಡಿಮಾಡಿದ ಮ್ಯಾಗಿ ನೂಡಲ್ಸ್ ಸೇರಿಸುತ್ತಾನೆ. ನಂತರ, ಅವನು ಕತ್ತರಿಸಿದ ಟೊಮೆಟೊ, ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಎಸೆಯುತ್ತಾನೆ, ಅದರ ಮೇಲೆ ಮ್ಯಾಗಿ ಮಸಾಲಾವನ್ನು ಸಿಂಪಡಿಸುತ್ತಾನೆ. ಆದರೆ ಇನ್ನು ವಿಚಿತ್ರವೆಂದರೆ ಆತ ಅದಕ್ಕೆ - ಒಂದು ಚಮಚ ಕಾಫಿ ಪುಡಿ ಮತ್ತು ಅರಿಶಿನ ಪುಡಿಯನ್ನು ಸಹ ಸೇರಿಸುತ್ತಾನೆ. ನೂಡಲ್ಸ್ ಮೃದುವಾಗುವವರೆಗೆ ಎಲ್ಲವನ್ನೂ ಒಟ್ಟಿಗೆ ಬೇಯಿಸಿದ ನಂತರ, ಅವನು ಅದನ್ನು ಬಡಿಸುತ್ತಾನೆ.ಇದನ್ನು ಕಂಡು ನೆಟ್ಟಿಗರು ಅಸಹ್ಯ ವ್ಯಕ್ತಪಡಿಸಿದ್ದಾರೆ.