ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral news: ಕೆಲಸ ಸಿಗದೆ ತನಗೆ ತಾನೇ ಶ್ರದ್ಧಾಂಜಲಿ ಪೋಸ್ಟ್‌ ಮಾಡಿದ ಬೆಂಗಳೂರು ಯುವಕ!

ಪ್ರಶಾಂತ್ ಹರಿದಾಸ್ ಎಂಬ ಯುವಕ ತನ್ನದೇ ಶ್ರದ್ಧಾಂಜಲಿ ಫೋಸ್ಟ್ ಹಾಕಿಕೊಂಡು ಕೆಲಸಕ್ಕಾಗಿ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ, ಮಾನಸಿಕ ಯಾತನೆಗಳನ್ನು ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ ನೋಡಿದ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕೆಲಸ ಸಿಗದೆ ತನಗೆ ತಾನೇ ಶ್ರದ್ಧಾಂಜಲಿ ಪೋಸ್ಟ್‌ ಮಾಡಿದ ಬೆಂಗಳೂರು ಯುವಕ!

ಯುವಕನ ಪೋಸ್ಟ್

ಹರೀಶ್‌ ಕೇರ ಹರೀಶ್‌ ಕೇರ Apr 5, 2025 1:17 PM

ಬೆಂಗಳೂರು: ಮೂರು ವರ್ಷಗಳಿಂದ ಕೆಲಸ (job) ಸಿಗದೆ ಹತಾಶೆಗೊಂಡ ಬೆಂಗಳೂರಿನ (bengaluru) ಯುವಕನೊಬ್ಬ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್‌ನಲ್ಲಿ ತನಗೆ ತಾನೇ 'RIP' ಎಂದು ಬರೆದುಕೊಂಡು ಪೋಸ್ಟ್‌ ಮಾಡಿದ್ದಾನೆ. ಈತನ ವಿಚಿತ್ರ ಫೋಸ್ಟ್ ಇದೀಗ ಸಾಕಷ್ಟು ವೈರಲ್ (viral news, viral post) ಆಗುತ್ತಿದೆ. ಪ್ರಶಾಂತ್ ಹರಿದಾಸ್ ಎಂಬ ಯುವಕ ತನ್ನದೇ ಶ್ರದ್ಧಾಂಜಲಿ ಫೋಸ್ಟ್ ಹಾಕಿಕೊಂಡು ಕೆಲಸಕ್ಕಾಗಿ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ, ಮಾನಸಿಕ ಯಾತನೆಗಳನ್ನು ಹೇಳಿಕೊಂಡಿದ್ದಾರೆ.

ʼಧನ್ಯವಾದಗಳು ಲಿಂಕ್ಡ್ ಇನ್, ಉದ್ಯೋಗದಾತರಿಗೆ ಧನ್ಯವಾದಗಳು. ನನ್ನ ಅರ್ಜಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಾ ನನ್ನ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಫೋಸ್ಟ್ ನಂತರ ಯಾರೂ ನನ್ನನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ನನಗೆ ಚೆನ್ನಾಗಿಯೇ ತಿಳಿದಿದೆ. RIPʼ ಎಂದು ಪ್ರಶಾಂತ್‌ ಬರೆದುಕೊಂಡಿದ್ದಾನೆ.

ಆದಾಗ್ಯೂ, ಕೆಲಸ ಸಿಗುವುದರಲ್ಲಿ ಮಾತ್ರ ಸತ್ತಿದ್ದೇನೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಲ್ಲ. ಜೀವನವನ್ನು ನಾನು ಇಷ್ಟಪಡುತ್ತೇನೆ ಎಂದು ಯುವಕ ಸ್ಪಷ್ಟಪಡಿಸಿದ್ದಾನೆ. ಈ ಪೋಸ್ಟ್‌ ನೋಡಿದ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: Viral News: ಹಬ್ಬಕ್ಕೆ ಸೀರೆಯುಟ್ಟು ಬಾರದ ಉದ್ಯೋಗಿಗೆ ಬಿತ್ತು ಭಾರೀ ಫೈನ್‌- ಏನಿದು ಘಟನೆ?