ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಫ್ಲೈಓವರ್‌ನ ನಟ್‌ ಬೋಲ್ಟ್‌ ಕಿತ್ತ ಮಕ್ಕಳು- ಶಾಕಿಂಗ್‌ ವಿಡಿಯೊ ವೈರಲ್‌

ಬಿಹಾರದ ಪಾಟ್ನಾದಲ್ಲಿ ಹೊಸದಾಗಿ ನಿರ್ಮಿಸಲಾದ 422 ಕೋಟಿ ರೂ. ಮೌಲ್ಯದ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಮಕ್ಕಳ ಗುಂಪೊಂದು ನಟ್‌ ಹಾಗೂ ಬೋಲ್ಟ್‌ಗಳನ್ನು ಕದ್ದಿದ್ದಾರೆ.ಈ ವಿಡಿಯೊ ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ. ಈ ಬಗ್ಗೆ ನೆಟ್ಟಿಗರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಡಬಲ್ ಡೆಕ್ಕರ್ ಫ್ಲೈಓವರ್‌ (Double-Decker Flyover) ಅನ್ನು ಹೊಸದಾಗಿ ನಿರ್ಮಿಸಲಾಗಿದೆ. ಆದರೆ ಮಕ್ಕಳ ಗುಂಪೊಂದು ಹೊಸದಾಗಿ ನಿರ್ಮಿಸಲಾದ ಸೇತುವೆಯ ನಟ್‌ಗಳು ಮತ್ತು ಬೋಲ್ಟ್‌ಗಳನ್ನು ಹಗಲು ಹೊತ್ತಿನಲ್ಲಿಯೇ ಕದ್ದಿದ್ದಾರೆ. ಈ ವಿಡಿಯೊ ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ. ಈ ಆತಂಕಕಾರಿ ವಿಡಿಯೊ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಈ ವಿಡಿಯೊದಲ್ಲಿ, ಮಕ್ಕಳ ಗುಂಪೊಂದು ಹೊಸದಾಗಿ ನಿರ್ಮಿಸಲಾದ ಸೇತುವೆಯ ನಟ್‌ಗಳು ಮತ್ತು ಬೋಲ್ಟ್‌ಗಳನ್ನು ಹಗಲು ಹೊತ್ತಿನಲ್ಲಿ ಕದಿಯುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಕಾಮೆಂಟ್ ವಿಭಾಗದಲ್ಲಿ ಒಬ್ಬರು, “ಸ್ವಲ್ಪ ಹೊತ್ತು ಕಾಯಿರಿ, ಅವರು ಸೇತುವೆಯನ್ನೂ ಕದಿಯುತ್ತಾರೆ” ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಮತ್ತೊಬ್ಬರು, “ನಮ್ಮ ಬಿಹಾರ್ ಬದಲಾಗುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, “ಬಿಹಾರಕ್ಕೆ ನಿಮಗೆ ಸ್ವಾಗತ” ಎಂದು ಹೇಳಿದ್ದಾರೆ. ಮತ್ತೊಬ್ಬರು “ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇದು ಸಾಮಾನ್ಯ” ಎಂದು ತಮಾಷೆ ಮಾಡಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಕಾಮೆಂಟ್‌ ಮಾಡಿ, “ಖಾಸಗಿ ಶಾಲೆಗಳು ದುಬಾರಿಯಾಗಿವೆ ಮತ್ತು ಸರ್ಕಾರಿ ಶಾಲೆಗಳು ಯೋಗ್ಯ ಆಯ್ಕೆಯಲ್ಲ. ಹಾಗಾಗಿ ಅವರು ಬೇರೆಲ್ಲಿಗೆ ಹೋಗುತ್ತಾರೆ? ಅವರು ಕಳ್ಳತನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮಾಲ್‌ನಲ್ಲಿದ್ದ ಶ್ವಾನವನ್ನು ನೋಡಿ ಗ್ರಾಹಕರು ಶಾಕ್‌ ಆಗಿದ್ದು ಯಾಕೆ?ವಿಡಿಯೊ ಇಲ್ಲಿದೆ ನೋಡಿ

ಪಾಟ್ನಾದ ಡಬಲ್ ಡೆಕ್ಕರ್ ಸೇತುವೆ

ಅಶೋಕ್ ರಾಜ್‌ಪಥ್ ಕಾರಿಡಾರ್‌ನ ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಮಿಸಲಾದ ರೂ. 422 ಕೋಟಿ ವೆಚ್ಚದ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗೆ ಉದ್ಘಾಟಿಸಿದ್ದಾರೆ.