ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಯಾಕಪ್ಪಾ ಇಷ್ಟೊಂದು ಸ್ಪೀಡ್‌ ಅಂದಿದ್ದೇ ತಪ್ಪಾಯ್ತಾ? ಮಹಿಳೆ ಕಪಾಳಕ್ಕೆ ಬಾರಿಸಿದ ರ‍್ಯಾಪಿಡೊ ಚಾಲಕ

ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಸ್ಪೀಡಾಗಿ ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಪ್ರಯಾಣಿಕಳೊಬ್ಬಳಿಗೆ ಸಾರ್ವಜನಿಕರ ಮುಂದೆಯೇ ಕೆನ್ನೆಗೆ ಬಾರಿಸಿದ್ದಾನೆ. ಇದರಿಂದ ಆಕೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿ ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಸ್ಪೀಡಾಗಿ ಚಾಲನೆ ಮಾಡಿದ್ದಲ್ಲದೇ, ಇದನ್ನು ಪ್ರಶ್ನಿಸಿದ ಮಹಿಳಾ ಪ್ರಯಾಣಿಕಳ ಕೆನ್ನೆಗೆ ಬಾರಿಸಿದ್ದಾನೆ. ಆತನ ಹೊಡೆತ ಎಷ್ಟು ಜೋರಾಗಿತ್ತು ಎಂದರೆ ಮಹಿಳೆ ಹೋಗಿ ರಸ್ತೆಯ ಮೇಲೆ ಬಿದ್ದಿದ್ದಾಳೆ. ನಾಚಿಕೆಯ ವಿಚಾರವೆನೆಂದರೆ ಜನರ ಮುಂದೆಯೇ ಮಹಿಳೆಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಯಾರು ಕೂಡ ಮಧ್ಯಪ್ರವೇಶಿಸದೆ ನೋಡುತ್ತಾ ನಿಂತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ ಪ್ರಕಾರ, ಚಾಲಕನು ಅತಿವೇಗವಾಗಿ ಚಾಲನೆ ಮಾಡಿದ್ದಕ್ಕೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಇದು ದೈಹಿಕ ಹಲ್ಲೆಗೆ ಕಾರಣವಾಗಿದೆ. ಪಕ್ಕದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ಇದರಲ್ಲಿ ರ‍್ಯಾಪಿಡೊ ಚಾಲಕ ಮಹಿಳೆಗೆ ಹೊಡೆಯುವುದು ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಘಟನೆಗೆ ಸಂಬಂಧಪಟ್ಟಂತೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಚಾಲಕ ಮತ್ತು ಸ್ಥಳದಲ್ಲಿದ್ದ ಸಾಕ್ಷಿಗಳ ಗುರುತುಗಳನ್ನು ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಭಾರತೀಯರಿಗೆ ನಾಗರಿಕ ಪ್ರಜ್ಞೆಯೇ ಇಲ್ಲವೇ? ಈಕೆ ಇಷ್ಟೊಂದು ಸಿಟ್ಟಾಗಲು ಕಾರಣ ಏನು?

ಓಲಾ ಆಟೋ ಪ್ರಕರಣದಲ್ಲಿ ಇದೇ ರೀತಿಯ ಹಲ್ಲೆ

ಇತ್ತೀಚೆಗೆ ಬೆಂಗಳೂರಿನಲ್ಲಿ ಓಲಾ ಆಟೋ ಚಾಲಕನೊಬ್ಬ ಮಹಿಳೆಯೊಬ್ಬಳು ಪ್ರಯಾಣವನ್ನು ರದ್ದುಗೊಳಿಸಿದ್ದಕ್ಕಾಗಿ ಕಪಾಳಮೋಕ್ಷ ಮಾಡಿದ್ದ ಘಟನೆ ನಡೆದಿತ್ತು. ವೈರಲ್ ಆದ ವಿಡಿಯೊದಲ್ಲಿ ಚಾಲಕ, “ಗ್ಯಾಸ್‍ಗೆ ಹಣ ನಿನ್ನಪ್ಪ ಕೊಡುತ್ತಾನಾ?” ಎಂದು ಕೂಗುತ್ತಾ ಮಹಿಳೆಯ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದು ರೆಕಾರ್ಡ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ನಂತರ ಆತನನ್ನು ಹಲ್ಲೆ ಆರೋಪದ ಮೇಲೆ ಬಂಧಿಸಲಾಯಿತು.