Viral Video: ಹಳದಿ ಸಮಾರಂಭಕ್ಕೆ ನುಗ್ಗಿದ ಕೋತಿಯಿಂದ ಅವಾಂತರ; ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಕೋತಿಯೊಂದು ಹಳದಿ ಸಮಾರಂಭಕ್ಕೆ ಬಂದು ಅತಿಥಿಯ ಕೈಯಲ್ಲಿದ್ದ ಲಡ್ಡುಗಳನ್ನು ಕದಿಯುವ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ 1.1 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿ ಜನರ ಮುಖದಲ್ಲಿ ನಗು ಮೂಡಿಸಿದೆ. ಈ ಕುತೂಹಲಕಾರಿ ವಿಡಿಯೊ ನೀವೂ ನೋಡಿ.


ಹೊಸದಿಲ್ಲಿ: ಕೋತಿಗಳ ಹಾವಳಿಯ ಬಗ್ಗೆ ಸಾಕಷ್ಟು ಸುದ್ದಿಗಳನ್ನು ನೋಡಿರುತ್ತೇವೆ. ಇದೀಗ ಕೋತಿಯೊಂದು ಹಳದಿ ಸಮಾರಂಭಕ್ಕೆ ಬಂದು ಲಡ್ಡುಗಳನ್ನು ಕದ್ದ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ಅಲ್ಲಿದ್ದ ಅತಿಥಿಗಳಿಗೆ ಆಶ್ಚರ್ಯದ ಜತೆ ಜತೆಗೆ ಮನರಂಜನೆಯನ್ನು ನೀಡಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ವಧು ಮತ್ತು ವರರ ಕುಟುಂಬದವರು ಖುಷಿಯಿಂದ ಹಳದಿ ಸಮಾರಂಭದಲ್ಲಿರುವಾಗ ಕಣ್ಣು ಮಿಟುಕಿಸುವಷ್ಟರಲ್ಲಿ, ಕೋತಿ ಅತಿಥಿಯ ಕೈಯಲ್ಲಿದ್ದ ತಟ್ಟೆಯನ್ನು ಹಿಡಿದು, ಅದರಲ್ಲಿದ್ದ ಲಡ್ಡುಗಳನ್ನು ಕಸಿದುಕೊಂಡು ಎಸ್ಕೇಪ್ ಆಗಿರುವುದು ಕಂಡು ಬಂದಿದೆ.
ಕೋತಿಯ ಹಠಾತ್ ಆಗಮನವು ವಧು-ವರರಿಗೆ ಹಾಗೂ ಅಲ್ಲಿದ್ದ ಅತಿಥಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಕೆಲವರು ಈ ಘಟನೆಯನ್ನು ನೋಡಿ ಮನಸಾರೆ ನಕ್ಕಿದ್ದಾರೆ. ಈ ತಮಾಷೆಯ ಕ್ಷಣವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ನೆಟ್ಟಿಗರು, "ಅವಕಾಶವನ್ನು ನೋಡಿ ತಕ್ಷಣ ಅದನ್ನು ಬಳಸಿಕೊಂಡಿದೆ” ಎಂದು ಶೀರ್ಷಿಕೆ ನೀಡಿದ್ದಾರೆ. ಕೋತಿಯು ಲಡ್ಡು ಕಳ್ಳತನ ಮಾಡಿದ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂರು ದಿನಗಳ ಹಿಂದೆ ಅಪ್‌ಲೋಡ್ ಮಾಡಲಾದ ಈ ವಿಡಿಯೊ 1.1 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರು ಕ್ಲಿಪ್ ನೋಡಿದ ನಂತರ ಬಿದ್ದು ಬಿದ್ದು ನಕ್ಕಿದ್ದಾರೆ ಮತ್ತು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
Bro Saw the opportunity and Took it😂 pic.twitter.com/FGMTQwgSrX
— Ghar Ke Kalesh (@gharkekalesh) February 25, 2025
ಒಬ್ಬರು "ಕೋತಿ ಹೀಗಿರಬೇಕು: ನನಗೂ ಮದುವೆಯ ಔತಣವನ್ನು ನೀಡಿ ಎನ್ನಬೇಕು !" ಎಂದಿದ್ದಾರೆ. “ಆ ಲಡ್ಡುಗಳನ್ನು ಕೋತಿ ತಿನ್ನಲು ಬಯಸಿತ್ತು, ಹಾಗಾಗಿ ಅದನ್ನು ಕಸಿದುಕೊಂಡು ಹೋಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಡಾರ್ವಿನ್ ಅವರ ವಿಕಾಸ ಸಿದ್ಧಾಂತದ ಪ್ರಕಾರ, ಕೋತಿಗಳು ನಮ್ಮ ಪೂರ್ವಜರು ಮತ್ತು ನಾವು ಅವರ ಅವಕಾಶವಾದಿ ಗುಣಲಕ್ಷಣಗಳನ್ನು ಆನುವಂಶಿಕವಾಗಿ ಪಡೆದಿದ್ದೇವೆ - ಧನ್ಯವಾದಗಳು, ಅಜ್ಜ ಮಂಕಿ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.
ಈ ವರ್ಷ ಮೇ ತಿಂಗಳಲ್ಲಿ ಕೋತಿ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಹಳದಿ ಸಮಾರಂಭಕ್ಕೆ ಆಗಮಿಸಿದ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಜನರ ಗಮನ ಸೆಳೆದಿತ್ತು. ಕೋತಿಯಂತೆ ವೇಷ ಧರಿಸಿದ ವ್ಯಕ್ತಿಯು ಸಮಾರಂಭಕ್ಕೆ ಆಗಮಿಸಿದ ಅತಿಥಿಗಳ ಬಳಿಗೆ ಬಂದು ಅವರನ್ನು ಭಯಗೊಳಿಸಿದ್ದ. ಒಬ್ಬರು ಭಯದಿಂದ ಕಿರುಚುವುದನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿತ್ತು. ಈ ಮಂಕಿ ಮ್ಯಾನ್ ಅನ್ನು ಜಾಕಿ ವಾಧ್ವಾನಿ ಎಂದು ಗುರುತಿಸಲಾಗಿದ್ದು, ಆತ ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಈ ಕೋತಿಗಳ ಕುಚೇಷ್ಟೆ ಒಂದೆರಡಲ್ಲ! ಕಪಿರಾಯನ ಕಾಟಕ್ಕೆ ಪ್ರವಾಸಿಗರು ಕಂಗಾಲು; ವಿಡಿಯೊ ಭಾರೀ ವೈರಲ್
ಇತ್ತೀಚೆಗೆ ಬಾಲಿಯ ಉಬುದ್‌ನ ಪಾರ್ಕಿಂಗ್ ಸ್ಥಳದಲ್ಲಿ ಪ್ರವಾಸಿಗರು ಬೈಕ್ ನಿಲ್ಲಿಸಿ ಹೋಗಿರುವ ಸಂದರ್ಭ ಕೋತಿಗಳು ಸೀಟ್‌ನ ಮೇಲೆ ತಮ್ಮ ಬಲ ಪ್ರದರ್ಶನ ಮಾಡಿವೆ. ಪಾರ್ಕಿಂಗ್ ಮಾಡಿದ್ದ ಬೈಕ್‌ನ ಮೇಲೆ ಕೋತಿಗಳು ಜಿಗಿದು ಸೀಟ್‌ಗಳನ್ನ ಕಿತ್ತು ಹಾಕಿವೆ. ಈ ವಿಡಿಯೊವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.