ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೂರ್ಯಕುಮಾರ್‌ ಪದೇ ಪದೇ ಮೆಸೇಜ್‌ ಮಾಡುತ್ತಿದ್ದ ನಟಿ ಖುಷಿ ಮುಖರ್ಜಿ ಯಾರು?

Who is Khushi Mukherjee?: ನಟಿ ಖುಷಿ ಮುಖರ್ಜಿ ಹೇಳಿಕೆಗೆ ಸೂರ್ಯಕುಮಾರ್ ಯಾದವ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆ ನಟಿಯ ಹೇಳಿಕೆಯ ವಿಡಿಯೊ ಭಾರೀ ಸದ್ದು ಮಾಡಲಾರಂಭಿಸಿದೆ. ಸೂರ್ಯಕುಮಾರ್ ಅವರು ತಮ್ಮ ಬಾಲ್ಯದ ಗೆಳತಿ ದೇವಿಶಾ ಶೆಟ್ಟಿ ಅವರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.

Suryakumar Yadav

ಮುಂಬಯಿ, ಡಿ.31: ಟಿ20 ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಒಂದು ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಬಗ್ಗೆ ನಟಿ, ರೂಪದರ್ಶಿ ಖುಷಿ ಮುಖರ್ಜಿ(Who is Khushi Mukherjee) ಸಾರ್ವಜನಿಕವಾಗಿ ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ಚರ್ಚಗೆ ಕಾರಣವಾಗಿದೆ. ಸೂರ್ಯಕುಮಾರ್‌ ಅವರು ಈ ಹಿಂದೆ ನನಗೆ ಆಗಾಗ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಖುಷಿ ಮುಖರ್ಜಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖುಷಿ ಮುಖರ್ಜಿ, ‘ಸೂರ್ಯಕುಮಾರ್ ಅವರು ಈ ಹಿಂದೆ ನನಗೆ ಆಗಾಗ ಸಂದೇಶ ಕಳುಹಿಸುತ್ತಿದ್ದರು, ಆದರೆ, ಈಗ ಅವರು ನನ್ನ ಸಂಪರ್ಕದಲ್ಲಿಲ್ಲ’ ಎಂದು ಹೇಳಿದ್ದಾರೆ.



ಕ್ರಿಕೆಟಿಗರೊಂದಿಗೆ ಡೇಟಿಂಗ್ ಮಾಡಲು ಬಯಸುವುದಾದದರೆ ಯಾರ ಜತೆ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖುಷಿ, ‘ನಾನು ಯಾವುದೇ ಆಟಗಾರನೊಂದಿಗೆ ಡೇಟಿಂಗ್ ಮಾಡಲು ಬಯಸುವುದಿಲ್ಲ. ಈ ಹಿಂದೆ ಕೆಲವು ಕ್ರಿಕೆಟಿಗರು ನನ್ನ ಸಂಪರ್ಕದಲ್ಲಿದ್ದರು. ಸೂರ್ಯಕುಮಾರ್ ಯಾದವ್ ನನಗೆ ತುಂಬಾ ಸಂದೇಶ ಕಳುಹಿಸುತ್ತಿದ್ದರು’ ಎಂದು ಖುಷಿ ತಿಳಿಸಿದ್ದಾರೆ.

ಇದನ್ನೂ ಓದಿ ನಾನು ಫಾರ್ಮ್​ ಕಳೆದುಕೊಂಡಿಲ್ಲ, ರನ್​ ಗಳಿಸುತ್ತಿಲ್ಲ ಅಷ್ಟೇ; ಟೀಕೆಗೆ ಸೂರ್ಯಕುಮಾರ್‌ ಸಮರ್ಥನೆ

ನಟಿ ಖುಷಿ ಮುಖರ್ಜಿ ಹೇಳಿಕೆಗೆ ಸೂರ್ಯಕುಮಾರ್ ಯಾದವ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆ ನಟಿಯ ಹೇಳಿಕೆಯ ವಿಡಿಯೊ ಭಾರೀ ಸದ್ದು ಮಾಡಲಾರಂಭಿಸಿದೆ. ಸೂರ್ಯಕುಮಾರ್ ಅವರು ತಮ್ಮ ಬಾಲ್ಯದ ಗೆಳತಿ ದೇವಿಶಾ ಶೆಟ್ಟಿ ಅವರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.

ಖುಷಿ ಮುಖರ್ಜಿ ಯಾರು?

ದಕ್ಷಿಣ ಭಾರತದ ಸಿನಿಮಾಗಳ ಜತೆ ರಿಯಾಲಿಟಿ ಶೋ ಹಾಗೂ ಬೋಲ್ಡ್ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿರುವ ಖುಷಿ ಮುಖರ್ಜಿ ವಿವಾದಾತ್ಮಕ ಹೇಳಿಕೆಗೆ ಪ್ರಸಿದ್ಧಿ ಪಡೆದಿದ್ದಾರೆ. 24 ನವೆಂಬರ್ 1996ರಲ್ಲಿ ಕೋಲ್ಕತಾದಲ್ಲಿ ಜನಿಸಿದ ಖುಷಿ ಮುಖರ್ಜಿ, 2013ರಲ್ಲಿ ತಮಿಳಿನ ಅಂಜಲ್ ಥುರಾಯಿ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇದಾದ ಬಳಿಕ ತೆಲುಗಿನ ಡೋಂಗ್ ಪ್ರೇಮಾ, ಹಾರ್ಟ್ ಅಟ್ಯಾಕ್ ಹಾಗೂ ಬಾಲಿವುಡ್‌ನಲ್ಲಿ ಶೃಂಗಾರ್ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಮನ ಸೆಳಯುವಲ್ಲಿ ಯಶಸ್ವಿಯಾಗಿದ್ದರು.

ಖುಷಿ MTV ಯ ಸ್ಪ್ಲಿಟ್ಸ್‌ವಿಲ್ಲಾ 10 ಮತ್ತು ಲವ್ ಸ್ಕೂಲ್ 3 ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೆಚ್ಚು ಜನಪ್ರಿಯರಾದರು. ಪೌರಾಣಿಕ ನಾಟಕ ಕಹತ್ ಹನುಮಾನ್ ಜೈ ಶ್ರೀ ರಾಮ್‌ನಂತಹ ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.