ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಯಾಗ್‌ರಾಜ್‌ನಲ್ಲಿ 5 ಕೋಟಿ ರುಪಾಯಿ ಮೌಲ್ಯದ ಚಿನ್ನ ಧರಿಸಿದ ಗೂಗಲ್ ಗೋಲ್ಡನ್ ಬಾಬಾನದ್ದೇ ಹವಾ: ಸೆಲ್ಫಿಗಾಗಿ ಮುಗಿಬಿದ್ದ ಜನ

Viral News: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾಘ ಮೇಳ ಆರಂಭವಾಗಿದೆ. ಈ ಮೇಳದಲ್ಲಿ ತಪಸ್ವಿಯೊಬ್ಬರು ಗಮನ ಸೆಳೆದಿದ್ದಾರೆ. ಲಕ್ಷಾಂತರ ಸಾಧುಗಳ ನಡುವೆ 'ಗೂಗಲ್ ಗೋಲ್ಡನ್ ಬಾಬಾ' ಎಂದು ಖ್ಯಾತ ಪಡೆದಿರುವ ಇವರು ಭಕ್ತರ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎನಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಗೂಗಲ್ ಗೋಲ್ಡನ್ ಬಾಬಾ

ಲಖನೌ, ಜ. 15: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾಘ ಮೇಳ ಆರಂಭವಾಗಿದೆ. ಜನವರಿ-ಫೆಬ್ರವರಿಯಲ್ಲಿ ನಡೆಯುವ ಈ ಮೇಳದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. ಜನ ಸಾಮಾನ್ಯರ ಜತೆ ಸಾವಿರಾರು ತಪಸ್ವಿಗಳು, ಸಾಧುಗಳು ಭಾಗವಹಿಸಿದ್ದಾರೆ. ಇವರೆಲ್ಲದರ ಮಧ್ಯೆ ಈ ಮೇಳದಲ್ಲಿ ತಪಸ್ವಿಯೊಬ್ಬರು ಗಮನ ಸೆಳೆದಿದ್ದಾರೆ. ಲಕ್ಷಾಂತರ ಸಾಧುಗಳ ನಡುವೆ 'ಗೂಗಲ್ ಗೋಲ್ಡನ್ ಬಾಬಾ' ಎಂದು ಖ್ಯಾತ ಪಡೆದಿರುವ ಇವರು ಭಕ್ತರ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎನಿಸಿಕೊಂಡಿದ್ದಾರೆ. ಸದ್ಯ ಅವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಹಾಗಾದರೆ ಏನಿವರ ವಿಶೇಷತೆ, ಅವರ ಹಿನ್ನೆಲೆ ಏನು? ಎನ್ನುವುದನನು ನೋಡಿಕೊಂಡು ಬರೋಣ.

'ಗೂಗಲ್ ಗೋಲ್ಡನ್ ಬಾಬಾ' ಎಂದು ಕರೆಯಲ್ಪಡುವ ಕಾನ್ಪುರದ ತಪಸ್ವಿ ಇವರಾಗಿದ್ದು, ತಮ್ಮ ದೇಹದ ಮೇಲೆ ಸುಮಾರು 5 ಕೋಟಿ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸಿದ್ದಾರೆ. ಇವರು ತಲೆಯಿಂದ ಕಾಲಿನವರೆಗೆ ಚಿನ್ನದ ಆಭರಣಗಳಲ್ಲಿ ಮುಳುಗಿ ಹೋಗಿದ್ದಾರೆ. ಬೆಳ್ಳಿ ಪಾತ್ರೆಗಳಿಂದ ಊಟ ಮಾಡುವುದು ಮತ್ತು ಹೋದಲ್ಲೆಲ್ಲ ಲಡ್ಡು ಗೋಪಾಲನ ಚಿನ್ನದ ವಿಗ್ರಹವನ್ನು ಒಯ್ಯುವುದು ಮುಂತಾದವುಗಳಿಂದ ಗಮನ ಸೆಳೆಯುತ್ತಿದ್ದಾರೆ.

ವಿಡಿಯೊ ನೋಡಿ:



ಅಪಾರ ಪ್ರಮಾಣದ ಚಿನ್ನ ಧರಿಸುವುದರಿಂದ ಸೋಶಿಯಲ್ ಮೀಡಿಯಾದಲ್ಲಿ ಇವರು 'ಗೂಗಲ್ ಗೋಲ್ಡನ್ ಬಾಬಾ' ಎಂದೇ ಪ್ರಸಿದ್ಧರಾಗಿದ್ದಾರೆ. ಇವರ ಕುತ್ತಿಗೆಯಲ್ಲಿ ದೊಡ್ಡದಾದ ಚಿನ್ನದ ಹಾರ, ಕೈಗಳಲ್ಲಿ‌ ಚಿನ್ನದ ಕಡಗಗಳು ಹಾಗೂ ಹತ್ತು ಬೆರಳುಗಳಿಗೂ ವಿವಿಧ ದೇವತೆಗಳ ಚಿನ್ನದ ಉಂಗುರ ಕಂಡು ಬಂದಿದೆ. ಬಾಬಾ ಆಹಾರ ಸೇವಿಸಲು ಮತ್ತು ನೀರು ಕುಡಿಯಲು ಸಂಪೂರ್ಣವಾಗಿ ಬೆಳ್ಳಿಯ ಪಾತ್ರೆಗಳನ್ನೇ ಬಳಸುತ್ತಾರೆ.

ಕರುವಿಗೆ ಟೂತ್‌ಬ್ರಷ್‌ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ: ಮುಗ್ಧತೆಗೆ ಮನಸೋತ ನೆಟ್ಟಿಗರು!

ಈ ಹಿಂದೆ ಇವರು 5 ಲಕ್ಷ ರುಪಾಯಿ ಮೌಲ್ಯದ ಬೆಳ್ಳಿಯ ಪಾದ ರಕ್ಷೆಗಳನ್ನು ಧರಿಸುತ್ತಿದ್ದರು ಎಂದಿದ್ದಾರೆ.‌ ಆದರೆ ಈಗ ಅದನ್ನು ತ್ಯಜಿಸಿ ಬರಿಗಾಲಿನಲ್ಲಿ ನಡೆಯುತ್ತಿದ್ದಾರಂತೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದ ಪ್ರಧಾನಿ ಆಗುವವರೆಗೆ ತಾವು ಪಾದರಕ್ಷೆ ಧರಿಸುವುದಿಲ್ಲ ಎಂದು ಈ ಕಠಿಣ ಪ್ರತಿಜ್ಞೆ ಮಾಡಿದ್ದಾರೆ. ಇಷ್ಟು ಕೋಟಿ ಮೊತ್ತದ ಚಿನ್ನವನ್ನು ಧರಿಸಿಕೊಂಡು ಓಡಾಡುವಾಗ ಕಳ್ಳರ ಭಯವಿಲ್ಲವೇ ಎಂದು ಕೇಳಿದ್ದಕ್ಕೆ, "ನಾನು ದೇವರ ಭಕ್ತ, ನನ್ನ ನಂಬಿಕೆಯೇ ಮುಖ್ಯʼʼ ಎಂದು ಹೇಳಿದ್ದಾರೆ. ಸದ್ಯ ಗೋಲ್ಡನ್ ಬಾಬಾ ಎದುರು ಜನ‌ ಕಿಕ್ಕಿರಿದು ತುಂಬಿದ್ದು ಭಕ್ತರು ಮತ್ತು ಸಂದರ್ಶಕರು ಆಶೀರ್ವಾದಕ್ಕಾಗಿ ಮಾತ್ರವಲ್ಲದೆ ಸೆಲ್ಫಿಗಳಿಗಾಗಿಯೂ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.