ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟ್ರಾಫಿಕ್, ದುಬಾರಿ ಬಾಡಿಗೆ ಅಂತ ದಿನಾ ಬೈಕೊಂಡ್ರು ಜನ ಬೆಂಗಳೂರು ಯಾಕೆ ಬಿಟ್ಟು ಹೋಗಲ್ಲ? ಸತ್ಯ ಬಿಚ್ಚಿಟ್ಟ ಯುವಕ!

Viral Video: ಉದ್ಯೋಗ ಅರಸಿ ಬರುವ ಯುವಕ- ಯುವತಿಯರು ಬೆಂಗಳೂರು ಬಿಟ್ಟು ಹೋಗಲು ಇಚ್ಚೆ ಪಡುವುದಿಲ್ಲ. ಟ್ರಾಫಿಕ್, ಬಾಡಿಗೆ ದರ ದುಪ್ಪಟ್ಟು ಆದಾಗಲೂ ಯುವಕರು ಇಲ್ಲಿನ ಕಷ್ಟಗಳನ್ನು ಸಹಿಸಿ ಕೊಂಡು ಇಲ್ಲೇ ನೆಲೆಸುತ್ತಾರೆ..ಯಾಕೆ ಬೆಂಗಳೂರು ಬಿಟ್ಟು ಹೋಗಲು ಜನ ಇಷ್ಟ ಪಡುವುದಿಲ್ಲ ಎಂದು ಬೆಂಗಳೂರಿನ ಟೆಕ್ಕಿಯೊಬ್ಬರು ಪೋಸ್ಟ್ ಶೇರ್ ಮಾಡಿದ್ದು ಭಾರೀ ವೈರಲ್ ಆಗಿದೆ...

ಜನ ಬೆಂಗಳೂರು ಯಾಕೆ ಬಿಟ್ಟು ಹೋಗಲ್ಲ? ಸತ್ಯ ಬಿಚ್ಚಿಟ್ಟ ಯುವಕ

ಬೆಂಗಳೂರು,ಜು.1: ಸಿಲಿಕಾನ್ ಸಿಟಿ ಅಂದಾಗ ಅಲ್ಲಿನ ಮಿತಿಮೀರಿದ ಟ್ರಾಫಿಕ್, ದುಬಾರಿ ಮನೆ ಬಾಡಿಗೆ, ಆಧುನಿಕ ಜೀವನಶೈಲಿಯೇ ನೆನಪಿಗೆ ಬರುತ್ತದೆ. ಹೆಚ್ಚಿನ ಉದ್ಯೋಗಿಗಳು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆಸಕ್ತಿ ವಹಿಸಿದ್ದರೂ ಇಲ್ಲಿನ ದುಬಾರಿ ವೆಚ್ಚದ ಬಗ್ಗೆ ದೂರುತ್ತಲೇ ಇರುತ್ತಾರೆ‌. ಆದರೂ ಇಲ್ಲಿಗೆ ಉದ್ಯೋಗ ಅರಸಿ ಬರುವ ಯುವಕ- ಯುವತಿಯರು ಬೆಂಗಳೂರು ಬಿಟ್ಟು ಹೋಗಲು ಇಚ್ಚೆ ಪಡುವುದಿಲ್ಲ. ಟ್ರಾಫಿಕ್, ಬಾಡಿಗೆ ದರ ದುಪ್ಪಟ್ಟು ಆದಾಗಲೂ ಯುವಕರು ಇಲ್ಲಿನ ಕಷ್ಟಗಳನ್ನು ಸಹಿಸಿಕೊಂಡು ಇಲ್ಲೇ ನೆಲೆಸುತ್ತಾರೆ..ಯಾಕೆ ಬೆಂಗಳೂರು ಬಿಟ್ಟು ಹೋಗಲು ಜನ ಇಷ್ಟ ಪಡುವುದಿಲ್ಲ ಎಂದು ಬೆಂಗಳೂರಿನ ಟೆಕ್ಕಿಯೊಬ್ಬರು ಪೋಸ್ಟ್ ಶೇರ್ ಮಾಡಿದ್ದು ಭಾರೀ ವೈರಲ್ (Viral News) ಆಗಿದೆ.

ಅಂಕಿತ್ ಎಂದು ಗುರುತಿಸಲಾದ ವ್ಯಕ್ತಿ ಬೆಂಗಳೂರಿನಲ್ಲಿ ವಾಸಿಸುವವರು ಹೇಗೆ ಹೊಂದಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ಬದುಕು ಸಾಗಿಸುವುದು ಕೆಲವೊಮ್ಮೆ ಕಷ್ಟಕರವೆಂದು ಭಾವಿಸಬಹುದು, ಆದರೆ ಅದು ವೃತ್ತಿಜೀವನ ಮತ್ತು ಜೀವನವನ್ನು ರೂಪಿಸುವಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿರುತ್ತದೆ. ಸತ್ಯವೆಂದರೆ, ಜನರು ಬೆಂಗಳೂರನ್ನು ಪ್ರೀತಿ ಸುವುದಿಲ್ಲ. ಆದರೆ ಬೆಂಗಳೂರು ಅವರನ್ನು ಬದಲಾಯಿಸಲು ಸಹಾಯ ಮಾಡಿದ ತಮ್ಮ ಆವೃತ್ತಿಯನ್ನು ಪ್ರೀತಿಸುತ್ತಾರೆ ಎಂದರು.

ವಿಡಿಯೋ ನೋಡಿ:



ಈ ಬಗ್ಗೆ ಮಾತನಾಡಿರುವ ಅಂಕಿತ್ ಬೆಂಗಳೂರಿನಲ್ಲಿ ವಾಸಿಸುವ ಜನರಿಗೆ ಒಂದು ವಿಚಿತ್ರ ಗುಣ ಇದೆ. ದಿನಕ್ಕೆ ಒಮ್ಮೆಯಾದರು ಅವರು ಇಲ್ಲಿನ ಟ್ರಾಫಿಕ್, ಬಾಡಿಗೆ ವೆಚ್ಚದ ಬಗ್ಗೆ ಬೈದು ಕೊಂಡಿರುತ್ತಾರೆ. ಆದರೆ, ಯಾರೂ ಕೂಡ ಈ ನಗರವನ್ನು ಬಿಟ್ಟು ಹೋಗುವುದಿಲ್ಲ. ಯಾಕೆಂದರೆ ಈ ನಗರ ತಮ್ಮನ್ನು ಯಾವ ಮಟ್ಟಕ್ಕೆ ಬೆಳೆಸಿದೆ ಎಂಬುದನ್ನು ಮರೆಯುವುದಿಲ್ಲ. ಇಲ್ಲಿ ಕೆಲಸ ಗಿಟ್ಟಿಸಿಕೊಂಡವರು ಮೊದಲ ಬಾರಿಗೆ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿದರು ಇದ್ದಾರೆ. ಯಾರೋ ಒಬ್ಬರು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಬದಲಾಯಿಸುವ ಮಾರ್ಗ ದರ್ಶಕರನ್ನು ಕಂಡುಕೊಂಡರು. ಅದಕ್ಕಾಗಿಯೇ ಜನರು ಇಲ್ಲಿನ ಹೋರಾಟವನ್ನು ಸಹಿಸಿಕೊಳ್ಳುತ್ತಾರೆ. ಏಕೆಂದರೆ ಅವರಿಗೆ, ಬೆಂಗಳೂರು ಕೇವಲ ಒಂದು ನಗರವಲ್ಲ. ಇದು ಒಂದು ಮಹತ್ವದ ಹೆಜ್ಜೆ ಆಗಿರುತ್ತದೆ ಎಂದು ಬಣ್ಣಿಸಿದ್ದಾರೆ‌

Viral Video: ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ; ಬಾಡಿಗೆ ಹಣ ಪಡೆಯದೆ ಹೃದಯವಂತಿಕೆ ತೋರಿಸಿದ ಆಟೋ ಚಾಲಕ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು "ನಗರವು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ, ಆದರೆ ಇದು ನಿಮ್ಮ ಜೀವನವನ್ನು ಬದಲಾಯಿಸುವ ಅವಕಾಶಗಳನ್ನು ಕೂಡ ನೀಡುತ್ತದೆ" ಎಂದು ಹೇಳಿದ್ದಾರೆ. ಮತ್ತೊಬ್ಬರು ನೀವು ಹೇಳಿದ್ದು ಸತ್ಯವಾದ ಮಾತು..ನೂರು ಬಾರಿ ಬೆಂಗಳೂರು ಬಿಟ್ಟು ಹೋಗುವುದೆಂದು ಹೇಳಿದರೂ ಇಲ್ಲೇ ನೆಲೆ ನಿಂತಿದ್ದೇನೆ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.