ಭೋಪಾಲ್, ಡಿ. 24: ಇತ್ತೀಚಿಗೆ ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಕಾರಣಕ್ಕೆಲ್ಲ ವೈಮನಸ್ಸು ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಪರಸ್ಪರ ಹೊಂದಾಣಿಕೆ ಇಲ್ಲದಿರುವುದು, ಆರ್ಥಿಕ ಸಮಸ್ಯೆ, ಅಕ್ರಮ ಸಂಬಂಧಗಳ ಕಾರಣಕ್ಕೆ ದಾಂಪತ್ಯ ಸಂಬಂಧಗಳು ವಿಚ್ಛೇದನ ಪಡೆಯುವ ಮಟ್ಟಕ್ಕೆ ತಲುಪಿವೆ. ಕೆಲವು ಅಕ್ರಮ ಸಂಬಂಧಗಳು ಅತಿರೇಕಕ್ಕೆ ಹೋಗಿ ಜಗಳ ನಡೆದು ದಾಂಪತ್ಯ ಜೀವನ ಬೀದಿಗೆ ಬಂದದ್ದೂ ಇದೆ. ಇದೀಗ ವ್ಯಕ್ತಿಯೊಬ್ಬ ಮೊದಲ ಪತ್ನಿ ಬದುಕಿದ್ದಾಗಲೇ ಎರಡನೇ ಮದುವೆಗೆ ಅನುಮತಿ ಕೋರಿ ಬಳಿಕ ಅರ್ಜಿ ಸಲ್ಲಿಸಿ ಫಜೀತಿಗೆ ಸಿಲುಕಿದ ಘಟನೆ ವೈರಲ್ ಆಗಿದೆ. ಈ ವಿಚಾರ ತಿಳಿದ ಮೊದಲ ಪತ್ನಿಯು ಪತಿ ಹಾಗೂ ಆತ ಮದುವೆ ಆಗಬೇಕಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ಘಟನೆ ಮಧ್ಯ ಪ್ರದೇಶದ ಸಾಹೋರ್‌ನಲ್ಲಿ ನಡೆದಿದೆ. ಸಾಹೋರ್ ಕಲೆಕ್ಟರ್ ಕಚೇರಿಯಲ್ಲಿ ಮಹಿಳೆ ಮತ್ತು ಆಕೆಯ ಕುಟುಂಬದವರು ಜಗಳ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಸಾಹೋರ್ ಕಲೆಕ್ಟರ್ ಕಚೇರಿಯಲ್ಲಿ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆತ ಮದುವೆಯಾಗಲು ಮುಂದಾದ ಯುವತಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದು. ಎಡಿಎಂ ನ್ಯಾಯಾಲಯದ ಹೊರಗೆ ಗುಂಪೊಂದು ಪರಸ್ಪರ ಜಗಳವಾಡುತ್ತಿರುವುದು ವಿಡಿಯೊದ ಮೂಲಕ ತಿಳಿದುಬಂದಿದೆ. ಈ ಘರ್ಷಣೆ ಭುಗಿಲೆದ್ದಿದ್ದ ಬಳಿಕ ಎಡಿಎಂ ನ್ಯಾಯಾಲಯದ ಹೊರಗೆ ಸುಮಾರು ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ದೊಡ್ಡ ಹೈ ಡ್ರಾಮವೇ ನಡೆದಿದೆ.
ವಿಡಿಯೊ ನೋಡಿ:
ಸ್ಥಳೀಯ ಮಾಹಿತಿಯ ಪ್ರಕಾರ, ಕನ್ನೌಜ್ ಮಿರ್ಜಿ ನಿವಾಸಿ ಸಂಜು ಸಿಂಗ್ ತನ್ನ ಪತ್ನಿಯಿಂದ ಅನೇಕ ವರ್ಷದ ಕಾಲ ದೂರ ಉಳಿದಿದ್ದ. ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದ. ಈ ನಡುವೆ ಎರಡನೇ ಮದುವೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಲು ಮಧ್ಯ ಪ್ರದೇಶದ ಎಡಿಎಂ ನ್ಯಾಯಾಲಯಕ್ಕೆ ಬಂದಿದ್ದ.
ಸಾಹೋರ್ ಕಲೆಕ್ಟರೇಟ್ ಆಫೀಸ್‌ನಲ್ಲಿ ಎರಡನೇ ಮದುವೆಗೆ ಅರ್ಜಿ ಸಲ್ಲಿಸುತ್ತಿದ್ದಾಗ ಆತನ ಮೊದಲ ಪತ್ನಿ ಹಾಗೂ ಆಕೆಯ ಕುಟುಂಬದವರು ಅಲ್ಲಿಗೆ ದಿಢೀರ್ ಆಗಿ ಎಂಟ್ರಿ ನೀಡಿದರು. ಬಳಿಕ ಸಂಜು ಸಿಂಗ್ ಮತ್ತು ಆತನ ಬಾವಿ ಪತ್ನಿ ಮೇಲೆ ಹಲ್ಲೆ ಮಾಡಿದ್ದು ಬಳಿಕ ದೊಡ್ಡ ಜಗಳವೇ ನಡೆದಿದೆ.
ಏರ್‌ಪೋರ್ಟ್ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್
ಮೊದಲಿಗೆ ಸಂಜು ಸಿಂಗ್‌ನ ಪತ್ನಿ ಆತ ಎರಡನೇ ಮದುವೆಯಾಗುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನೋಡ ನೋಡುತ್ತಿದ್ದಂತೆ ಎರಡೂ ಕಡೆಯವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಂಜು ಸಿಂಗ್ ತಮ್ಮ ಮಾಜಿ ಪತ್ನಿ ತನ್ನನ್ನು ಥಳಿಸಿದ್ದಾರೆ ಎಂದು ಕೋರ್ಟ್‌ನಲ್ಲಿ ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.
ಈ ವಿಡಿಯೊ ನೋಡಿ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಕೆ ತುಂಬಾ ಜೋರಾಗಿದ್ದ ಕಾರಣಕ್ಕೆ ಆತ ಅವಳನ್ನು ಬಿಟ್ಟು ಮರು ಮದುವೆಯಾಗಲು ಹೊರಟಿದ್ದಾನೆ. ಜತೆಗಿದ್ದು ಬಾಳ್ವೆ ನಡೆಸಲು ಸಾಧ್ಯವಿಲ್ಲ ಎಂದು ಅರಿತ ಮೇಲೆ ಬಲವಂತವಾಗಿ ಒಟ್ಟಿಗಿರಲು ಸಾಧ್ಯವಿಲ್ಲ. ಆಕೆ ಇಷ್ಟೆಲ್ಲ ಜಗಳ ಮಾಡುವ ಬದಲು ಪತಿಯ ಮನವೊಲಿಸಲು ಪ್ರಯತ್ನಿಸಬಹುದಿತ್ತು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.