ಭೋಪಾಲ್, ಅ. 26: ಇತ್ತೀಚೆಗೆ ಅನೈತಿಕ ಸಂಬಂಧದಿಂದಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಭದಯ್ಯಕುಂಡ್ನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ರೆಡ್ಹ್ಯಾಂಡ್ ಆಗಿ ಕಂಡು ಹಿಡಿದ ಘಟನೆ (Viral News) ವರದಿಯಾಗಿದೆ.
ಅಕ್ಟೋಬರ್ 20ರಂದು ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಪ್ರವಾಸಿ ತಾಣದಲ್ಲಿ ಪ್ರಿಯಕರನ ಜತೆ ಇರುವ ಪತ್ನಿಯನ್ನು ಗಮನಿಸಿದ್ದಾನೆ. ಆತ ತಕ್ಷಣ ತನ್ನ ಸಹೋದರನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಕೋಪಗೊಂಡ ಪತಿ ಮತ್ತು ಆತನ ಸಹೋದರ ಸೇರಿ ಪ್ರಿಯಕರನ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ, ಬೆಲ್ಟ್ನಿಂದ ತೀವ್ರವಾಗಿ ಹೊಡೆದಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಗೆಳೆಯನ ಕಾಲುಗಳನ್ನು ಕಟ್ಟಿರುವುದನ್ನು ಮತ್ತು ಅವನ ಪಕ್ಕದಲ್ಲಿ ಪತ್ನಿ ನಿಂತಿರುವುದನ್ನು ಕಾಣಬಹುದು. ಪತಿ ಪದೇ ಪದೆ ಬೆಲ್ಟ್ನಿಂದ ಹೊಡೆಯುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ಮಹಿಳೆಯ ದೂರಿನ ಆಧಾರದ ಮೇಲೆ, ಪೊಲೀಸರು ಆಕೆಯ ಪತಿ ಮತ್ತು ಆತನ ಸೋದರ ಸಂಬಂಧಿಯನ್ನು ಬಂಧಿಸಿದ್ದಾರೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ
ಸಾರ್ವಜನಿಕ ಪ್ರದೇಶದಲ್ಲಿ ನಡೆದ ಈ ಸಂಪೂರ್ಣ ಘಟನೆಯನ್ನು ಅಲ್ಲಿಯೇ ಇದ್ದವರು ವಿಡಿಯೊ ಚಿತ್ರೀಕರಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇಲೆ ಪೊಲೀಸರು ಪತಿ ಹಾಗೂ ಆತನ ಸಹೋದರನನ್ನು ವಶಕ್ಕೆ ಪಡೆದಿದ್ದಾರೆ.