ನವದೆಹಲಿ, ಏ. 28: ಇತ್ತೀಚೆಗೆ ದಾಂಪತ್ಯ ಜೀವನವು ಸಣ್ಣ ಪುಟ್ಟ ವಿಚಾರಗಳಿಗೆ ಕೊನೆಗೊಳುತ್ತಿದೆ. ಹೊಂದಾಣಿಕೆ ಕೊರತೆ, ಆಕ್ರಮ ಸಂಬಂಧ ಹೀಗೆ ವಿವಿಧ ಕಾರಣಗಳಿಗೆ ನೊಂದು ಡಿವೋರ್ಸ್ ನೀಡಿದವರು ಅನೇಕರಿದ್ದಾರೆ. ಈ ನಡುವೆ ಪತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧ ತಿಳಿದಿದ್ದರೂ ಮಕ್ಕಳಿಗಾಗಿ ಸಹಿಸಿಕೊಂಡಿರುವ ಸುದ್ದಿ(Viral News) ವೈರಲ್ ಆಗಿದೆ. ʼʼಮಕ್ಕಳ ಭವಿಷ್ಯಕ್ಕಾಗಿ ಪತ್ನಿಯ ದ್ರೋಹವನ್ನು ಸಹಿಸಿಕೊಂಡು ಇದ್ದೇನೆʼʼ ಎಂದು ಆತ ಅಳಲು ತೋಡಿಕೊಂಡಿದ್ದಾನೆ.
ಇತ್ತೀಚೆಗೆ ಪತಿ ಅಥವಾ ಪತ್ನಿಯ ಅಕ್ರಮ ಸಂಬಂಧದ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ವ್ಯಕ್ತಿಯೊಬ್ಬ ತನ್ನ ಪತ್ನಿ ಮೂರು ವರ್ಷಗಳ ಹಿಂದೆ ಮೋಸ ಮಾಡಿದ್ದು, ಆಕೆಯ ದ್ರೋಹದ ಹೊರತಾಗಿಯೂ, ಮಕ್ಕಳ ಹಿತದೃಷ್ಟಿಯಿಂದ ಒಂದೇ ಮನೆಯಲ್ಲಿ ವಾಸಿಸಿದ್ದಾಗಿ ಹೇಳಿದ್ದಾನೆ.
ಮೂರು ವರ್ಷದ ಹಿಂದೆ ಈ ವ್ಯಕ್ತಿಯ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡು ದ್ರೋಹ ಮಾಡಿದ್ದಳು. ಆದರೆ ಆ ವ್ಯಕ್ತಿ ಅದನ್ನು ಸಹಿಸಿಕೊಂಡು ಬದುಕು ಸಾಗಿಸಿದ್ದಾನೆ. ಆತ ಪತ್ನಿಯ ಒಟ್ಟಿಗೆ ಇದ್ದರೂ ಆಕೆಯ ಮೇಲೆ ಒಂಚೂರು ಪ್ರೀತಿ ಉಳಿದಿರಲಿಲ್ಲ. ತಂದೆಯಾಗಿ ಜವಾಬ್ದಾರಿ ಪೂರೈಸುವುದನ್ನು ಮುಂದುವರಿಸಿದ್ದು ಬಹಳ ಹಿಂದೆಯೇ ಸಂಬಂಧದಿಂದ ಭಾವನಾತ್ಮಕವಾಗಿ ಹಿಂದೆ ಸರಿದಿರುವುದಾಗಿ ಹೇಳಿದ್ದಾನೆ.
ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು
ಪೋಸ್ಟ್‌ನಲ್ಲಿ ಆತ ತನ್ನ ಪತ್ನಿಯ ಬಗ್ಗೆ ಯಾವುದೇ ಪ್ರೀತಿಯನ್ನು ಹೊಂದಿಲ್ಲ ಎಂದು ಬಹಿರಂಗ ಪಡಿಸಿದ್ದಾನೆ. ಇತ್ತೀಚೆಗೆ ಇನ್ನೊಬ್ಬ ಮಹಿಳೆಯನ್ನು ಭೇಟಿಯಾದ ನಂತರ ಖುಷಿಯಾಗಿರುವುದಾಗಿ ತಿಳಿಸಿದ್ದಾನೆ. ಆಕೆ ಮತ್ತೆ ತನ್ನನ್ನು ಜೀವಂತವಾಗಿ ಇರಿಸಿದ್ದಾಳೆ, ತನ್ನನ್ನು ಬಹಳ ಗೌರವದಿಂದ ಕಾಣುತ್ತಾಳೆ ಎಂದು ಬರೆದಿದ್ದಾನೆ.
ಇನ್ನೂ ತನ್ನ ಪತ್ನಿಗೆ ಬದ್ಧವಾಗಿರಬೇಕ? ಅಥವಾ ವಿಚ್ಛೇದನ ನೀಡಿ ಹೊಸ ಜೀವನ ಆರಂಭಿಸಬೇಕ? ಎಂದು ನೆಟ್ಟಿಗರಲ್ಲಿ ಕೇಳಿದ್ದಾನೆ. ಪೋಸ್ಟ್ ಆನ್‌ಲೈನ್‌ನಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು, "ನಿಮ್ಮ ಮೊದಲ ತಪ್ಪು ಮೋಸ ಮಾಡುವ ಪತ್ನಿಯನ್ನು ಕ್ಷಮಿಸುವುದು. ಆಕೆಯನ್ನು ಬಿಟ್ಟು ಹೋಗಬೇಕಿತ್ತು. ಮಕ್ಕಳು ಮೋಸಗಾರನೊಂದಿಗೆ ಇರಲು ಆರ್ಹರಲ್ಲ "ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಮಕ್ಕಳ ಭವಿಷ್ಯದ ಬಗ್ಗೆಯೂ ಯೋಚಿಸಿʼʼ ಎಂದು ಕಮೆಂಟ್ ಮಾಡಿದ್ದಾರೆ.