ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕಸದ ರಾಶಿಯ ನಡುವೆ ಆಹಾರ ಹುಡುಕುತ್ತಿದ್ದ ಆನೆ: ಪ್ರವಾಸಿಗರ ಬೇಜವ್ದಾರಿ ವರ್ತನೆಗೆ ನೆಟ್ಟಿಗರ ಕಿಡಿ!

Viral Video: ಧಾರ್ಮಿಕ ನೆಲೆಯಾಗಿರುವ ಹಾಗೂ ಪ್ರಕೃತಿ ಪ್ರೇಮಿ ಸ್ಥಳವಾದ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಬೇಜವಾಬ್ದಾರಿತನ ತೋರಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮಾವಾಸ್ಯೆ ವಾರಾಂತ್ಯದ ಸಂಧರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಕಸದ ನಡುವೆ ಆನೆಯೊಂದು ಆಹಾರ ಹುಡುಕುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರ ನಡವಳಿಕೆ ಇನ್ನು ಬದಲಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ...

ಪ್ಲಾಸ್ಟಿಕ್ ಡಂಪ್‌ನಲ್ಲಿ ಆಹಾರ ಹುಡುಕಿದ ಕಾಡಾನೆ

ಚಾಮರಾಜನಗರ,ಜೂ.19: ಇತ್ತೀಚೆಗೆ ಪರಿಸರ ಕಾಳಜಿಯ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತಾಜ್ಯ, ತಿಂಡಿ ಪ್ಯಾಕೇಟ್ ಗಳನ್ನು ಅಲ್ಲಲ್ಲಿ ಬಿಸಾಕಿ ಹಾನಿ ಗೇಡವುತ್ತಿದ್ದಾರೆ. ಇದೀಗ ಧಾರ್ಮಿಕ ನೆಲೆಯಾಗಿರುವ ಹಾಗೂ ಪ್ರಕೃತಿ ಪ್ರೇಮಿ ಸ್ಥಳವಾದ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಬೇಜವಾಬ್ದಾರಿತನ ತೋರಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮಾವಾಸ್ಯೆ ವಾರಾಂತ್ಯದ ಸಂಧರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಕಸದ ನಡುವೆ ಆನೆಯೊಂದು ಆಹಾರ ಹುಡುಕುತ್ತಿದೆ. ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ಜನರ ನಡವಳಿಕೆ ಇನ್ನು ಬದಲಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅಮಾವಾಸ್ಯೆಯಂದು ಪ್ರಸಿದ್ಧ ಮಲೆ ಮಹದೇಶ್ವರ ದೇವ ಸ್ಥಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು ಅಪಾರ ಪ್ರಮಾಣದ ತ್ಯಾಜ್ಯವನ್ನು ಬಿಟ್ಟ ನಂತರ ಆನೆಯೂ ಈ ಸ್ಥಳಕ್ಕೆ ಆಗಮಿಸಿದೆ. ಪ್ಲಾಸ್ಟಿಕ್ ಪ್ರಾಣಿಗಳಿಗೆ ಹೇಗೆ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂಬುದನ್ನು ಈ ವಿಡಿಯೊ ತಿಳಿಸಿದೆ.

ವಿಡಿಯೋ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಮಲೆ ಮಹದೇಶ್ವರ ಬೆಟ್ಟಗಳಲ್ಲಿ ಕಸದ ಡಂಪ್‌ಗಳ ಬಳಿ ಕಾಡು ಆನೆಯೊಂದು ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗಳ ಮೇಲೆ ಓಡಾಡುತ್ತಾ ಇದೆ. ಇದರ ನಡುವೆ ಆನೆ ಹತಾಶೆಯಿಂದ ಆಹಾರ ಹುಡುಕುತ್ತಿದೆ. ಈ ವಿಡಿಯೊ ಪರಿಸರ ಸೂಕ್ಷ್ಮ ವಲಯದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ವನ್ಯಜೀವಿಗಳ ರಕ್ಷಣೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಯಾತ್ರಿಕರ ಗುಂಪು ಬೆಟ್ಟದ ಕೆಲವು ಭಾಗಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಚೀಲಗಳು, ಬಿಸಾಡಬಹುದಾದ ತಟ್ಟೆಗಳು, ಆಹಾರ ಪ್ಯಾಕೇಜಿಂಗ್, ಬಾಟಲಿಗಳು ಮತ್ತು ಉಳಿದ ಆಹಾರ ಸೇರಿದಂತೆ ಅಪಾರ ಪ್ರಮಾಣದ ತ್ಯಾಜ್ಯವನ್ನು ಬಿಟ್ಟಿದೆ. ಹಸಿವಿನಿಂದ ಆಹಾರ ಹುಡುಕುತ್ತಿದ್ದ ಕಾಡಾನೆಯೊಂದು ಈ ತ್ಯಾಜ್ಯದ ರಾಶಿಯನ್ನು ಕಂಡಿದೆ.

Viral News: ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?

ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು ಮನುಷ್ಯರು ಕಾಡನ್ನು ಡಂಪಿಂಗ್ ಸ್ಥಳವನ್ನಾಗಿ ಮಾಡಿ ಕೊಂಡಿರುವುದರಿಂದ ಮೂಕಪ್ರಾಣಿಗಳು ಕಸ ತಿಂದು ಬದುಕುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದ್ದಾರೆ.‌ ಬಳಕೆದಾರರೊಬ್ಬರು ಯಾವಾಗಲೂ ಸರ್ಕಾರವನ್ನು ದೂಷಿಸುವುದೇಕೆ? ಜವಾಬ್ದಾರಿಯುತ ನಾಗರಿಕರಾಗಿ ಪರಿಸರದ ಬಗ್ಗೆ ಕಾಳಜಿ ವಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ.