ಲಕ್ನೋ,ಫೆ.5: ಇಂದು ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಹೀಗಾಗಿ ಅಗತ್ಯ ವಸ್ತು ಬೇಕೆಂದಾಗ ಆನ್ ಲೈನ್ ನಲ್ಲೇ ಆರ್ಡರ್ ಮಾಡುತ್ತೇವೆ. ಆದರೆ ಮನೆ ಬಾಗಿಲಿಗೆ ಬರುವ ಇಂತಹ ಸೇವೆ ಗಳನ್ನು ಅವರಿಗೆ ಬೇಕಾದಂತೆ ವಿಚಿತ್ರವಾಗಿ ಬಳಕೆ ಮಾಡಿ ಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಡೆಲಿವರಿ ರೈಡರ್ ಕೈಗೆ ಮಹಿಳೆಯೊಬ್ಬರು 'ಕಸದ ಡಬ್ಬವನ್ನು ಕಳುಹಿಸಿದ ಘಟನೆವೊಂದು ನಡೆದಿದೆ. ಮಹಿಳೆಯೊಬ್ಬರು ಕಸವನ್ನು ವಿಲೇವಾರಿ ಮಾಡಲು ಪೋರ್ಟರ್ ಸೇವೆಯನ್ನು ಬಳಸಿದ್ದು ಬೇಜವಾಬ್ದಾರಿ ತನದ ವರ್ತನೆ, ವಿತರಣಾ ವೇದಿಕೆಗಳ ದುರುಪಯೋಗಕ್ಕಾಗಿ ಟೀಕೆಗೆ ಗುರಿಯಾಗಿದೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ಲಕ್ನೋದಲ್ಲಿ ಈ ಘಟನೆ ನಡೆದಿದ್ದು ಪೋರ್ಟರ್ ಆ್ಯಪ್‌ನಲ್ಲಿ ಕೆಲಸ ಮಾಡುವ ಕರಣ್ ನಿಶಾದ್ ಎಂಬ ಯುವಕನಿಗೆ ಮಹಿಳೆ ಯಿಂದ ಪಾರ್ಸೆಲ್ ಆರ್ಡರ್ ಬಂದಿತ್ತು. ಇದರ ಹಣವನ್ನು ಆಕೆ ಆನ್‌ಲೈನ್ ಮೂಲಕವೇ ಪಾವತಿ ಮಾಡಿದ್ದಾರೆ. ಕರಣ್ ಆ ಪಾರ್ಸೆಲ್ ಪಡೆದು ಗ್ರಾಹಕಿ ಸೂಚಿಸಿದ ಸ್ಥಳಕ್ಕೆ ಹೋಗಿದ್ದಾರೆ.
ವಿಡಿಯೋ ನೋಡಿ:
ಆದಾಗ್ಯೂ, ಡ್ರಾಪ್ ಸ್ಥಳವನ್ನು ತಲುಪಿದಾಗ ಪರಿಸ್ಥಿತಿ ಆಘಾತಕಾರಿ ತಿರುವು ಪಡೆದುಕೊಂಡಿದೆ. ಕರಣ್ ಮಹಿಳೆಯನ್ನು ಸಂಪರ್ಕಿಸಿದಾಗ "ನೀವು ಅದನ್ನು ಯಾರಿಗೂ ತಲುಪಿಸುವ ಅಗತ್ಯವಿಲ್ಲ. ಅದನ್ನು ಎಸೆದು ಬಿಡಿ" ಎಂದು ಹೇಳಿದ್ದಾರೆ.. ಅನುಮಾನ ಬಂದು ಕರಣ್ ಆ ಪ್ಯಾಕ್ ಬಿಚ್ಚಿ ನೋಡಿದಾಗ ಅದರಲ್ಲಿ ಕೇವಲ ಮನೆಯ ಕಸ ಇತ್ತು. ವಿತರಣಾ ಕಾರ್ಮಿಕರನ್ನು ಹೀಗೆ ಕಸ ವಿಲೇವಾರಿ ಸೇವೆಗಳಾಗಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
Viral Video: ಛೇ... ಇದೆಂಥಾ ಅಸಹ್ಯ! ಮಕ್ಕಳ ಎದುರೇ ಮಹಿಳೆಯ ಜತೆ ಹೋಮ್ ಗಾರ್ಡ್ ಅಶ್ಲೀಲ ನೃತ್ಯ
ಕಸವನ್ನು ಗಾಡಿಗೆ ಹಾಕುವ ಬದಲು, ಆ ಮಹಿಳೆ ಹಣ ಕೊಟ್ಟು ಡೆಲಿವರಿ ರೈಡರ್ ಮೂಲಕ ಕಸ ವಿಲೇವಾರಿ ಮಾಡಲು ಯತ್ನಿಸಿದ್ದಾರೆ. ಸದ್ಯ ಕ್ಲಿಪ್ ವೇಗವಾಗಿ ವೈರಲ್ ಆಗಿ, 24 ಗಂಟೆಗಳಲ್ಲಿ 8.1 ಮಿಲಿಯನ್ ವೀಕ್ಷಣೆಗಳು, 2.5 ಲಕ್ಷ ಲೈಕ್ ಪಡೆದುಕೊಂಡಿದೆ. ಅನೇಕ ನೆಟಿಜನ್‌ಗಳು ಗ್ರಾಹಕರು ಸೇವೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಟೀಕಿಸಿದರೆ, ಇತರರು ಕರಣ್ ಅವರ ರಸ್ತೆಬದಿಯಲ್ಲಿ ತ್ಯಾಜ್ಯವನ್ನು ಸುರಿದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಇದು ಪರಿಸರ ಬೇಜವಾಬ್ದಾರಿ ಎಂದು ಬರೆದಿದ್ದು ಒಬ್ಬ ಬಳಕೆದಾರರು, "ಬ್ರೋ ನೀವು ಅದನ್ನು ಸರಿಯಾದ ಬಿನ್‌ಗೆ ಎಸೆಯಬೇಕಿತ್ತು.. ನೀವು ಅದನ್ನು ರಸ್ತೆಯಲ್ಲಿ ಏಕೆ ಎಸೆಯುತ್ತೀರಿ ಎಂದಿದ್ದಾರೆ. "ಮಹಿಳೆ ಮಾಡಿದ್ದು ತಪ್ಪು, ಆದರೆ ನೀವು ರಸ್ತೆಯಲ್ಲಿ ಕಸ ಎಸೆದು ಪರಿಸರ ಹಾಳು ಮಾಡ ಬಾರದಿತ್ತು" ಎಂದು ಮತ್ತೊಬ್ಬ ನೆಟ್ಟಿಗರು ಬುದ್ಧಿವಾದ ಹೇಳಿದ್ದಾರೆ. ತಮ್ಮ ತಪ್ಪಿನ ಅರಿವಾದ ತಕ್ಷಣ ಕರಣ್ ಸರಿಸುಮಾರು 7 ಕಿಲೋಮೀಟರ್ ವಾಪಸ್ ಪ್ರಯಾಣಿಸಿ ಕಸ ಎಸೆದ ಜಾಗಕ್ಕೆ ಹೋಗಿದ್ದು ಕಸವನ್ನು ಹುಡುಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ..