ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಜೋರಾಗಿ ಆಕಳಿಸಿದ್ದರಿಂದ ಬೆನ್ನು ಮೂಳೆ ಮುರಿದು ಮಹಿಳೆಗೆ ಪಾರ್ಶ್ವವಾಯು

ಮಹಿಳೆಯೊಬ್ಬರು ಎಂದಿನಂತೆ ದಿನದ ಆರಂಭವನ್ನು ಜೋರಾಗಿ ಆಕಳಿಸಿ ಮಾಡಿದ್ದು ಆಕೆಯ ಪ್ರಾಣಕ್ಕೆ ಕುತ್ತು ತಂದಿತ್ತು. ಈ ಕುರಿತು ಆಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾಳೆ. ಇದು ಸಾಕಷ್ಟು ವೈರಲ್ ಆಗಿದೆ. ಮೂರು ಮಕ್ಕಳ ತಾಯಿಯಾದ ಹೇಲಿ ಬ್ಲಾಕ್ ಜೋರಾಗಿ ಆಕಳಿಸಿದ್ದು ಆಕೆಯ ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಆಕೆ ಪಾರ್ಶ್ವವಾಯುವಿಗೆ ತುತ್ತಾಗಿ, ತುರ್ತು ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಜೋರಾಗಿ ಆಕಳಿಸಿದ್ದರಿಂದ ಬೆನ್ನು ಮೂಳೆ ಮುರಿದು ಮಹಿಳೆಗೆ ಪಾರ್ಶ್ವವಾಯು

-

ಬೆಂಗಳೂರು: ಕೆಲವೊಮ್ಮೆ ನಾವು ಸಣ್ಣ ವಿಷಯ ಎಂದುಕೊಂಡಿದ್ದು ಗಂಭೀರ ಸ್ವರೂಪ ಹೇಗೆ ತಾಳುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಮಹಿಳೆಯೊಬ್ಬರಿಗೆ ತಮ್ಮ ಆಕಳಿಕೆ ಪ್ರಾಣಕ್ಕೆ ಕುತ್ತು ತಂದಿರುವ ಘಟನೆಯೊಂದು ನಡೆದಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕೆ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ (Viral News) ಆಗಿದೆ. ಮೂರು ಮಕ್ಕಳ 36 ವರ್ಷದ ತಾಯಿಯಾದ ಬ್ರಿಟಿಷ್ ಮಹಿಳೆ ಹೇಲಿ ಬ್ಲಾಕ್ ಎಂಬಾಕೆ ಜೋರಾಗಿ ಆಕಳಿಸಿದ್ದು (yawning) ಇದು ಆಕೆಯ ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಆಕೆ ಪಾರ್ಶ್ವವಾಯುವಿಗೆ (paralysis) ತುತ್ತಾಗಿ, ತುರ್ತು ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು.

ಆರೋಗ್ಯವಾಗಿದ್ದ ಹೇಲಿ ಬ್ಲಾಕ್ ತನ್ನ ನವಜಾತ ಶಿಶುವಿಗೆ ಹಾಲಿನ ಬಾಟಲ್ ಸಿದ್ದ ಪಡಿಸಬೇಕಿತ್ತು. ಈ ವೇಳೆ ಮಗು ಅಳುತ್ತಿರುವುದು ನೋಡಿ ಬೇಗಬೇಗನೆ ಎದ್ದಳು. ಇದೇ ವೇಳೆಯಲ್ಲಿ ಆಕೆ ಜೋರಾಗಿ ಆಕಳಿಕೆ ಮಾಡಿದ್ದಾಳೆ. ತಕ್ಷಣ ಅವಳಿಕೆ ವಿದ್ಯುತ್ ಶಾಕ್ ನೀಡಿದ ಅನುಭವವಾಗಿದೆ. ಆದರೂ ಅದನ್ನು ನಿರ್ಲಕ್ಷಿಸಿ ಮಗುವಿನ ಬಗ್ಗೆ ಯೋಚಿಸಿ ತನ್ನ ಕಾರ್ಯವನ್ನು ಮುಂದುವರಿಸಿದಳು.

ಅನಂತರ ಆಕೆಗೆ ತನ್ನ ತೋಳುಗಳು ಗಾಳಿಯಲ್ಲಿರುವಂತೆ ಭಾಸವಾಯಿತು. ಹೆಚ್ಚಿನ ವಿದ್ಯುತ್ ಕಿಡಿಯ ಸಂವೇದನೆಗಳು ಅನುಭವಕ್ಕೆ ಬಂತು. ಈ ಬಗ್ಗೆ ಪತಿಗೆ ಹೇಳಿದಳು. ಅನಂತರ ಆಕೆಗೆ ತನ್ನ ದೇಹದ ಅರ್ಧದಷ್ಟು ಭಾಗದಲ್ಲಿ ಸೆಳವು ಪ್ರಾರಂಭವಾಯಿತು. ಏನೋ ಗಂಭೀರವಾಗಿ ತಪ್ಪಾಗಿದೆ ಎಂದು ಅರಿತ ಅವಳು ಮಗುವಿನ ಹಾಲಿನ ಬಾಟಲಿಯನ್ನು ಸಿದ್ದಪಡಿಸಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದಳು. ಆಸ್ಪತ್ರೆಯ ದಾರಿ ಅವಳಿಗೆ ತೀವ್ರ ನೋವಿನಿಂದ ಕೂಡಿತ್ತು. ರಸ್ತೆಯಲ್ಲಿನ ಪ್ರತಿಯೊಂದು ಉಬ್ಬು ಕೂಡ ಅವಳಿಗೆ ಬೆನ್ನುಮೂಳೆಯನ್ನು ಸೀಳಿದಂತೆ ಭಾಸವಾಗುತ್ತಿತ್ತು.

ಆಸ್ಪತ್ರೆಗೆ ದಾಖಲಾದ ಪ್ರಾರಂಭದಲ್ಲಿ ವೈದ್ಯರಿಗೂ ಕಾರಣ ಗೊತ್ತಾಗಲಿಲ್ಲ. ಆಕೆಗೆ ನೋವಿಗೆ ಚಿಕಿತ್ಸೆ ನೀಡಲಾಯಿತು. ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಯಿತು. ಆಸ್ಪತ್ರೆಯಲ್ಲಿ ಯಾರೂ ನನ್ನ ಮಾತನ್ನು ಕೇಳುತ್ತಿರಲಿಲ್ಲ. ನಾನು ಆ ದಿನ ರಾತ್ರಿಯಿಡೀ ನೋವಿನಿಂದ ಕಿರುಚುತ್ತಿದ್ದೆ ಎಂದು ಆಕೆ ವಿವರಿಸಿದ್ದಾಳೆ.

ಅನಂತರ ಸ್ಕ್ಯಾನ್‌ ಮಾಡಿದಾಗ ಆಕೆಯ ಕುತ್ತಿಗೆಯಲ್ಲಿ ಎರಡು ಕಶೇರುಖಂಡಗಳಾದ ಸಿ6 ಮತ್ತು ಸಿ7 ಆಕಳಿಕೆಯ ಪರಿಣಾಮ ಬೆನ್ನುಹುರಿಯೊಳಗೆ ಮುಂದಕ್ಕೆ ಚಲಿಸಿ ಅದನ್ನು ಸಂಕುಚಿತಗೊಳಿಸಿವೆ. ಇದರಿಂದ ಆಕೆಯ ಬಲಗೈ ಭಾಗವು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಕೂಡಲೇ ಶಸ್ತ್ರಚಿಕಿತ್ಸೆಗೆ ಆಕೆಯನ್ನು ಒಳಪಡಿಸಲಾಯಿತು. ಆದರೂ ಮೊದಲಿನಂತಾಗುವ ಭರವಸೆ ಶೇ. 50ರಷ್ಟು ಮಾತ್ರ ಎಂದು ವೈದ್ಯರು ಹೇಳಿದರು. ಶಸ್ತ್ರಚಿಕಿತ್ಸೆಯಿಂದ ಆಕೆಯ ಬೆನ್ನುಹುರಿಗೆ ಹಾನಿಯಾದರೂ ತುರ್ತು ಶಸ್ತ್ರಚಿಕಿತ್ಸೆಯಿಂದಾಗಿ ಅವಳು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಆದರೆ ಆಕೆ ಇನ್ನೂ ಆಘಾತದಲ್ಲಿದ್ದಳು. ಕೇವಲ ಆಕಳಿಕೆಯಿಂದ ಕುತ್ತಿಗೆ ಹೇಗೆ ಮುರಿಯಿತು ಎಂದು ಯೋಚಿಸುತ್ತಿದ್ದಳು.

ಇದನ್ನೂ ಓದಿ: Viral Video: ನ್ಯೂಯಾರ್ಕ್‌ ಬೀದಿಯಲ್ಲಿ ಮ್ಯಾಕ್ರನ್‌ ಹೈಡ್ರಾಮಾ! ಟ್ರಂಪ್‌ಗೆ ಕರೆ ಮಾಡಿದ ಫ್ರಾನ್ಸ್‌ ಅಧ್ಯಕ್ಷ

ಆಕಳಿಕೆ ಪರಿಣಾಮ ಬೆನ್ನುಮೂಳೆ ಮುರಿದುಕೊಂಡಿದ್ದರಿಂದ ಆಕೆಯ ಪತಿ ಅವಳನ್ನು ಮತ್ತು ನವಜಾತ ಮಗುವನ್ನು ನೋಡಿಕೊಳ್ಳಬೇಕಾಯಿತು. ಇದು ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಾಗಿತ್ತು. ನಮ್ಮ ಇಡೀ ಪ್ರಪಂಚವು ತಲೆಕೆಳಗಾಗಿತ್ತು ಎಂದು ಹೇಲಿ ಬ್ಲಾಕ್ ತಿಳಿಸಿದ್ದಾಳೆ. ಶಸ್ತ್ರಚಿಕಿತ್ಸೆಯ ಬಳಿಕ ನಾನು ವೀಲ್‌ಚೇರ್‌ನಲ್ಲಿ ಇಲ್ಲದಿರುವುದು ಒಂದು ಪವಾಡ ಎಂದಿರುವ ಮಹಿಳೆ ಇದಕ್ಕಾಗಿ ವೈದ್ಯರ ತಂಡಕ್ಕೆ ಧನ್ಯವಾದ ಹೇಳಿದ್ದಾಳೆ.