ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ನಡುರಸ್ತೆಯಲ್ಲಿ ಮಹಿಳೆಗೆ ಗನ್ ತೋರಿಸಿ ಎಳೆದಾಡಿದ ಶಿಕ್ಷಕ; ವಿಡಿಯೊ ವೈರಲ್

22 ವರ್ಷದ ಯುವತಿಯನ್ನು ಎಲೆದಾಡಿ ದೌರ್ಜನ್ಯ ಎಸಗಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಪ್ಪಿದಾಗ ತಿದ್ದ ನಡೆಸಬೇಕಾದ ಶಿಕ್ಷಕನೋರ್ವ ಈ ಕೃತ್ಯ ಎಸಗಿದ್ದು, ಕಾರಿನೊಳಗೆ ಯುವತಿಯನ್ನು ಎಳೆಯಲು ಯತ್ನಿಸಿದಲ್ಲದೇ ಗನ್ ತೋರಿಸಿ ಬೆದರಿಸಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಶಿಕ್ಷಕ ಶ್ಯಾಮ್‌ವೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಡುರಸ್ತೆಯಲ್ಲಿ ಮಹಿಳೆಗೆ ಗನ್ ತೋರಿಸಿ ಎಳೆದಾಡಿದ ಶಿಕ್ಷಕ; ವಿಡಿಯೊ ವೈರಲ್

-

Profile
Sushmitha Jain Sep 24, 2025 5:30 PM

ಆಗ್ರಾ: ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) 22 ವರ್ಷದ ಮಹಿಳೆಯೊಬ್ಬಳಿಗೆ ಶಾಲಾ ಶಿಕ್ಷಕ (Teacher) ಶ್ಯಾಮ್‌ವೀರ್ ಸಿಂಗ್ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಆರೋಪಿ ಮಹಿಳೆಯನ್ನು ಕಾರಿನೊಳಗೆ ಬಲವಂತವಾಗಿ ಎಳೆಯಲು ಯತ್ನಿಸಿ, ಗನ್ (Gun) ತೋರಿಸಿ ಹೆದರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಯ ವಿವರ

ಜಗ್ದೀಶ್‌ಪುರದ ಮಹಿಳೆ ಕಾರ್ಗಿಲ್ ಸ್ಕ್ವೇರ್ ಬಳಿಯ ಮೂನ್‌ಲೈಟ್ ಹೋಟೆಲ್ ಎದುರು ಸ್ಕೂಟರ್ ನಿಲ್ಲಿಸಿ ನೀರು ಕುಡಿಯುತ್ತಿದ್ದಳು. ಆಗ ಶ್ಯಾಮ್‌ವೀರ್ ಸಿಂಗ್ ಮತ್ತು ಇನ್ನೊಬ್ಬನು ಕಾರಿನಲ್ಲಿ ಬಂದು, 5,000 ರೂ. ಕೊಡುವುದಾಗಿ ಹೇಳಿ ಕಾರಿನೊಳಗೆ ಬರಲು ಕೇಳಿದರು. ಮಹಿಳೆ ತಿರಸ್ಕರಿಸಿದಾಗ, ಶ್ಯಾಮ್‌ವೀರ್ ಕಾರಿನಿಂದ ಇಳಿದು, “ನೀನ್ನನ್ನೇ ಕರೆಯುತ್ತಿದ್ದೇನೆ” ಎಂದು ಕೈಹಿಡಿದು ಎಳೆಯಲು ಯತ್ನಿಸಿದ. ಮಹಿಳೆ ವಿರೋಧಿಸಿ ಚೀರಿದಳು. ಜನರು ಸೇರಿದಾಗ ಆರೋಪಿ ಗನ್ ತೋರಿಸಿ ಹೆದರಿಸಿದ್ದಾನೆ. ಒಬ್ಬ ವ್ಯಕ್ತಿ ಮುಂದೆ ಬಂದಾಗ ಅವನಿಗೂ ಬಂದೂಕು ತೋರಿಸಿದ. ಮಹಿಳೆ ಆರೋಪಿಯ ಕಾರ್ ಕೀ ಕಿತ್ತುಕೊಂಡಳು. ಆದರೂ ಶ್ಯಾಮ್‌ವೀರ್ ತಪ್ಪಿಸಿಕೊಂಡು, ಮಹಿಳೆಯ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾನೆ.

ವೈರಲ್ ವಿಡಿಯೊ

ಎರಡು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಡಿವೆ. ಒಂದರಲ್ಲಿ ಮಹಿಳೆ, “ಈತ ನನ್ನನ್ನು ಪೀಡಿಸುತ್ತಿದ್ದಾರ, 5000 ರೂ. ಕೊಡುತ್ತೇನೆ ಬಾ ಎಂದು ಒತ್ತಾಯಿಸಿ ಬಂದೂಕು ತೋರಿಸಿದ” ಎಂದು ಹೇಳುತ್ತಾಳೆ. ಇನ್ನೊಂದರಲ್ಲಿ ಆರೋಪಿ ಅವಳ ಕೈ ಹಿಡಿದು ಎಳೆಯುತ್ತಿದ್ದು, ಜನರು “ಕೈಬಿಡು, ದೂರ ಇರಿ” ಎಂದು ಕೂಗುತ್ತಾರೆ.



ಈ ಸುದ್ದಿಯನ್ನು ಓದಿ: Viral Video: ಶಿಕ್ಷಣಾಧಿಕಾರಿ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಮುಖ್ಯಶಿಕ್ಷಕ; ವಿಡಿಯೋ ವೈರಲ್

ಪೊಲೀಸ್ ಕ್ರಮ

ಘಟನೆ ಬಗ್ಗೆ ಮಹಿಳೆ ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 24 ಗಂಟೆಗಳಲ್ಲಿ ಶ್ಯಾಮ್‌ವೀರ್ ಸಿಂಗ್‌ನನ್ನು ಬಂಧಿಸಲಾಗಿದೆ. ಅವನ ಗನ್ ಮತ್ತು ಕಾರ್ ವಶಕ್ಕೆ ಪಡೆಯಲಾಗಿದೆ. ಡಿಸಿಪಿ ಸೋನಾಮ್ ಕುಮಾರ್, “ಆರೋಪಿಯ ಗನ್ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ಮಹಿಳಾ ಸುರಕ್ಷತೆಯ ಪ್ರಶ್ನೆ

ಈ ಘಟನೆ ಆಗ್ರಾದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಶಿಕ್ಷಕನಿಂದ ಇಂತಹ ದೌರ್ಜನ್ಯ ಜನರಲ್ಲಿ ಆಘಾತ ಮೂಡಿಸಿದೆ. ಮಹಿಳೆಯ ಧೈರ್ಯವನ್ನು ಜನರು ಶ್ಲಾಘಿಸಿದ್ದಾರೆ. ಪೊಲೀಸರು ಸುರಕ್ಷತೆಗಾಗಿ ಕ್ರಮ ಜಾರಿಗೊಳಿಸುವ ಭರವಸೆ ನೀಡಿದ್ದಾರೆ.