ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪತಿಯನ್ನು ಕುತ್ತಿಗೆ ತನಕ ಮಣ್ಣಿನಲ್ಲಿ ಹೂತು ಹಾಕಿ ಮಹಿಳೆಯಿಂದೆ ಶಿರಕ್ಕೆ ಕ್ಷೀರಾಭಿಷೇಕ; ಪತ್ನಿಯ ಭಕ್ತಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು

Viral Video: ಗಂಡನ ಶಿರಕ್ಕೆ ಮಹಿಳೆ ಪೂಜೆ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಹೌದು, ಪತಿಯನ್ನು ಮಣ್ಣಿನಲ್ಲಿ ಹೂಳಿ ಶಿವಲಿಂಗದಂತೆ ಆತನ ಶಿರವನ್ನು ಪೂಜಿಸಿದ್ದಾಳೆ. ಈ ವಿಡಿಯೊ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದು, ಕಮೆಂಟ್‌ ಮೂಲಕ ಪ್ರತುಕ್ರಿಯಿಸಿದ್ದಾರೆ.

ಪತಿಯ ತಲೆಗೆ ಕ್ಷೀರಾಭಿಷೇಕ ಮಾಡಿದ ಮಹಿಳೆ

ದೆಹಲಿ, ಫೆ. 17: ದೇಶದಲ್ಲಿ ನೂರಾರು ಆಚರಣೆಗಳಿವೆ. ಅವು ಒಂದಕ್ಕಿಂತ ಒಂದು ಭಿನ್ನ. ಅದರಲ್ಲಿಯೂ ಪತಿಯೇ ದೇವರೆಂದು ಪರಗಣಿಸಿ ಮಹಿಳೆಯರು ಗೌರವ ಸಲ್ಲಿಸುತ್ತಾರೆ. ಕೆಲವು ವಿಶೇಷ ದಿನಗಳಂದು ಪೂಜೆ ಮಾಡುತ್ತಾರೆ. ಆದರೆ ಇಲ್ಲಿ ಇದು ವಿಪರೀತ ಎನ್ನುವ ಮಟ್ಟಕ್ಕೆ ಹೋಗಿದ್ದು, ಪತ್ನಿ ಪೂಜಿಸದಿದ್ದರೆ ತೊಂದರೆ ಇಲ್ಲ; ಕನಿಷ್ಠ ಪಕ್ಷ ಮನುಷ್ಯ ಎಂದು ಪರಿಗಣಿಸಿದರೆ ಸಾಕು ಎಂದು ನೆಟ್ಟಿಗರು ಬಯಸುವಂತಾಗಿದೆ. ಹೌದು, ಶಿವರಾತ್ರಿ ದಿನ ಮಹಿಳೆಯ ʼಪತಿ ಭಕ್ತಿʼ ಪರಾಕಷ್ಠೆ ತಲುಪಿದ್ದು, ವಿಡಿಯೊ (Viral Video) ನೋಡಿದ ಪುರುಷರೆಲ್ಲ ಬೆಚ್ಚಿ ಬಿದ್ದಿದ್ದಾರೆ. ತಮಗೆ ಇಂತಹ ಪತ್ನಿ ಬೇಡಪ್ಪ ಎಂದು ಅವಿವಾಹಿತ ಪುರುಷರೆಲ್ಲ ಕೈ ಮುಗಿಯುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ:

ವೈರಲ್‌ ವಿಡಿಯೊದಲ್ಲಿ ಮಹಿಳೆಯೊಬ್ಬಳು ಗಂಡನ ಶಿರಕ್ಕೆ ಪೂಜೆ ಮಾಡುತ್ತಿರುವುದು ಕಂಡು ಬಂದಿದೆ. ಹೌದು, ಅಕ್ಷರಶಃ ಶಿರವೇ ಇದು. ಪತಿಯನ್ನು ಮಣ್ಣಿನಲ್ಲಿ ಹೂಳಿ ಶಿವಲಿಂಗದಂತೆ ಆತನ ಶಿರವನ್ನು ಪೂಜಿಸಿದ್ದಾಳೆ. ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ವಿಡಿಯೊದಲ್ಲಿ ಏನಿದೆ?

ಮಧ್ಯ ವಯಸ್ಕ ವ್ಯಕ್ತಿಯೊಬ್ಬನ ತಲೆ ಮಾತ್ರ ನೆಲದ ಮೇಲೆ ಕಂಡು ಬಂದಿದೆ. ಆತನ ಉಳಿದ ಶರೀರವೆಲ್ಲ ಮಣ್ಣಿನ ಅಡಿಯಲ್ಲಿ ಹೂತು ಹೋಗಿದೆ. ಆತನ ತಲೆಗೆ ಪುಷ್ಪವೃಷ್ಟಿ ಮಾಡುವ ಪತ್ನಿ ಬಳಿಕ ಶಿವಲಿಂಗದಂತೆ ಕ್ಷೀರಾಭಿಷೇಕ ಮಾಡಿದ್ದಾಳೆ. ಬಳಿಕ ಕೈ ಮುಗಿದಿದ್ದಾಳೆ. ಜತೆಗೆ ʼʼಹರ ಹರ ಮಾಹಾದೇವʼʼ ಎಂದು ಘೋಷಣೆ ಕೂಗಿದ್ದಾಳೆ. ಹಾಲು ತಲೆಯಿಂದ ಕೆಳಗೆ ಹರಿಯುವಾಗ ಕಿರಿಕಿರಿಯಾದಂತಾಗಿ ಆ ವ್ಯಕ್ತಿ ಕಣ್ಣು ಮಿಟುಕಿಸಿದ್ದಾನೆ. ಈ ವಿಡಿಯೊ ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದು, ಕಮೆಂಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮಹಾ ಶಿವರಾತ್ರಿ ವೇಳೆ ದುರಂತ: ಸಾಹಸ ಪ್ರದರ್ಶನದ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಾವು

ಇದು ಯಾವ ರೀತಿಯ ಆಚರಣೆ ಎನ್ನುವುದು ತಿಳಿದು ಬಂದಿಲ್ಲ. ಜತೆಗೆ ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನುವುದೂ ಸ್ಪಷ್ಟವಾಗಿಲ್ಲ. ಅದಾಗ್ಯೂ ಕೆಲವೇ ಸೆಕೆಂಡ್‌ ಅವಧಿಯ ಈ ದೃಶ್ಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ʼʼವಿಡಿಯೊ ನೋಡಿ ನಗು ತಡೆಯಲು ಸಾಧ್ಯವಾಗಲಿಲ್ಲ. ಜನರು ಯಾಕೆ ಇಂತಹ ಮೂರ್ಖತನದ ಕೆಲಸ ಮಾಡುತ್ತಾರೆ?ʼʼ ಎಂದು ಪ್ರಶ್ನಿಸಿದ್ದಾರೆ. ʼʼಪತ್ನಿಯಿಂದ ಮುಕ್ತಿ ಕೊಡಪ್ಪ ಎಂದು ಪತಿ ಪ್ರಾರ್ಥಿಸುತ್ತಿರಬಹುದುʼʼ ಎಂಬುದಾಗಿ ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಈ ಕಣ್ಣಲ್ಲಿ ಇನ್ನು ಏನೇನ್‌ ನೋಡ್ಬೇಕು?ʼʼ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಇದುವರೆಗೆ ಇಂತಹ ಆಚರಣೆ ಬಗ್ಗೆ ಕೇಳಿರಲಿಲ್ಲʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ.

ಸಮರ್ಥನೆ

ಇತ್ತ ಕೆಲವರು ಈ ಆಚರಣೆಗೆ ಸಮರ್ಥನೆಯನ್ನೂ ನೀಡಿದ್ದಾರೆ. ಇದು ಬುಡಕಟ್ಟು ಜನಾಂಗದ ವಿಶಿಷ್ಟ ಆಚರಣೆಯಾಗಿರಬಹುದು. ಏನಾದರೊಂದು ಕಾರಣ ಇಟ್ಟುಕೊಂಡೇ ಮಾಡುತ್ತಿರಬಹುದು ಎಂದಿದ್ದಾರೆ. ʼʼನೀವು ಆಚರಣೆಯನ್ನು ವ್ಯಂಗ್ಯವಾಡುತ್ತಿದ್ದೀರಾ? ಪ್ರತಿಯೊಂದು ಜನಾಂಗ ಅದರದ್ದೇ ಆದ ಆಚರಣೆ ಹೊಂದಿರುತ್ತದೆ. ಸರಿಯಾಗಿ ತಿಳಿದುಕೊಂಡು ಮಾತನಾಡಿʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ಚರ್ಚೆ ಹುಟ್ಟುಹಾಕಿದ್ದಂತೂ ಸತ್ಯ. ಪರ-ವಿರೋಧ ಹೇಳಿಕೆಗಳ ಮೂಲಕ ಈ ಪುಟಾಣಿ ದೃಶ್ಯ ಸದ್ದು ಮಾಡುತ್ತಿದೆ.

ವೈರಲ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author