ಭೋಪಾಲ್, ಆ. 31: ಮೃತದೇಹವನ್ನು ಸುಡುವ ಪದ್ದತಿ ಹೆಚ್ಚಿನ ಕಡೆಯಲ್ಲಿದೆ. ಹೀಗೆ ನುಡುವ ಮೃತದೇಹದ ಮಾಂಸವನ್ನು ಮಾನವರು ಸೇವಿಸುತ್ತಾರೆ ಎಂದರೆ ನಂಬುತ್ತೀರಾ? ಹೌದು ಇಂತಹ ಭೀಕರ ದೃಶ್ಯವೊಂದು ವಿಡಿಯೊದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬಳು ಮೃತದೇಹದ ಮಾಂಸವನ್ನು ತಿನ್ನುತ್ತಿರುವ ದೃಶ್ಯವೊಂದು (Viral News) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಉಜ್ಜಯಿನಿನಲ್ಲಿ ನಡೆದಿದ್ದು ಮಹಿಳೆಯನ್ನು ಕಾಳಿ ನಂದ್ ಗಿರಿ ಎಂದು ಗುರುತಿಸಲಾಗಿದೆ. ಆಕೆ ಉರಿಯುತ್ತಿರುವ ಚಿತೆಯ ಹತ್ತಿರ ನಿಂತು ಮೂಳೆ ಮತ್ತು ತಲೆಬುರುಡೆಗಾಗಿ ಅವಶೇಷಗಳ ನಡುವೆ ಹುಡುಕುತ್ತಿರುವುದು ಕೂಡ ವಿಡಿಯೊದಲ್ಲಿ ಕಂಡುಬಂದಿದೆ.
ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಕಾಳಿ ನಂದ್ ಗಿರಿ ಚಿತಾಗಾರವೊಂದಕ್ಕೆ ಪೂಜೆ ಸಲ್ಲಿಸಿ ಮೃತದೇಹದ ಮಾಂಸವನ್ನು ಸೇವಿಸುತ್ತಿದ್ದಾಳೆ. ಆಕೆ ಮೈಗೆಲ್ಲ ಬೂದಿಯನ್ನು ಬಳಿದು ಕೊಂಡಿದ್ದಾಳೆ. ಕಪ್ಪು ಬಟ್ಟೆಯನ್ನು ಧರಿಸಿ ಶವದ ಮುಂದೆಯೇ ನಿಂತಿದ್ದಾಳೆ. ಆಕೆ ಚಿತೆಯಿಂದ ತಲೆಬುರುಡೆ ಹಾಗೂ ಸುಡುತ್ತಿದ್ದ ಮಾಂಸದ ತುಂಡನ್ನು ಹೊರತೆಗೆದು ಸೇವಿಸಿದ್ದಾಳೆ.
ವಿಡಿಯೊ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಆಕೆ ಅಂತ್ಯಕ್ರಿಯೆಗೆ ಸಂಬಂಧಿಸಿದ ಮಂತ್ರವನ್ನು ಪಠಿಸುತ್ತಿರುವುದೂ ಕಂಡು ಬಂದಿದೆ. ವಿಡಿಯೊ ರೆಕಾರ್ಡ್ ಆಗುತ್ತಿರುವುದನ್ನು ನೋಡಿದ ಆಕೆ, ʼʼನಾನು ಸುಟ್ಟ ಮಾಂಸವನ್ನು ತಿನ್ನುತ್ತೇನೆ. ಚಿತೆಯಲ್ಲಿದ್ದ ಬಿಸಿ ಬಿಸಿ ಮಾಂಸ ತುಂಬಾ ರುಚಿಯಾಗಿದೆ. ಬೂದಿ ಹಚ್ಚಿ ತಲೆಬುರುಡೆಯೊಂದಿಗೆ ಆಟ ಆಡುವುದೇ ನಮ್ಮ ಜೀವನʼʼ ಎಂದು ಹೇಳುತ್ತಾ ಶ್ಮಶಾನದಲ್ಲಿ ಮಂತ್ರಗಳನ್ನು ಜಪಿಸಿದ್ದಾಳೆ.
ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ; 20 ಮಂದಿಗೆ ಗಾಯ
ಈ ವಿಡಿಯೊ ಸ್ಥಳೀಯ ನಿವಾಸಿಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಅದಾಗ್ಯೂ, ಈ ವಿಡಿಯೊದ ಸತ್ಯಾಸತ್ಯತೆ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಬಳಕೆದಾರರೊಬ್ಬರು ಇದು ನಿಜವೇ? ನೋಡಲು ಭಯಾನಕವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಸ್ಮಶಾನದಲ್ಲಿ ಶವಗಳು ಅಥವಾ ಮಾನವ ಅವಶೇಷಗಳನ್ನು ವಿಕೃತಗೊಳಿಸುವುದು ಅಪರಾಧ, ಇದು ಗಂಭೀರ ವಿಷಯವಾಗಿದ್ದು, ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಕಿಡಿ ಕಾರಿದ್ದಾರೆ.