ಬೆಂಗಳೂರು,ಫೆ.12: ಜಪಾನ್ ದೇಶದ ಪ್ರಸಿದ್ಧ ಖಾದ್ಯಗಳಲ್ಲಿ 'ಸುಶಿ' (Sushi) ಕೂಡ ಒಂದಾಗಿದೆ. ಸಾಮಾನ್ಯವಾಗಿ ಸುಶಿಯನ್ನು ಚಾಪ್‌ಸ್ಟಿಕ್‌ಗಳನ್ನು ಬಳಸಿ ಸೇವಿಸಲಾಗುತ್ತದೆ. ಆದರೆ ಬೆಂಗಳೂರಿನ ಮಹಿಳೆಯೊಬ್ಬರು ಈ ಆಹಾರವನ್ನು ಅಪ್ಪಟ ದೇಸಿ ಶೈಲಿಯಲ್ಲಿ, ಅಂದರೆ ಅನ್ನ ಕಲಸಿ ತಿನ್ನುವಂತೆ ಸವಿಯುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ವೀಡಿಯೊದಲ್ಲಿ, ಮಹಿಳೆ ತನ್ನ ಕೈಗಳಿಂದ ಸುಶಿಯ ತುಂಡನ್ನು ತೆಗೆದುಕೊಂಡು ಕೊನೆಗೆ ಮನೆಯಲ್ಲಿ ಅನ್ನ-ಸಾರು ಕಲಸಿ ತಿನ್ನುವಂತೆಯೇ ಕೈಯಿಂದಲೇ ಆ ಮುದ್ದೆಯನ್ನು ಸವಿಯುತ್ತಾಳೆ.
ವಿಡಿಯೋ ನೋಡಿ:
ಸಾಂಪ್ರದಾಯಿಕವಾಗಿ, ಸುಶಿಯನ್ನು ಚಾಪ್‌ಸ್ಟಿಕ್‌ಗಳನ್ನು ಬಳಸಿ ಸೇವನೆ ಮಾಡಲಾಗುತ್ತದೆ. ಅದರಲ್ಲೂ ಸೋಯಾ ಸಾಸ್‌ನಲ್ಲಿ ಲಘುವಾಗಿ ಅದ್ದಿ ತಿನ್ನುವುದು ಸಾಮಾನ್ಯ ವಿಧಾನ. ಆದರೆ ಈ ವೈರಲ್ ಕ್ಲಿಪ್ ತುಂಬಾ ವಿಭಿನ್ನವಾದ ವಿಧಾನವನ್ನು ತೋರಿಸುತ್ತದೆ. ವೀಡಿಯೊದಲ್ಲಿ, ಮಹಿಳೆ ತನ್ನ ಕೈಗಳಿಂದ ಸುಶಿಯ ತುಂಡನ್ನು ತೆಗೆದುಕೊಂಡು ಅದನ್ನು ತನ್ನ ತಟ್ಟೆಯಲ್ಲಿ ಇಡುತ್ತಾಳೆ. ಎಲ್ಲವೂ ಸಾಮಾನ್ಯವಾಗಿದೆ ಎಂದು ನಾವು ಭಾವಿಸಿದಾಗ ಆಕೆ ಅದನ್ನು ಬೆರಳುಗಳಿಂದ ನುಣ್ಣಗೆ ಕೈಯಿಂದಲೇ ಪುಡಿಯಾಗಿ ಹಿಸುಕುತ್ತಾಳೆ.
Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ
ಅವಳು ಅದನ್ನು ಸೋಯಾ ಸಾಸ್‌ನಲ್ಲಿಯೂ ಅದ್ದುವುದಿಲ್ಲ. ಬದಲಾಗಿ, ಅವಳು ನೇರವಾಗಿ ಹಿಸುಕಿದ ಸುಶಿಯ ಮೇಲೆ ಸೋಯಾ ಸಾಸ್ ಅನ್ನು ಹಾಕುತ್ತಾಳೆ. ಅಂತಿಮವಾಗಿ, ಅವಳು ಅದನ್ನು ತನ್ನ ಕೈಗಳಿಂದ ಅನ್ನ ಸಾರಿನಂತೆ ಸವಿಯುತ್ತಾಳೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಳಕೆದಾರರೊಬ್ಬರು ಜಪಾನಿಯರು ಇದನ್ನು ನೋಡಿದರೆ ಅವರ ಪ್ರಜ್ಞೆ ತಪ್ಪುವುದು ಗ್ಯಾರಂಟಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಕೇವಲ ಪ್ರಚಾರ ಕ್ಕಾಗಿ ಆಹಾರದ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ವಿಡಿಯೋ ಶೇರ್ ಮಾಡಿದ ಮಹಿಳೆ ಸ್ಪಷ್ಟನೆ ನೀಡಿದ್ದು ಯಾವುದೇ ಸಂಸ್ಕೃತಿಗೆ ದಕ್ಕೆ ಮಾಡುವ ಉದ್ದೇಶ ಅಲ್ಲ ನನಗೆ ಸುಶಿ ಎಂದರೆ ಇಷ್ಟ ಎಂದು ಬರೆದುಕೊಂಡಿದ್ದಾರೆ. ಆದರೂ, ಆಹಾರ ಪ್ರಿಯರು ಮಾತ್ರ ಮಹಿಳೆಯ ವಿರುದ್ಧ ಕಿಡಿಕಾರಿದ್ದಾರೆ.