ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗುವಿನ ಕೈಗೆ ಕಸ ಕೊಟ್ಟು ರೈಲಿನಲ್ಲಿ ಎಸೆಯುವಂತೆ ಹೇಳಿದ ತಾಯಿ; ವಿಡಿಯೋ ವೈರಲ್‌

Viral News: ಇತ್ತೀಚೆಗೆ ಸಾರ್ವಜನಿಕ ವಸ್ತುಗಳನ್ನು ಜನ ತಮ್ಮ ಆಸ್ತಿಯಂತೆ ಬಳಕೆ ಮಾಡುತ್ತಿದ್ದಾರೆ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಈ ದೃಶ್ಯ ನೋಡಿದ ಅನೇಕರು ಮಹಿಳೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ವೈರಲ್ ವಿಡಿಯೊದಲ್ಲಿ ಮಹಿಳೆಯೊಬ್ಬರು ತನ್ನ ಚಿಕ್ಕ ಮಗನಿಗೆ ರೈಲಿನ ಕಿಟಕಿಯಿಂದ ರೈಲ್ವೆ ಟ್ರ್ಯಾಕ್‌ಗೆ ಕಸ ಎಸೆಯಲು ಹೇಳುತ್ತಿದ್ದಾಳೆ.

ರೈಲಿನಲ್ಲಿ ಮಗುವಿಗೆ ಕಸ ಎಸೆಯಲು ಕೊಟ್ಟ ಮಹಿಳೆ

ಮುಂಬೈ,ಜು.15: ಇತ್ತೀಚೆಗೆ "ನಾಗರಿಕ ಪ್ರಜ್ಞೆ" ಅನ್ನೋದು ಬಹು ಚರ್ಚೆಯಲ್ಲಿ ಇರುವ ವಿಚಾರ ಆಗಿದೆ. ಜನರಿಗೆ ಈ ಬಗ್ಗೆ ಎಷ್ಟೇ ಅರಿವು ಮೂಡಿಸಿದರು ಸಾರ್ವಜನಿಕ ಸ್ಥಳದಲ್ಲಿ ತಮ್ಮದೇ ರಾಜ್ಯ ಭಾರ ಎಂಬಂತೆ ವರ್ತನೆ ತೋರುತ್ತಿದ್ದಾರೆ‌. ಪ್ರವಾಸಿ ಸ್ಥಳದಲ್ಲಿ ವಸ್ತುಗಳನ್ನು ಮುಟ್ಟಿ ಹಾನಿ ಮಾಡು ವುದು, ಪ್ರಯಾಣದ ಸಂದರ್ಭದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲಲ್ಲಿ ಎಸೆಯುವುದು, ಶಿಸ್ತು ಕಾಪಾಡದೇ ಇರುವುದು ಹೀಗೆ ನಾನಾ ದೂರುಗಳು ಕೇಳಿ ಬರುತ್ತಲೇ ಇವೆ. ಇದೀಗ ಮುಂಬೈ ಲೋಕಲ್ ಟ್ರೈನ್ ನಲ್ಲಿ ಪ್ರಯಾಣ ಮಾಡುತ್ತಿರುವ ಮಹಿಳೆಯೊಬ್ಬರು ಕಿಟಕಿಯಿಂದ ಕಸ ಎಸೆಯುವಂತೆ ಮಗುವನ್ನು ಪ್ರೇರಿಪಿಸುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ.‌

ಇತ್ತೀಚೆಗೆ ಸಾರ್ವಜನಿಕ ವಸ್ತುಗಳನ್ನು ಜನ ತಮ್ಮ ಆಸ್ತಿಯಂತೆ ಬಳಕೆ ಮಾಡುತ್ತಿದ್ದಾರೆ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಈ ದೃಶ್ಯ ನೋಡಿದ ಅನೇಕರು ಮಹಿಳೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ವೈರಲ್ ವಿಡಿಯೊದಲ್ಲಿ ಮಹಿಳೆಯೊಬ್ಬರು ತನ್ನ ಚಿಕ್ಕ ಮಗನಿಗೆ ರೈಲಿನ ಕಿಟಕಿಯಿಂದ ರೈಲ್ವೆ ಟ್ರ್ಯಾಕ್‌ಗೆ ಕಸ ಎಸೆಯಲು ಹೇಳುತ್ತಿದ್ದಾಳೆ.

ವಿಶ್ವ ಅಥ್ಲೆಟಿಕ್ಸ್ ತರಬೇತುದಾರ ಅಮಿತ್ ಕುಮಾರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಸ್ಟ್ ಶೇರ್ ಮಾಡಿದ್ದಾರೆ‌‌. ರೈಲಿನ ಸಾಲಿನ ಮಧ್ಯದ ಸೀಟಿನಲ್ಲಿ ಒಬ್ಬ ಮಹಿಳೆ ತನ್ನ ಚಿಕ್ಕ ಮಗನೊಂದಿಗೆ ಕಿಟಕಿಯ ಬಳಿ ಕುಳಿತಿರುವುದನ್ನು ತೋರಿಸಲಾಗಿದೆ. ಮಹಿಳೆ ಹಾಗೂ ಮಗ ಪ್ಲಾಸ್ಟಿಕ್ ಕವರ್ ನಿಂದ ತಿಂಡಿ ತಿಂದು ನಂತರ ಖಾಲಿಯಾದ ಪ್ಯಾಕೆಟ್ ಅನ್ನು ಪುಟ್ಟ ಬಾಲಕನ ಕೈಗೆ ನೀಡಿ ಎಸೆಯಲು ಸನ್ನೆ ಮಾಡುತ್ತಾಳೆ.

Viral Video: ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ; ಬಾಡಿಗೆ ಹಣ ಪಡೆಯದೆ ಹೃದಯವಂತಿಕೆ ತೋರಿಸಿದ ಆಟೋ ಚಾಲಕ

ಮಗು, ಅವಳ ಮಾತನ್ನು ಅನುಸರಿಸಿ, ಕಿಟಕಿಯ ಹೊರಗೆ ಪ್ಲಾಸ್ಟಿಕ್ ಪ್ಯಾಕೆಟ್ ಅನ್ನು ಎಸೆಯುತ್ತದೆ‌.ಆದರೆ ಅದು ಅಲ್ಲಿಗೆ ಮುಗಿಯಲಿಲ್ಲ.ಅವನಿಗೆ ಮತ್ತೊಂದು ಖಾಲಿ ಪ್ಯಾಕೆಟ್ ಅನ್ನು ನೀಡಿ ಅದನ್ನು ಹಳಿಗಳ ಮೇಲೆ ಎಸೆಯಲು ಪ್ರೋತ್ಸಾಹಿಸಿದಳು. ಇದನ್ನು ನೋಡಿದ ಪ್ರಯಾಣಿಕರೊಬ್ಬರು ವಿಡಿಯೊ ರೆಕಾರ್ಡ್ ಮಾಡಿದ್ದು ನಿಮ್ಮ ಮಗುವಿಗೆ ಇದನ್ನು ಹೇಳಿಕೊಡಬೇಡಿ ಎಂದು ಸಲಹೆ ನೀಡಿದ್ದಾರೆ. ಅದಕ್ಕೆ ಆ ಮಹಿಳೆ ಒಪ್ಪಿಕೊಳ್ಳುವ ಬದಲು,ರೈಲು ಏನಾದ್ರೂ ನಿಮ್ಮ ಸ್ವಂತ ವಾಹನವೇ?ಎಂದು ಉದ್ಧಟತನದಿಂದ ಪ್ರಶ್ನಿಸಿದ್ದಾರೆ.

ಅನೇಕರು ಮಹಿಳೆಯ ನಾಗರಿಕ ಪ್ರಜ್ಞೆಯನ್ನು ಟೀಕಿಸಿದ್ದು ಮಹಿಳೆಯ ಈ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ರೈಲಿನ ಆವರಣದಲ್ಲಿ ಕಸ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯಗಳಿಗೆ ಸರಿಯಾದ ದಂಡ ವಿಧಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಬ್ಬರು ಇಂತಹವರಿಗೆ ಇನ್ಮುಂದೆ ಪ್ರಯಾಣಿಸಲು ಅವಕಾಶವೇ ನೀಡಬಾರದು ಎಂದರು.