ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭುಗಿಲೆದ್ದ ಆಕ್ರೋಶ; ಪುಣೆ ಬಾಲಕನನ್ನು ಹತೈಗೈದ ಅಪ್ರಾಪ್ತನಿಗೆ ಸಾರ್ವಜನಿಕವಾಗಿ ಚಪ್ಪಲಿ ಏಟು ನೀಡಿದ ಮಹಿಳೆ: ವಿಡಿಯೊ ಇಲ್ಲಿದೆ

Viral Video: ಮಹಾರಾಷ್ಟ್ರದ ಪುಣೆಯ ಕಾತ್ರಾಜ್‌ನಲ್ಲಿ ಇತ್ತೀಚೆಗೆ ಅಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, 17 ವರ್ಷದ ಬಾಲಕನ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ 17 ವರ್ಷದ ಗಣೇಶ್ ರವೀಂದ್ರ ಮಾಲ್ವೆ ಮೃತಪಟ್ಟಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ವಾಹನದ ಬಾನೆಟ್‌ಗೆ ಕಟ್ಟಿ ಮೆರವಣಿಗೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವೇಳೆ ಮಹಿಳೆಯೊಬ್ಬರು ಅಪ್ರಾಪ್ತರ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲೆ ಮಾಡಿದ ಅಪ್ರಾಪ್ತನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ಮುಂಬೈ, ಜು. 22: ಮಹಾರಾಷ್ಟ್ರದ ಪುಣೆಯ ಕಾತ್ರಾಜ್‌ನಲ್ಲಿ ಇತ್ತೀಚೆಗೆ ಅಘಾತಕಾರಿ ಘಟನೆಯೊಂದು ನಡೆದಿದ್ದು, 17 ವರ್ಷದ ಬಾಲಕನನ್ನು ಅಪ್ರಾಪ್ತ ಬಾಲಕರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದು, ಗಣೇಶ್ ರವೀಂದ್ರ ಮಾಲ್ವೆ ಸಾವನ್ನಪ್ಪಿದ್ದಾನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸ್ ವಾಹನದ ಬಾನೆಟ್‌ಗೆ ಕಟ್ಟಿ ಮೆರವಣಿಗೆ ಮಾಡುತ್ತಿರುವ ದೃಶ್ಯ ವೈರಲ್ (Viral News) ಆಗಿದೆ. ಈ ಮೆರವಣಿಗೆ ವೇಳೆ ಆಕ್ರೋಶಗೊಂಡ ಮೃತ ಬಾಲಕನ ಸಂಬಂಧಿಯೊಬ್ಬರು ಚಪ್ಪಲಿಯಿಂದ ಅಪರಾಧಿಗಳಿಗೆ ಚಪ್ಪಲಿಯಿಂದ ಹೊಡೆಸಿದ್ದಾರೆ.

ಮೃತ ಗಣೇಶ್ ಮೊಬೈಲ್ ರಿಪೇರಿ ಅಂಗಡಿಯಿಂದ ಫೋನ್ ತರಲು ತೆರಳಿದಾಗ ಈ ಮಾರಕ ದಾಳಿ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮೃತ ಮಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಕತ್ರಾಜ್ ಸರೋವರದ ಬಳಿ ಈ ಘಟನೆ ನಡೆದಿದ್ದು, ಏಳು ಮಂದಿ ಅಪ್ರಾಪ್ತರ ಗುಂಪೊಂದು ಹಳೆ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧಗಳಿಂದ ಬಾಲಕನ ಮೇಲೆ ಹಲ್ಲೆ ನಡೆಸಿತ್ತು.

ವಿಡಿಯೊ ನೋಡಿ:



ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಅಪರಾಧಿಗಳನ್ನು ಭಾರತಿ ವಿದ್ಯಾಪೀಠ ಪೊಲೀಸರು ಪತ್ತೆ ಹಚ್ಚಿದ್ದರು. ಬಂಧಿತ ಅಪರಾಧಿಗಳ ಪೈಕಿ ಮೂವರು ಅಪ್ರಾಪ್ತರನ್ನು ಪೊಲೀಸ್ ವಾಹನದ ಮುಂಭಾಗಕ್ಕೆ ಕಟ್ಟಿ ಮೆರವಣಿಗೆ ಮಾಡಲಾಯಿತು. ಸ್ಥಳದಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಈ ವೇಳೆ ಮೃತ ಬಾಲಕನ ಸಂಬಂಧಿಯೊಬ್ಬರು ದುಃಖ ಕಟ್ಟೆಯೊಡೆದಿದ್ದು, ಅಪರಾಧಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಹಿಂದೂ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ಕಲ್ಮಾ ಕಲಿಯಲು ಹೋಮ್‌ವರ್ಕ್ ಕೊಟ್ಟ ಶಿಕ್ಷಕಿ

ವೈರಲ್ ಆದ ವಿಡಿಯೊದಲ್ಲಿ ವಿಪರೀತ ಮಳೆಯಾಗುತ್ತಿದ್ದರೂ, ಪೊಲೀಸರು ಅಪ್ರಾಪ್ತ ಅಪರಾಧಿಗಳನ್ನು ಪೊಲೀಸ್ ಜೀಪಿನ ಬಾನೆಟ್‌ಗೆ ಕಟ್ಟಿ ಸಾರ್ವಜನಿಕವಾಗಿ ಪರೇಡ್ ಮಾಡುತ್ತಿರುವುದನ್ನು ಕಾಣಬಹುದು. ಇನ್ನೊಂದು ವಿಡಿಯೊದಲ್ಲಿ ಮೃತರ ಸಂಬಂಧಿ ಎಂದು ಹೇಳಲಾದ ಮಹಿಳೆಯೊಬ್ಬರು ಆರೋಪಿಯ ಬಳಿಗೆ ಬಂದು ಪೊಲೀಸ್ ಸಿಬ್ಬಂದಿ ಹತ್ತಿರದಲ್ಲಿ ನಿಂತಿದ್ದರೂ ಚಪ್ಪಲಿಯಿಂದ ಸರಿಯಾಗಿ ಬಾರಿಸಿದ್ದಾರೆ.

ಸದ್ಯ ಈ ವಿಡಿಯೊ ​ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅಪರಾಧಿಗಳನ್ನು ಮೆರವಣಿಗೆ ಮಾಡಿದ ಕಾರಣಗಳನ್ನು ಪೊಲೀಸರು ಇನ್ನೂ ತಿಳಿಸಿಲ್ಲ. ಪೊಲೀಸರು ಕೊಲೆ ಅಪರಾಧಿಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ನೆಟ್ಟಿಗರು ತಿಳಿಸಿದ್ದಾರೆ.