ಅಮೃತಸರ್: ಅಮ್ಮ ಹಾಗೆ ಮಾಡಬೇಡ ಎಂದು ಪಂಜಾಬಿ (Punjabi) ಭಾಷೆಯಲ್ಲಿ ಬಾಲಕನೊಬ್ಬ ಮನವಿ ಮಾಡಿದರೂ ಕೇಳದ ಆತನ ತಾಯಿಯು ಅತ್ತೆಗೆ ಮನಬಂದಂತೆ ಥಳಿಸಿದ್ದಾನೆ. ಮಹಿಳೆಯೊಬ್ಬಳು ಆಕೆಯ ಅತ್ತೆಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ (thrashing) ಮಾಡಿದ್ದಾಳೆ. ತನ್ನ ಅತ್ತೆಯ ಕೂದಲನ್ನು ಎಳೆದು, ಕಪಾಳಮೋಕ್ಷ ಮಾಡಿ, ಹೊಡೆದು ನಿಂದಿಸಿದ್ದಾಳೆ. ಮೊಮ್ಮಗ ತನ್ನ ಅಜ್ಜಿಗೆ ಹೊಡೆಯದಂತೆ ಎಷ್ಟೇ ಒತ್ತಾಯಿಸಿದ್ರೂ ಕೇಳದ ಆಕೆ, ಹಲ್ಲೆ ಮಾಡುವುದನ್ನು ಮುಂದುವರೆಸಿದ್ದಾಳೆ.
ಪಂಜಾಬ್‌ನ ಗುರುದಾಸ್ಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಅಜ್ಜಿಗೆ ತಾಯಿಯು ಹೊಡೆಯುವುದನ್ನು ನೋಡಿ ಬೇಸರಗೊಂಡ ಬಾಲಕ ಈ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾನೆ. ಬಾಲಕನ ತಾಯಿ ಹರ್ಜೀತ್ ಕೌರ್ ತನ್ನ ಅತ್ತೆ ಗುರ್ಬಜನ್ ಕೌರ್ ಅವರ ಕೂದಲನ್ನು ಹಿಡಿದು ಎಳೆದಾಡಿದ್ದಾಳೆ. ಆಕೆಯ ಮಗ ಅಜ್ಜಿಯನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡರೂ ಕರಗದ ಆಕೆ, ಮತ್ತಷ್ಟು ಹೊಡೆದಿದಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಅಷ್ಟೇ ಅಲ್ಲ, ಹರ್ಜೀತ್ ಕೌರ್ ತನ್ನ ಅತ್ತೆಯನ್ನು ಸೋಫಾಗೆ ತಳ್ಳಿ ಹಲ್ಲೆ ಮಾಡಿದ್ದಾಳೆ.
ಹಿಗ್ಗಾಮುಗ್ಗಾ ಹಲ್ಲೆ ಮಾಡಿದರೂ ಸಮಾಧಾನವಾಗದ ಹರ್ಜೀತ್ ಕೌರ್, ಮತ್ತೊಮ್ಮೆ ತನ್ನ ಅತ್ತೆಯನ್ನು ತಳ್ಳಿದ್ದಾಳೆ. ಗುರ್ಬಜನ್ ಕೌರ್ ತನ್ನ ಕಾಲನ್ನು ಬಳಸಿ ತನ್ನ ಸೊಸೆಯನ್ನು ದೂರ ತಳ್ಳಲು ಪ್ರಯತ್ನಿಸಿದ್ದಾಳೆ. ಅವಳು ಸೊಸೆಯ ಕಾಲು ಹಿಡಿದು ವೃದ್ಧ ಮಹಿಳೆಯ ಮೇಲೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ನಿರಂತರ ಹಲ್ಲೆಯಿಂದ ಬೇಸತ್ತ ಗುರ್ಬಜನ್ ಕೌರ್ ಜೋರಾಗಿ ಅತ್ತಿದ್ದಾಳೆ. ಆಕೆಗೆ ಅಳುವುದು ಬಿಟ್ಟು ಬೇರೆ ದಾರಿಯಿರಲಿಲ್ಲ.
ಈ ಘಟನೆ ಭಾನುವಾರ ನಡೆದಿದ್ದು, ಹರ್ಜೀತ್ ಕೌರ್ ತನ್ನ ಅತ್ತೆ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಆಕೆಯ ಮಗ ರೆಕಾರ್ಡ್ ಮಾಡಿದ್ದಾನೆ. ಹರ್ಜೀತ್ ತನ್ನೆಲ್ಲಾ ಆಸ್ತಿಯನ್ನು ಆಕೆಗೆ ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದಳೆಂದು ವಿಧವೆ ಗುರ್ಬಜನ್ ಕೌರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಆಕೆಯ ಮೊಮ್ಮಗ ಚರತ್‌ವೀರ್ ಸಿಂಗ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ತನ್ನ ತಾಯಿ ಕುಡಿದು ಅಜ್ಜಿಯ ಮೇಲೆ ಪದೇಪದೇ ಹೊಡೆಯುತ್ತಿದ್ದರು ಮತ್ತು ನಿಂದಿಸುತ್ತಿದ್ದರು ಎಂದು ಹೇಳಿದ್ದಾನೆ. ಅಜ್ಜಿಯನ್ನು ಮಾತ್ರವಲ್ಲ ತನ್ನನ್ನು ಮತ್ತು ತನ್ನ ತಂದೆಯನ್ನು ಸಹ ತಾಯಿ ಹರ್ಜೀತ್ ಹೊಡೆದಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.
ಇದನ್ನೂ ಓದಿ: Viral News: ಇದಪ್ಪ ಮಾನವೀಯತೆ ಅಂದ್ರೆ; ಗಾಯಗೊಂಡ ಮಹಿಳೆಯನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಕಾನ್ಸ್‌ಟೇಬಲ್