ನವದೆಹಲಿ,ಡಿ.12: ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಹುತೇಕ ಜನರು ಮೊಬೈಲ್ ಚಟಕ್ಕೆ ಬಿದ್ದಿದ್ದಾರೆ. ಊಟದಿಂದ ಹಿಡಿದು ನಿದ್ದೆ ಮಾಡುವವರೆಗೂ ಮೊಬೈಲ್ ಬಳಕೆ ಮಿತಿ ಮೀರಿದ್ದು ಹಲವಾರು ಇದರಲ್ಲೇ ಮುಳುಗಿ ಹೋಗುವವರು ಇದ್ದಾರೆ. ಅಂತೆಯೇ ಮಹಿಳೆ ಯೊಬ್ಬಳು ತನ್ನ ಫೋನ್ನಲ್ಲೆ ಮಾತನಾಡುತ್ತಾ ತನ್ನದೇ ಪುಟ್ಟ ಮಗುವನ್ನು ಅತ್ಯಂತ ಕ್ರೂರವಾಗಿ ಕಾಲಿನಿಂದ ಒದೆಯುವ ದೃಶ್ಯ ವೈರಲ್ (Viral Video) ಆಗಿದೆ. ಹಲವು ಜನ ಈ ಘಟನೆ ಕಂಡು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಾಯಿ ತನ್ನ ಚಿಕ್ಕ ಮಗುವಿನ ಮೇಲೆ ನಡೆಸಿದ ಅಮಾನವೀಯ ಕೃತ್ಯಗಳನ್ನು ಹಲವರು ಖಂಡಿಸಿದ್ದಾರೆ.
ಜನವರಿ 11, 2026 ರಂದು ಶೇರ್ ಮಾಡಲಾದ ಈ ಘಟನೆ ದೆಹಲಿಯಲ್ಲಿ ನಡೆದಿದೆ ಎನ್ನಲಾಗಿದೆ. ಒಬ್ಬ ಮಹಿಳೆ ಮೆಟ್ಟಿಲುಗಳ ಮೇಲೆ ನಿಂತಿರುವಾಗ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ತನ್ನ ಕಾಲಿನ ಹತ್ತಿರವೇ ಇದ್ದ ಪುಟ್ಟ ಮಗುವನ್ನು ಆಕೆ ಕಾಲಿನಿಂದ ಸರಿಯಾಗಿ ಒದೆಯುತ್ತಾಳೆ. ಮಗು ನೆಲಕ್ಕೆ ಬಿದ್ದು ನೋವಿನಿಂದ ಕಿರುಚಾಡುತ್ತಿದ್ದರೂ ಆಕೆ ಕಿಂಚಿತ್ತೂ ಕರುಣೆ ತೋರದೆ ಮೊಬೈಲ್ ನಲ್ಲೇ ಮಗ್ನವಾಗಿದ್ದಾಳೆ.
ಇದ್ದಕ್ಕಿದ್ದಂತೆ ಚಿಕ್ಕ ಮಗುವನ್ನು ಒದೆಯಲು ಪ್ರಾರಂಭಿಸುತ್ತಾಳೆ. ಚಿಕ್ಕ ಮಗು ನೋವಿನಿಂದ ಅಳಲು ಪ್ರಾರಂಭಿಸುತ್ತದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನು ವೀಕ್ಷಿಸಿದ ನೆಟ್ಟಿಗರು ಮಹಿಳೆಯ ವರ್ತನೆಗೆ ಕಿಡಿಕಾರಿದ್ದಾರೆ.
Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ
ನೆಟ್ಟಿಗರೊಬ್ಬರು ಇವಳನ್ನು ತಾಯಿ ಎಂದು ಕರೆಯಲು ಅರ್ಹತೆ ಇಲ್ಲ. ಅವಳು ಕೇವಲ ದುರಹಂಕಾರಿ, ತನ್ನ ಮಕ್ಕಳನ್ನು ಚೆನ್ನಾಗಿ ನಡೆಸಿಕೊಳ್ಳದ ಈಕೆ ಹೇಗೆ ತಾಯಿಯಾಗುತ್ತಾಳೆ ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನೊಬ್ಬ ವೀಕ್ಷಕರು ಇವಳು ಖಂಡಿತಾ ತಾಯಿಯಲ್ಲ. ಸಾಕು ತಾಯಿಯೂ ಆಗಿರ ಬಹುದು ಎಂದು ಬರೆದುಕೊಂಡಿದ್ದಾರೆ. ಈ ಘಟನೆ ದೆಹಲಿಯಲ್ಲಿ ನಡೆದಿದ್ದು ಪೊಲೀಸರು ತಕ್ಷಣವೇ ಈ ಮಹಿಳೆಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ