ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯಮುನೆಯ ಕಲುಷಿತ ನೀರಿನಲ್ಲಿ‌ ಚಿಕ್ಕ ಮಕ್ಕಳಿಗೆ ಸ್ನಾನ: ಎಚ್ಚರಿಕೆ ಕೊಟ್ರೂ ಬುದ್ಧಿ ಕಲಿಯದ ʼಮಹಾತಾಯಿʼ

Viral Video: ಇಬ್ಬರು ಮಕ್ಕಳಿಗೆ ತಾಯಿಯೊಬ್ಬಳು ಕಲುಷಿತ ನದಿಯಲ್ಲಿ ಸ್ನಾನ ಮಾಡಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ದೆಹಲಿಯ ಕಾಳಿಂದಿ ಕುಂಜ್ ಘಾಟ್‌ನಲ್ಲಿ ಈ ದೃಶ್ಯ ನಡೆದಿದ್ದು ನೀರು ತೀವ್ರವಾಗಿ ಕಲುಷಿತಗೊಂಡು, ವಿಷಯುಕ್ತ ನೊರೆ ಆವರಿಸಿಕೊಂಡಿದ್ದರೂ ಮಹಿಳೆ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವುದು ಕಂಡು ಬಂದಿದೆ.

ವಿಷಕಾರಿ ಯಮುನಾ ನದಿಯಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿದ ಮಹಿಳೆ

ನವದೆಹಲಿ, ಫೆ. 6: ಜನರ ಭಕ್ತಿ ಮತ್ತು ಅಂಧಾಭಿಮಾನ ಕೆಲವೊಮ್ಮೆ ಎಂತಹ ಅನಾಹುತಗಳಿಗೆ ಕಾರಣವಾಗಬಹುದು ಅನ್ನುವುದಕ್ಕೆ ಈ ಘಟನೆ ಸಾಕ್ಷಿ. ಇಬ್ಬರು ಮಕ್ಕಳಿಗೆ ತಾಯಿಯೊಬ್ಬಳು ಕಲುಷಿತ ನದಿಯಲ್ಲಿ ಸ್ನಾನ ಮಾಡಿಸುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ದೆಹಲಿಯ ಕಾಳಿಂದಿ ಕುಂಜ್ ಘಾಟ್‌ನಲ್ಲಿ ಈ ದೃಶ್ಯ ನಡೆದಿದ್ದು, ನೀರು ತೀವ್ರವಾಗಿ ಕಲುಷಿತ ಗೊಂಡು, ವಿಷಕಾರಿ ನೊರೆ ಆವರಿಸಿಕೊಂಡಿದ್ದರೂ ಯಮುನಾ ನದಿಯಲ್ಲಿ ಮಹಿಳೆ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವುದು ಕಂಡು ಬಂದಿದೆ.

ವಿಡಿಯೊದಲ್ಲಿ ಸೆರೆಹಿಡಿಯಲಾದ ಈ ದೃಶ್ಯವು ಆರೋಗ್ಯ, ಪೋಷಕರ ಜಾಗೃತಿ ಮತ್ತು ನದಿಯ ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಈ ಘಟನೆಯನ್ನು ಫೆಬ್ರವರಿ 1ರ ಮಾಘ ಪೂರ್ಣಿಮೆಯ ದಿನದಂದು ಶೇರ್ ಮಾಡಲಾಗಿದೆ. ಅಂದು ಭಕ್ತರು ಸಾಂಪ್ರದಾಯಿಕವಾಗಿ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಆದರೆ ನೀರು ಸರಿಯಿಲ್ಲ ಎಂದು ಬುದ್ಧಿ ಮಾತು ಹೇಳಿದರೂ ಮಹಿಳೆ ಅದನ್ನು ಕಿವಿಗೇ ಹಾಕಿಕೊಂಡಿಲ್ಲ.

ವಿಡಿಯೊ ನೋಡಿ:



ವೈರಲ್ ವಿಡಿಯೊದಲ್ಲಿ ಇಬ್ಬರು ಮಕ್ಕಳು ಕಲುಷಿತ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಮತ್ತು ಆಟವಾಡುತ್ತಿರುವುದು ಕಂಡುಬಂದಿದೆ. ಅವರ ಮುಖ ಮತ್ತು ದೇಹಕ್ಕೆ ವಿಷಕಾರಿ ನೊರೆ ಅಂಟಿ ಕೊಂಡಿದೆ. ಆ ನೊರೆ ಎಷ್ಟು ವಿಷಕಾರಿ ಎಂದರೆ ಅದು ಕೈಗಾರಿಕಾ ರಾಸಾಯನಿಕದಿಂದ ಕೂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ವಿಡಿಯೊವನ್ನು ರೆಕಾರ್ಡ್ ಮಾಡುವ ವ್ಯಕ್ತಿ ಪದೇ ಪದೆ ಅಪಾಯದ ಬಗ್ಗೆ ಎಚ್ಚರಿಸಲು ಪ್ರಯತ್ನಿಸುತ್ತಾನೆ. ʼʼಕೊಳಚೆ ನೀರು ಇದರಲ್ಲಿ ಹರಿಯುತ್ತದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ, ಸಹೋದರಿ. ಇದು ನಿಮಗೆ ತುಂಬಾ ಹಾನಿಕಾರಕ. ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ, ಆಸ್ಪತ್ರೆಗೆ ನೀವು ಅಲೆಯ ಬೇಕಾಗುತ್ತದೆʼʼ ಎಂದು ಆ ವ್ಯಕ್ತಿ ಹೇಳಿದ್ದಾರೆ.

ಎಚ್ಚರಿಕೆಗಳ ಹೊರತಾಗಿಯೂ, ತಾಯಿ ಇದನ್ನು ಮುಂದುವರಿಸಿದ್ದಾಳೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರೊಬ್ಬರು ʼʼಯಮುನಾ ನದಿ ವಿಷಕಾರಿ ನೊರೆಯಿಂದ ತುಂಬಿರುವಾಗ ಅದರಲ್ಲಿ ಸ್ನಾನ ಮಾಡುವುದು ಏಕೆ?ʼʼ ಎಂದು ಕೇಳಿದ್ದಾರೆ. ಮತ್ತೊಬ್ಬರು "ಅನಕ್ಷರಸ್ಥ ಜನರು ತಮಗಾಗಿ ಮಾತ್ರವಲ್ಲದೆ ಸಮಾಜಕ್ಕೂ ಅಪಾಯಕಾರಿ" ಎಂದು ಕಮೆಂಟ್ ಮಾಡಿದ್ದಾರೆ.