ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼನೆಮ್ಮದಿಯೇ ಮುಖ್ಯʼʼ: 9 ವರ್ಷ ಐಟಿ ಮ್ಯಾನೇಜರ್ ಆಗಿದ್ದ ಮಹಿಳೆ ಈಗ ಆಟೋ ಚಾಲಕಿ

Viral Video: ಒಂಬತ್ತು ವರ್ಷಗಳವರೆಗೆ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇದೀಗ ಆಟೋ ಚಾಲಕಿಯಾಗಿ ಹೊಸ ವೃತ್ತಿ ಆರಂಭಿಸಿದ್ದಾರೆ. ಐಟಿ ಕೆಲಸದಲ್ಲಿನ ಅತಿಯಾದ ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಿಂದ ನೊಂದು ಪ್ರತಿಷ್ಠಿತ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಕಾರ್ಪೋರೇಟ್ ಕೆಲಸ ತ್ಯಜಿಸಿ ಆಟೋ ಓಡಿಸುತ್ತಿರುವ ಮಹಿಳೆ

ನವದೆಹಲಿ, ಮೇ 31: ಪ್ರತಿಯೊಬ್ಬರಿಗೂ ಉದ್ಯೋಗ ಅನಿವಾರ್ಯ ಎನಿಸಿಕೊಂಡಿದೆ. ಆದರೆ ಶ್ರಮ ಪಡುವ ಮನಸ್ಸಿದ್ದರೂ ಕೆಲವರಿಗೆ ಸರಿಯಾದ ಉದ್ಯೋಗ ಸಿಗುವುದಿಲ್ಲ. ಹೀಗಾದಾಗ ನಮಗೆ ಬೇಕಾದ ಉದ್ಯೋಗವನ್ನು ನಾವೇ ಕಂಡುಕೊಳ್ಳಬೇಕಾಗುತ್ತದೆ. ಒಂಬತ್ತು ವರ್ಷಗಳವರೆಗೆ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಈಗ ಆಟೋ ಚಾಲಕಿಯಾಗಿದ್ದಾರೆ. ಕೆಲಸದಲ್ಲಿ ಅತಿಯಾದ ಒತ್ತಡ ಹಾಗೂ ಮಾನಸಿಕ ಕಿರಿಕಿರಿಗೆ ಒಳಗಾಗಿ ಪ್ರತಿಷ್ಠಿತ ಕಂಪನಿಯ ಐಟಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. ಇದೀಗ ಮಹಿಳೆಯ ಈ ಸಾಹಸಗಾಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ. ಈ ಕಥೆಯನ್ನು ಉದ್ಯಮಿ ನೆಜ್ರಿನ್ ಮಿಡ್ಲಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಆಟೋದಲ್ಲಿ ಸವಾರಿ ಮಾಡುವಾಗ ಮಹಿಳೆಯ ಈ ಕಥೆ ಕೇಳಿ ಅಚ್ಚರಿಗೆ ಒಳಗಾಗಿದ್ದಾರೆ. ಆಟೋ ಓಡಿಸಿ ಮಹಿಳೆ ತಿಂಗಳಿಗೆ ಸುಮಾರು 60,000 ರುಪಾಯಿ ಸಂಪಾದಿಸುತ್ತಾರೆ.

ಜತೆಗೆ ಈಗ ಜೀವನದಲ್ಲಿ ನೆಮ್ಮದಿಯೂ ಇದ್ದು ಸಂತಸದಿಂದ ದಿನ ಕಳೆಯುವುದಾಗಿ ತಿಳಿಸಿದ್ದಾರೆ. ಅತ್ಯಂತ ಶಿಸ್ತಿನಿಂದ ಚಾಲಕರ ಉಡುಪು ಧರಿಸಿ ಧರಿಸಿ ಆಟೋ ಓಡಿಸುತ್ತಿದ್ದ ಮಹಿಳೆಯನ್ನು ಕಂಡು ನೆಜ್ರಿನ್ ಮಾತನಾಡಿಸಿದಾಗ ಈ ರೋಚಕ ಕಥೆ ಹೊರ ಬಿದ್ದಿದೆ. ​ 9 ವರ್ಷ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾಗಿ ಚಾಲಕಿ ತಿಳಿಸಿದ್ದಾರೆ. ಕೆಲಸದಲ್ಲಿದ್ದ ನಿರಂತರ ಒತ್ತಡ, ಟೆನ್ಷನ್ ಮತ್ತು ಮಾನಸಿಕ ಕಿರಿಕಿರಿಯಿಂದ ಅವರು ಸುಸ್ತಾಗಿದ್ದರು. ಹೀಗಾಗಿ ಕಾರ್ಪೋರೇಟ್ ಜಗತ್ತಿನಲ್ಲಿ ಮುಂದುವರಿಯುವ ಬದಲು, ಮಹಿಳೆ ಸಂಪೂರ್ಣವಾಗಿ ಈ ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿದ್ದು, ತನ್ನದೇ ಆದ ಆಟೋ-ರಿಕ್ಷಾವನ್ನು ಓಡಿಸಲು ಪ್ರಾರಂಭಿಸಿದರು.

ವಿಡಿಯೊ ನೋಡಿ:



ಮಿಧ್ಲಾಜ್ ಪ್ರಕಾರ, ಚಾಲಕ ಈಗ ಪ್ರತಿ ತಿಂಗಳು ಸುಮಾರು 60,000 ರೂ. ಗಳಿಸುತ್ತಾರೆ. ಹೆಚ್ಚು ಮುಖ್ಯವಾಗಿ, ಅವರು ತಮ್ಮ ಜೀವನದಲ್ಲಿ ತೃಪ್ತಿ ಹೊಂದಿದ್ದಾರೆ. "ಈಗ, ಅವರು ಸ್ವಂತ ಆಟೋ ಓಡಿಸುತ್ತಾಳೆ. ಅವಳು ತಿಂಗಳಿಗೆ ಸುಮಾರು 60,000 ರೂ. ಸಂಪಾದಿಸುತ್ತಾಳೆ. ಮತ್ತು ಮುಖ್ಯವಾಗಿ, ಅವಳು ಸಂತೋಷವಾಗಿದ್ದಾಳೆ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿ

ಈ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಅನೇಕ ಪ್ರತಿಕ್ರಿಯೆಗಳನ್ನು ಗಳಿಸಿದ್ದು, ಹಲವರು ಮಹಿಳೆಯ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಅವರ ಧೈರ್ಯಕ್ಕೆ ಮೆಚ್ಚುಗೆ ನೀಡಲೇಬೇಕು ಎಂದು ಬೆಂಬಲಿಸಿದ್ದಾರೆ. ಮತ್ತೊಬ್ಬರು "ಒತ್ತಡದ ಬದುಕಿಗಿಂತ ನೆಮ್ಮದಿಯ ಜೀವನವೇ ಲೇಸು" ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ʼʼಇದ್ರೆ ನೆಮ್ದಿಯಾರ್ಗಿಬೇಕುʼʼ ಎಂದಿದ್ದಾರೆ.