ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ; ಪ್ರಯಾಣಿಕರು ಶಾಕ್

Obscene Behaviour in Flight:ಅಮೆರಿಕದ ವಿಮಾನಯಾನದಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮುಂಭಾಗದಲ್ಲಿ ಸಂಪೂರ್ಣ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಾಳೆ. ಅಮೆರಿಕದ ಬಾಲ್ಟಿಮೋರ್‌ನಿಂದ ಮಿಯಾಮಿ ನಗರಕ್ಕೆ ಹೊರಟಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನವು ಮಿಯಾಮಿ ತಲುಪಿದ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದರು.

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್, ಸೆ. 15: ಅಮೆರಿಕದ (America) ಬಾಲ್ಟಿಮೋರ್‌ನಿಂದ ಮಿಯಾಮಿ (Miami) ನಗರಕ್ಕೆ ಹೊರಟಿದ್ದ ವಿಮಾನಯಾನವೊಂದರಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮುಂಭಾಗದಲ್ಲಿ ತನ್ನ ಬಟ್ಟೆ ಬಿಚ್ಚಿ ಸಂಪೂರ್ಣ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈ ಘಟನೆಯಿಂದ ಪ್ರಯಾಣಿಗರು ಗಲಿಬಿಲಿಗೊಂಡರು. ಮಹಿಳೆಯ ಈ ವರ್ತನೆಯಿಂದ ಆತಂಕಗೊಂಡ ವಿಮಾನದ ಸಿಬ್ಬಂದಿ ತಕ್ಷಣವೇ ಕಾಕ್‌ಪಿಟ್‌ಗೆ ಮಾಹಿತಿ ನೀಡಿ, ತುರ್ತು ರಕ್ಷಣಾ ಪಡೆಯ ನೆರವನ್ನು ಕೋರಿದರು.

ವಿಮಾನದಲ್ಲುಂಟಾದ ಈ ಗೊಂದಲವು ಎಷ್ಟೊಂದು ಗಂಭೀರವಾಗಿತ್ತೆಂದರೆ, ವಿಮಾನದ ಮುಖ್ಯ ಪರಿಚಾರಕಿ ತಕ್ಷಣವೇ ಕಾಕ್‌ಪಿಟ್ ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ. ವಿಮಾನವು ತನ್ನ ನಿಗದಿತ ಗಮ್ಯಸ್ಥಾನದ ಕಡೆಗೆ ಹಾರಾಟವನ್ನು ಮುಂದುವರಿಸುತ್ತಿರುವಾಗಲೇ, ವಿಮಾನದ ಪೈಲಟ್‌ಗಳು ಹಾಗೂ ವಿಮಾನಯಾನ ಸಂಸ್ಥೆಯ ಕಾರ್ಯಾಚರಣಾ ಕೇಂದ್ರದ ನಡುವೆ ಈ ಭದ್ರತಾ ಬಿಕ್ಕಟ್ಟಿನ ಕುರಿತು ನಿರಂತರ ವೈರ್‌ಲೆಸ್ ಸಂವಹನ ನಡೆದಿದೆ.



ಅಮೆರಿಕನ್ ಏರ್‌ಲೈನ್ಸ್‌ನ ಇಂಟಿಗ್ರೇಟೆಡ್ ಆಪರೇಷನ್ಸ್ ಸೆಂಟರ್‌ಗೆ ರವಾನಿಸಲಾದ ಎಸಿಎಆರ್‌ಎಸ್ (ACARS) ಸಂದೇಶದ ಪ್ರಕಾರ, 9ಡಿ ಸೀಟಿನಲ್ಲಿ ಕುಳಿತಿದ್ದ ಮಹಿಳೆ ತನ್ನ ಬಟ್ಟೆಗಳನ್ನು ಕಳಚಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈ ಘಟನೆಯ ಬಗ್ಗೆ ಸಿಬ್ಬಂದಿಯು ಕಾರ್ಯಾಚರಣಾ ಕೇಂದ್ರಕ್ಕೆ ಮಾಹಿತಿ ನೀಡಿ, ವಿಮಾನ ಬಂದಿಳಿದ ಕೂಡಲೇ ಕಾನೂನು ಜಾರಿ ಅಧಿಕಾರಿಗಳನ್ನು ನಿಯೋಜಿಸುವಂತೆ ಕೋರಿದರು.

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್‌ಗೆ ಸಮಸ್ಯೆ; 2ನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಇಳಿದ ಫ್ಲೈಟ್‌

ಆದರೆ ವಿಮಾನದ ಸಿಬ್ಬಂದಿಯು ಮಾರ್ಗ ಬದಲಾಯಿಸದೆ ಫ್ಲೋರಿಡಾದತ್ತ ಪ್ರಯಾಣ ಮುಂದುವರಿಸಿದರು. ವಿಮಾನವು ಮಿಯಾಮಿ ತಲುಪಿದ ಕೂಡಲೇ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದರು. ಸ್ಥಳೀಯ ಕಾಲಮಾನ ರಾತ್ರಿ ಸುಮಾರು 11:23ಕ್ಕೆ ವಿಮಾನವು ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಎನ್‍ನಲ್ಲಿರುವ ಗೇಟ್ ಡಿ2ನಲ್ಲಿ ಬಂದಿಳಿಯಿತು.

ಸೆಪ್ಟೆಂಬರ್ 11ರಂದು ಬಾಲ್ಟಿಮೋರ್‌ನಿಂದ ಮಿಯಾಮಿಗೆ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್‌ನ ಎಎ1779 ವಿಮಾನದಲ್ಲಿ ನಡೆದ ಈ ಘಟನೆ ಎಸಿಎಆರ್‌ಎಸ್ ಸಂವಹನದ ಮೂಲಕ ಬೆಳಕಿಗೆ ಬಂದಿದೆ. ವಿಮಾನದ ಸಿಬ್ಬಂದಿ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಿದರು ಮತ್ತು ಮಹಿಳೆಯ ವರ್ತನೆಗೆ ಕಾರಣವೇನು ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈ ವಿಮಾನವು 160 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಮಹಿಳೆಯ ಗುರುತು, ಈ ವರ್ತನೆಗೆ ಕಾರಣವೇನು ಅಥವಾ ಆಕೆ ವಿರುದ್ಧ ಯಾವುದೇ ಆರೋಪಗಳಿವೆಯೇ ಎಂಬುದರ ಕುರಿತು ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.